ವಿಕೆಟ್ ಮತ್ತು ಬ್ಯಾಟ್ ನಿಂದ ಹೊಡೆದು ವ್ಯಕ್ತಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ

ವಿಕೆಟ್ ಮತ್ತು ಬ್ಯಾಟ್ ನಿಂದ ಹೊಡೆದು ವ್ಯಕ್ತಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ
ಬ್ಯಾಟ್ ಮತ್ತು ವಿಕೆಟ್ನಿಂದ ಹೊಡೆದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ: ಆಗಸ್ಟ್ 2ರಂದು ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂತಿರುಗಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬ್ಯಾಟ್ ಮತ್ತು ವಿಕೆಟ್ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಆಧಗಾನಹಳ್ಳಿ ಕ್ರಾಸ್ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀನಿವಾಸ್ ಎಂಬುವರು ಹತ್ಯೆಯಾದ ವ್ಯಕ್ತಿ. ನವೀನ್ (23), ವೆಂಕಟರಾಮು(19) ಪ್ರಕರಣದ ಆರೋಪಿಗಳು. ಶ್ರೀನಿವಾಸ್ ಪತ್ನಿ ನವೀನ್ ಎಂಬುವವನ ಜೊತೆ ಸಲುಗೆಯಿಂದ ಇರುವ ಕಾರಣ ಅನುಮಾನಗೊಂಡ ಶ್ರೀನಿವಾಸ್ ನವೀನ್ ಜೊತೆ ಜಗಳವಾಡಿರುತ್ತಾರೆ.
ಇದರಿಂದ ಕೆರಳಿದ ನವೀನ್ ತನ್ನ ಸ್ನೇಹಿತ ವೆಂಕಟರಾಮು ಜೊತೆ ಸೇರಿ ಬಾಗೇಪಲ್ಲಿಯ ಟೋಲ್ ಪ್ಲಾಜಾ ಬಳಿ ರಾತ್ರಿ ಕೆಲಸ ಹೋಗುತ್ತಿದ್ದ ವೇಳೆ ಶ್ರೀನಿವಾಸ್ನನ್ನು ಅಡ್ಡಗಟ್ಟಿ ವಿಕೆಟ್ ಮತ್ತು ಬ್ಯಾಟ್ನಲ್ಲಿ ಹೊಡೆದು ಕೊಲೆ ಮಾಡಿದ್ದಾರೆ.
ಘಟನೆ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾದ 24 ಗಂಟೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧದ ಶಂಕೆ: ಪತ್ನಿ - ಮಗಳ ಶಿರಚ್ಛೇದ ಮಾಡಿದ ಪಾಪಿ
