ಚಿಕ್ಕಬಳ್ಳಾಪುರ: ಕೃಷಿ ವಿವಿಯಿಂದ ಎರಡು ಗೋಲ್ಡ್​ ಮೆಡಲ್​ ಪಡೆದು ಮಿಂಚಿದ ರೈತನ ಮಗಳು

author img

By

Published : Sep 25, 2021, 9:57 AM IST

ಚಿನ್ನದ ಪದಕ ಪಡೆದ ಗುಡಿಬಂಡೆಯ ವಿದ್ಯಾರ್ಥಿನಿ

ಪ್ಲಾಂಟ್ ಬಯೋಕೆಮಿಸ್ಟ್ರಿ ಅಧ್ಯಯನದಲ್ಲಿ ಎರಡು ಚಿನ್ನದ ಪದಕ ಪಡೆಯುವ ಮೂಲಕ ಗುಡಿಬಂಡೆಯ ವಿದ್ಯಾರ್ಥಿನಿವೋರ್ವಳು ಅದ್ಭುತ ಸಾಧನೆ ಮಾಡಿ, ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ/ಗುಡಿಬಂಡೆ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಆದ ಗುಡಿಬಂಡೆ ಇತ್ತೀಚಿನ ದಿನಗಳಲ್ಲಿ ಸಾಧಕರ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡು ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತಿದೆ.

ಹೌದು, ಗುಡಿಬಂಡೆ ಪಟ್ಟಣದ ಅಶ್ವತ್ಥಪ್ಪ-ಲಕ್ಷ್ಮೀ ದಂಪತಿ ಮಗಳಾದ ಜಿ.ಎ. ನಂದಿನಿ ಅದ್ಭುತ ಸಾಧನೆ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಅಶ್ವತ್ಥಪ್ಪ ಕೃಷಿಕರಾಗಿದ್ದು, ಮಗಳ ಸಾಧನೆ ಕಂಡು ಪುಳಕಿತರಾಗಿದ್ದಾರೆ.

Plant Biochemistry
ಪ್ರಶಸ್ತಿ

ನಂದಿನಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಾಲೂಕಿನ ಸರ್ಕಾರಿ ಶಾಲೆಯಲ್ಲಿಯೇ ಪೂರೈಸಿದ್ದು, ಬಿಎಸ್​ಸಿ ಅಗ್ರಿಕಲ್ಚರ್ ವಿದ್ಯಾಭ್ಯಾಸವನ್ನು ಹಾಸನದ ಕೃಷಿ ವಿಶ್ವವಿದ್ಯಾಲಯದಲ್ಲಿ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಪಡೆದುಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ಉನ್ನತ ಶಿಕ್ಷಣಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (GKVK) ಸೇರ್ಪಡೆಯಾಗಿ ಪ್ಲಾಂಟ್ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಗುಡಿಬಂಡೆಗೂ ಕೀರ್ತಿ ತಂದಿದ್ದಾರೆ.

ಜಿ.ಎ.ನಂದಿನಿ
ಜಿ.ಎ.ನಂದಿನಿ

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನಂದಿನಿ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಯುಎಸ್ಎ ಗೋಲ್ಡ್ ಮೆಡಲ್ ಫಾರ್ ಜನರಲ್ ಮೆರಿಟ್ ಮತ್ತು ಡಾ.ಎಲ್. ಸುದರ್ಶನ ಗೋಲ್ಡ್ ಮೆಡಲ್ ಎಂಬ ಎರಡು ಚಿನ್ನದ ಪದಕ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.