ಪೊಲೀಸ್ ಅಧಿಕಾರಿಗಳ ಕೌರವ ನಾಟಕಕ್ಕೆ ಭಾರಿ ಮೆಚ್ಚುಗೆ

author img

By

Published : Dec 31, 2022, 1:15 PM IST

huge-appreciation-for-kaurava-play-by-police-officers

ಪೊಲೀಸರಿಂದ ಕುವೆಂಪು ವಿರಚಿತ ಕೌರವ ನಾಟಕ‌ ಪ್ರದರ್ಶನ - ಕುವೆಂಪುರವರ ಸ್ಮಶಾನ ಕುರುಕ್ಷೇತ್ರ ಆಧಾರಿತ ಕೌರವ ಡ್ರಾಮಾ - ಭಾನುಪ್ರಕಾಶ್ ನಿನಾಸಂ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ.

ಪೊಲೀಸ್ ಅಧಿಕಾರಿಗಳ ಕೌರವ ನಾಟಕಕ್ಕೆ ಭಾರೀ ಮೆಚ್ಚುಗೆ

ಚಿಕ್ಕಬಳ್ಳಾಪುರ: ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲೆಯ‌ ಗೌರಿಬಿದನೂರಿನ‌ ಎಚ್ಎನ್ ಕಲಾ ಭವನದಲ್ಲಿ ಗೌರಿಬಿದನೂರು ಆರಕ್ಷರಿಂದ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ ಆಧಾರಿತ ಕೌರವ ನಾಟಕ‌ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಖಾಕಿ ಎಂದರೇ ಕೇವಲ‌ ಶಿಸ್ತು, ಅಪರಾಧಿಗಳನ್ನು ಹಿಡಿಯುವುದು ಬಿಟ್ಟು ಬೇರೆ ಕಾಯಕ ಬರಲ್ಲ ಎಂದು ಟೀಕೆ ಮಾಡುವವರಿಗೆ ಅಭಿನಯದಲ್ಲೇ ಉತ್ತರ ಕೊಟ್ಟಿದ್ದಾರೆ.

ಗೌರಿಬಿದನೂರಿನ ಪೊಲೀಸರು ಭಾನುಪ್ರಕಾಶ್ ನಿನಾಸಂ ಅವರ ನಿರ್ದೇಶನ ಹಾಗೂ ಕೆ ವಿಶ್ವನಾಥ್ ಅಮಾಸ ಅವರ ಸಹ ನಿರ್ದೇಶನದಲ್ಲಿ ಕೌರವ ನಾಟಕ‌ ಆಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಗೌರಿಬಿದನೂರಿನ ವೃತ್ತ ನಿರೀಕ್ಷಕ ಕೆ ಪಿ ಸತ್ಯನಾರಾಯಣ ಅವರು ಕೌರವನ ಪಾತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗೌರಿಬಿದನೂರು ವೃತ್ತದ ಮೂರು ಪೊಲೀಸ್ ಠಾಣೆಗಳ ಸಿಬ್ಬಂದಿ ನಾಟಕದಲ್ಲಿ ನಟಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡರು.

ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾಜಿ‌ ಕೃಷಿ ಮಂತ್ರಿ ಶಿವಶಂಕರ್ ರೆಡ್ಡಿ‌‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕೊನೆಯವರೆಗೆ ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಸಿದ್ಧತೆ: ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್ ಟೆರೇಸ್​ಗಳಿಗೆ ನೋ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.