ಚಾಮರಾಜನಗರ ಜಿಲ್ಲಾಡಳಿತ ಆದೇಶಕ್ಕೆ ಸೆಡ್ಡು: ಮೆರವಣಿಗೆ ಮೂಲಕ ಗಣಪನ ನಿಮಜ್ಜನ

author img

By

Published : Oct 14, 2021, 2:20 PM IST

public-decided-to-take-out-procession-to-dissolve-ganapa-idol

ಗಣಪತಿ ನಿಮಜ್ಜನ ವೇಳೆ ಮೆರವಣಿಗೆಗೆ ಅವಕಾಶ ನೀಡಿದ ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದು ನ.1ರಂದು ಗಣಪತಿ ನಿಮಜ್ಜನಕ್ಕೆ ಮುಂದಾಗಿದ್ದಾರೆ. ಜೊತೆಗೆ ಜಿಲ್ಲಾಡಳಿತ ಆದೇಶದ ವಿರುದ್ಧ ಗಣಪತಿ ಮಂಡಳಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಚಾಮರಾಜನಗರ: ಕೊರೊನಾ ಹಿನ್ನೆಲೆಯಲ್ಲಿ ಗಣಪತಿ ನಿಮಜ್ಜನವನ್ನು ಸರಳವಾಗಿ ನೆರವೇರಿಸುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಆದರೆ ಈ ನಿಯಮದ ವಿರುದ್ಧ ನ.1ರಂದು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ನಿಮಜ್ಜನಕ್ಕೆ ಮಂಡಳಿ ನಿರ್ಧರಿಸಿದೆ.

ಈ ಮೊದಲು ಮರವಣಿಗೆ ನಡೆಸಲು ಅನುಮತಿ ನಿರಾಕರಿಸಿದ್ದರಿಂದ ನಿಮಜ್ಜನ ಮುಂದೂಡಲಾಗಿತ್ತು. ಇದೀಗ ಮತ್ತೆ ನ.1 ರಂದು ಮೆರವಣಿಗೆ ಮೂಲಕವೇ ಗಣಪತಿ ನಿಮಜ್ಜನ ಮಾಡುವುದಾಗಿ ಗಣಪತಿ ಮಂಡಳಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣಪತಿ ಮಂಡಲಿ ಅಧ್ಯಕ್ಷ ಚಿಕ್ಕರಾಜು, ಚಾಮರಾಜನಗರದ ರಥಬೀದಿಯಲ್ಲಿ‌ ಕೂರಿಸಿರುವ 'ಭೂರಕ್ಷ ಗಣಪತಿ'ಯನ್ನು ನಗರಾದ್ಯಂತ ಮೆರವಣಿಗೆ ಮಾಡಿ ಮನೆಗೊಬ್ಬರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು. ಇದುವರೆಗೆ ಅನುಮತಿ ಕೇಳಿಲ್ಲ, ಆದರೆ ಮೆರವಣಿಗೆ ಮಾಡಿಯೇ ಗಣಪತಿಯನ್ನು ನಿಮಜ್ಜನ ಮಾಡುತ್ತೇವೆ. ದಸರಾ ಕಾರ್ಯಕ್ರಮ ನಡೆಸಲು, ರಾಷ್ಟ್ರಪತಿ ಕಾರ್ಯಕ್ರಮ ನಡೆಸಲು ಕೊರೊನಾ ಅಡ್ಡಿಯಾಗಿಲ್ಲ. ಅಲ್ಲೆಲ್ಲಾ ಸಾವಿರಾರು ಮಂದಿ ಸೇರಿದ್ದರಲ್ಲಾ? ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸವಾರಿ ತೊಟ್ಟಿಯಲ್ಲಿ ಯದುವೀರ್​ರಿಂದ ಸಾಂಪ್ರದಾಯಿಕ ಆಯುಧ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.