ಸೂಕ್ತ ಕೆಲಸ ಸಿಕ್ಕಿಲ್ಲ ಎಂದು ಕೊಳ್ಳೇಗಾಲದಲ್ಲಿ M. Com ಪದವೀಧರ ಆತ್ಮಹತ್ಯೆ

ಸೂಕ್ತ ಕೆಲಸ ಸಿಕ್ಕಿಲ್ಲ ಎಂದು ಕೊಳ್ಳೇಗಾಲದಲ್ಲಿ M. Com ಪದವೀಧರ ಆತ್ಮಹತ್ಯೆ
ಓದಿಗೆ ತಕ್ಕಂತೆ ಸೂಕ್ತ ಕೆಲಸ ದೊರೆಯದೇ ಹಿನ್ನೆಲೆ ಮನನೊಂದು M. Com ಪದವೀಧರನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಕೊಳ್ಳೇಗಾಲ(ಚಾಮರಾಜನಗರ): ಓದಿಗೆ ತಕ್ಕಂತೆ ಸೂಕ್ತ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದ ಯುವಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮಳವಳ್ಳಿ ತಾಲೂಕಿನ ಗಾಜನೂರು ಗ್ರಾಮದ ಬಚ್ಚೇಗೌಡ ಎಂಬುವರ ಮಗನಾದ ಬಸವರಾಜು (26) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸ್ನಾತಕೋತ್ತರ ಪದವಿಧರ. ಮೃತ ಯುವಕ ತನ್ನ ಅಜ್ಜಿ ಊರಾದ ಚೆನ್ನಿಪುರದೊಡ್ಡಿಯಲ್ಲಿ ವಾಸವಿದ್ದ. ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿಯಿರುವ ಪ್ರಾವಿಷನ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ.
ನಾಗರಾಜು M. Com ಸ್ನಾತಕೋತ್ತರ ಪದವಿ ಪಡೆದಿದ್ದರು. ಓದಿಗೆ ತಕ್ಕಂತೆ ಕೆಲಸ ಸಿಗದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಎನ್ನಲಾಗ್ತಿದೆ. ಈ ಹಿನ್ನೆಲೆ ''ನ.21 ರಂದು ರಾತ್ರಿ 9 ಗಂಟೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದರೂ ದುರಾದೃಷ್ಟವಶಾತ್ ನ. 22 ರಂದು ಚಿಕಿತ್ಸೆ ಫಲಕಾರಿಯಾಗದೆ ನನ್ನ ತಮ್ಮ ಸಾವನ್ನಪ್ಪಿದ್ದಾನೆ'' ಎಂದು ಚೆಲುವರಾಜ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ಗಂಡನ ಮನೆಯವರ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಶರಣಾದ 21ರ ವಿವಾಹಿತೆ
