ಚಾಮರಾಜನಗರದ ಚರ್ಚ್​ನಲ್ಲಿ ಕ್ರೈಸ್ತರಿಂದ ಆಯುಧ ಪೂಜೆ ಆಚರಣೆ.. ಏಸುವಿನ ಸ್ಮರಣೆ

author img

By

Published : Oct 4, 2022, 12:18 PM IST

Updated : Oct 4, 2022, 5:35 PM IST

christians-ayudha-puja-celebration-in-church

ಚಾಮರಾಜನಗರದ ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಕ್ರೈಸ್ತ ಸಮುದಾಯದಿಂದ ಆಯುಧ ಪೂಜೆ ಆಚರಿಸಲಾಯಿತು.

ಚಾಮರಾಜನಗರ: ಪವಿತ್ರ ಹಬ್ಬವಾದ ದಸರಾದಲ್ಲಿ ಹಿಂದೂಗಳು ಆಯುಧ ಪೂಜೆ ಮಾಡುವುದು ಸಂಪ್ರದಾಯ. ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರೂ ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಆಯುಧ ಪೂಜೆಯನ್ನು ಆಚರಿಸಿ ಗಮನ ಸೆಳೆದರು.

ಚರ್ಚ್​ನ ಪಾದ್ರಿಗಳಾದ ಕ್ರಿಸ್ಟೋಫರ್ ಸಗಾಯರಾಜ್ ಮತ್ತು ಸೂಸೈ ರೆಜೀಸ್ ಅವರು ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಅಪಘಾತಗಳಿಂದ ಪಾರು ಮಾಡು ರಕ್ಷಕ ಏಸು ಎಂದು ಪ್ರಾರ್ಥಿಸಲಾಯಿತು‌.

ಚಾಮರಾಜನಗರದ ಚರ್ಚ್​ನಲ್ಲಿ ಕ್ರೈಸ್ತರಿಂದ ಆಯುಧ ಪೂಜೆ ಆಚರಣೆ

ಈ ಹಿಂದೆ ತಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಆ ಸಂಪ್ರದಾಯ ಬಿಡಬಾರದೆಂದು ನಾವು ಆಯುಧ ಪೂಜೆ ಮಾಡಿದ್ದೇವೆ. ಎಲ್ಲಾ ಸಮುದಾಯದ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಾನ್ ಬ್ರಿಟೋ ತಿಳಿಸಿದರು.

ಓದಿ: ಮಂಜಿನ ನಗರಿ ಮಡಿಕೇರಿ ದಸರಾ ವೈಭವ.. ನಾಡಹಬ್ಬ ನಡೆದು ಬಂದ ಹಾದಿ

Last Updated :Oct 4, 2022, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.