ಚಿಕ್ಕಬಳ್ಳಾಪುರ: 10 ವರ್ಷದ ಹಿಂದೆ ಕೊರೆಸಿದ್ದ ಕೊಳವೆಬಾವಿಯಲ್ಲಿ ಉಕ್ಕಿ ಹರಿದ ಜಲಧಾರೆ!

author img

By

Published : Sep 13, 2022, 12:49 PM IST

Overflowing water in a tube well

ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ಜಲಧಾರೆ ಉಕ್ಕಿ ಹರಿದಿದೆ. ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಸುಮಾರು ಸಾವಿರ ಅಡಿಗಳ ಆಳ ಕೊರೆಸಿದರೂ ನೀರು ಸಿಗದೆ ವಿಫಲವಾಗಿದ್ದ ಕೊಳವೆ ಬಾವಿಯಲ್ಲಿ 10 ವರ್ಷಗಳ ನಂತರ ನೀರು ಉಕ್ಕಿ ಗಗನಕ್ಕೆ ಚಿಮ್ಮುತ್ತಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ರೈತ ನಾಗರಾಜ್ ಎಂಬುವವರು ತಮ್ಮ ಜಮೀನಿನಲ್ಲಿ ಕಳೆದ 10 ವರ್ಷಗಳ ಕೊರಸಿದ್ದ ಕೊಳವೆ ಬಾವಿಯಲ್ಲಿ ನೀರು ಸಿಗದೆ ವಿಫಲವಾಗಿತ್ತು. ಗ್ರಾಮಸ್ಥರ ಸಲಹೆಯ ಮೇರೆಗೆ ಬೋರ್​ಗೆ ಅಳವಡಿಸಿದ್ದ ಕೇಸಿಂಗ್ ಪೈಪ್ ಕಿತ್ತು ಹಾಕದೆ, ಮುಚ್ಚಳ ಮುಚ್ಚಿ ಬಂದೋಬಸ್ತ್ ಮಾಡಿದ್ದರು.

ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ಉಕ್ಕಿ ಹರಿದ ಜಲಧಾರೆ

ಆದರೆ ಇದೀಗ ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪಂಪು, ಮೋಟಾರ್ ಇಲ್ಲದೇ ಕೇವಲ ಕೊಳವೆ ಬಾವಿಗೆ ಹಾಕಿಸಿದ್ದ ಕೇಸಿಂಗ್ ಪೈಪ್ ಮೂಲಕವೇ ನೀರು ಉಕ್ಕಿ ಹರಿಯುತ್ತಿದೆ. ದೃಶ್ಯ ನೋಡಿ ಈ ಭಾಗದ ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು, ಈ ಅಚ್ಚರಿಯಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು: ಇದಕ್ಕೆ ಸಚಿವ ಯೋಗೇಶ್ವರ್ ಕಾರಣ ಅಂತಾರೆ ಜನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.