ಚಿಕ್ಕಬಳ್ಳಾಪುರದಲ್ಲಿ ಕಂಬಳಿ ಹುಳುಗಳ ಕಾಟ.. ಕಂಗಾಲಾದ ರೈತ

author img

By

Published : Sep 1, 2022, 7:46 PM IST

ಕಂಬಳಿ ಹುಳುಗಳ ಕಾಟ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಂಬಳಿ ಹುಳುಗಳ ಕಾಟ ಹೆಚ್ಚಾಗಿದೆ. ಪರಿಣಾಮ ರೈತ ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಕೀಟಬಾಧೆ (ಕಂಬಳಿ ಹುಳುಗಳ) ಕಂಟಕದಿಂದ ರೈತ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಪರಿಣಾಮ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮದ ರೈತ ಧನಂಜಯ 2 ಎಕರೆ ಸೂರ್ಯಕಾಂತಿ, 1 ಎಕರೆ ಬೀನ್ಸ್​, ಜೋಳ ಹಾಗೂ ರಾಗಿ ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆಗೆ ಕಂಬಳಿ ಹುಳುಗಳು ದಾಳಿ ನಡೆಸಿ ನಾಶಮಾಡಿವೆ.

ಕಳೆದೊಂದು ತಿಂಗಳಿನಿಂದ ತಾಲೂಕಿನಾದ್ಯಂತ ಮಳೆ ಅಬ್ಬರಿಸುತ್ತಿದೆ. ಹೀಗಾಗಿ, ರೈತ ಸಂಗ್ರಹಿಸಿಟ್ಟಿದ್ದ ಬೆಳೆ ನೀರುಪಾಲು ಆಗಿತ್ತು. ಇದರ ನಡುವೆ ಕಂಬಳಿ ಹುಳುಗಳ ಬಾಧೆ ಹೆಚ್ಚಾಗಿದೆ. ಹೀಗಾಗಿ ಅನ್ನದಾತನಿಗೆ ದಿಕ್ಕು ತೋಚದಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ : ತಾಲೂಕಿನಲ್ಲಿ ಇತ್ತೀಚಿಗೆ ಕೀಟ ಬಾಧೆ ಹೆಚ್ಚಾಗಿದ್ದು, ಅನೇಕ‌ ಬಾರಿ ಕೀಟನಾಶಕದ ಬಗ್ಗೆ ಮಾಹಿತಿ ಕೊಡುವಂತೆ ಹಾಗೂ ಕೀಟಗಳನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಏನೂ ಪ್ರಯೋಜನ ಆಗುತ್ತಿಲ್ಲ ಎಂದು ಹೇಳುತ್ತಾರೆ ರೈತ ಧನಂಜಯ್​.

ಕಂಬಳಿ ಹುಳುಗಳ ಕಾಟದ ಬಗ್ಗೆ ರೈತ ಧನಂಜಯ್ ಮಾತನಾಡಿರುವುದು

ಹೆಚ್ಚು ಬೆಳೆ ನಾಶ : ತಾಲೂಕಿನಾದ್ಯಂತ ಕೀಟಗಳ ಹಾವಳಿ ಹೆಚ್ಚಾಗಿದೆ. ಸೂರ್ಯಕಾಂತಿ, ಬೀನ್ಸ್​, ಆಲೂಗೆಡ್ಡೆ ಸೇರಿ ಇತರೆ ಬೆಳೆಗಳ ಮೇಲೂ ಕೀಟಗಳು ದಾಳಿ ಮಾಡಿವೆ. ಇದರಿಂದ ಬೆಳೆಗಳು ನಾಶವಾಗಿವೆ. ಹೀಗಾಗಿ, ರೈತ ಧನಂಜಯ್​ ಸರ್ಕಾರದ ಸಹಾಯ ಧನಕ್ಕಾಗಿ ಕಾಯುತ್ತಿದ್ದಾರೆ.

ಪರಿಹಾರಕ್ಕಾಗಿ ಮನವಿ: ಸೂರ್ಯಕಾಂತಿ ಬೆಳೆಗೆ ಉತ್ತಮ ಬೆಲೆಯಿದೆ. ಇನ್ನೇನು ಫಸಲು ಕೈಗೆ ಬರುವಷ್ಟರಲ್ಲಿ ಕಂಬಳಿ ಹುಳು ದಾಳಿ ಮಾಡಿ ಬೆಳೆಯ ಎಲೆಗಳನ್ನು ಪೂರ್ಣವಾಗಿ ತಿಂದುಹಾಕಿವೆ. ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ಈಗ ಬೆಳೆ ನಾಶವಾಗಿರುವುದರಿಂದ ನಾನು ಸಂಪೂರ್ಣ ನಷ್ಟ ಅನುಭವಿಸುತ್ತಿದ್ದೇನೆ. ಸರ್ಕಾರ ಇನ್ನಾದರೂ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಓದಿ: ರೈತರಿಗೆ ಇರುವ ಸರ್ಕಾರದ ಯೋಜನೆಗಳಿವು: ನೀವೂ ಉಪಯೋಗ ಪಡೆದುಕೊಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.