ಚಾಮರಾಜನಗರದಲ್ಲಿ ಮಳೆಗೆ ಇಬ್ಬರು ಬಲಿ: ಸಿಡಿಲು ಬಡಿದು ರೈತ, ಕುರಿಗಾಹಿ ಸಾವು

author img

By

Published : Sep 6, 2022, 7:19 PM IST

Updated : Sep 6, 2022, 8:10 PM IST

ಚಾಮರಾಜನಗರ

ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರದ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ: ಮಹಾಮಳೆಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇಂದು ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ ಜಿಲ್ಲೆಯಲ್ಲಿ ಮಳೆಗೆ ಮೂವರು ಸಾವನ್ನಪ್ಪಿದಂತಾಗಿದೆ. ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರೇವಣ್ಣ (46) ಮೃತ ರೈತ. ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಅವರು ಸಾವನ್ನಪ್ಪಿದ್ದಾರೆ. ತಕ್ಷಣ ಯಳಂದೂರು ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ‌‌.

ಇನ್ನೊಂದು ಪ್ರಕರಣದಲ್ಲಿ ಹನೂರು ತಾಲೂಕಿನ ಮಿಣ್ಯಂ ಗ್ರಾಮದ ತೋಟದಲ್ಲಿದ್ದ ಮಾದಪ್ಪ (64) ಸಿಡಿಲಿನ ಬಡಿತಕ್ಕೆ ಮೃತಪಟ್ಟಿರುವ ದುರ್ದೈವಿ. ಈತ ತೋಟದ ಮನೆಯಲ್ಲಿ ವಾಸವಿದ್ದು, ಎಂದಿನಂತೆ ಕುರಿ ಕಾಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಮಾದಪ್ಪ ಹಾಗೂ 6 ಕುರಿಗಳು ಸಾವನ್ನಪ್ಪಿವೆ. ಸೂಕ್ತ ಪರಿಹಾರ ಒದಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಕಾಳಜಿ ಕೇಂದ್ರದಲ್ಲಿ ಊಟ ಸವಿದ ಡಿಸಿ: ನೆರೆಯಿಂದಾಗಿ ನಲುಗಿದ ಯಳಂದೂರು, ಕೊಳ್ಳೇಗಾಲ ತಾಲೂಕಿನ ಗ್ರಾಮಗಳಲ್ಲಿ ಕಾಳಜಿ ಕೇಂದ್ರಕ್ಕೆ ತೆರಳಿದ್ದು, ಎಲ್ಲಾ ಕಾಳಜಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದರು.

ಮೊದಲಿಗೆ ಯಳಂದೂರು ತಾಲೂಕಿನ ಕೃಷ್ಣಾಪುರದಲ್ಲಿರುವ ಕಾಳಜಿ‌ ಕೇಂದ್ರಕ್ಕೆ ತೆರಳಿ ಸಂತ್ರಸ್ತರೊಟ್ಟಿಗೆ ಊಟ ಸವಿದರು. ಬಳಿಕ ಮಾಂಬಳ್ಳಿ, ಕೊಳ್ಳೇಗಾಲ ಕಾಳಜಿ ಕೇಂದ್ರಗಳಿಗೆ ಭೇಟಿಕೊಟ್ಟು ಜನರ ಅಹವಾಲನ್ನು ಆಲಿಸಿದ್ದಾರೆ. ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಓದಿ: ಕೋಲಾರ: ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳಗಳು, ಗ್ರಾಮಸ್ಥರಿಂದ ರಸ್ತೆ ಬಂದ್​!

Last Updated :Sep 6, 2022, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.