ಎರಡನೇ ದಿನದ ಭಾರತ್ ಜೋಡೋ ಪಾದಯಾತ್ರೆ ಆರಂಭ: ರಾಹುಲ್ ಜೊತೆ ಸಿದ್ದರಾಮಯ್ಯ, ಡಿಕೆಶಿ ನಡಿಗೆ

author img

By

Published : Oct 1, 2022, 8:21 AM IST

ಭಾರತ್ ಜೋಡೋ ಪಾದಯಾತ್ರೆ

ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆ ತೊಂಡವಾಡಿ ಗೇಟಿನಿಂದ ಆರಂಭವಾಗಿದೆ. ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಎರಡನೇ ಕಾಲಿಟ್ಟಿದೆ. ಸುಮಾರು 7.40ಕ್ಕೆ ಜಿಲ್ಲೆಯ ತೊಂಡವಾಡಿ ಗೇಟಿನಿಂದ ಪಾದಯಾತ್ರೆ ಆರಂಭಗೊಂಡಿದ್ದು, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿದಂತೆ ಹಲವು ಕಾರ್ಯಕರ್ತರು ಹೆಜ್ಜೆ ಹಾಕುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಮೊದಲ ದಿನವಾದ ಶುಕ್ರವಾರ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಕ್ಯಾಂಟರ್ ಹೌಸ್​​ನಲ್ಲಿ ರಾಹುಲ್ ಗಾಂಧಿ ತಂಗಿದ್ದರು‌. ಇಂದು ತೊಂಡವಾಡಿ ಗೇಟ್​​ನಿಂದ ನಡಿಗೆ ಆರಂಭಿಸಿದ ಕಾಂಗ್ರೆಸ್ ನಾಯಕರು ಕೆಲವೇ ತಾಸಿನಲ್ಲಿ ಚಾಮರಾಜನಗರದಿಂದ ಮೈಸೂರು ಜಿಲ್ಲೆಗೆ ಯಾತ್ರೆ ಆಗಮಿಸಲಿದೆ.

(ಓದಿ: ಆಕ್ಸಿಜನ್​ ದುರಂತ: ಅಪ್ಪನ ನೆನೆದು ಭಾವುಕಳಾದ ಬಾಲಕಿ.. ಕಂದನ ಮಾತಿಗೆ ಕಣ್ಣೀರಿಟ್ಟ ಜನ)

ಬೆಳಿಗ್ಗೆ ಸುಮಾರು 15 ಕಿಮೀ ಪಾದಯಾತ್ರೆ ನಡೆಸಿ ಸಂಜೆ 4 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರಕ್ಕೆ ಯಾತ್ರೆ ತಲುಪಲಿದ್ದು,
ತಾಂಡವಪುರದ ಎಂಐಟಿ ಕಾಲೇಜು ಎದುರು ರಾಹುಲ್ ವಾಸ್ತವ್ಯ ಹೂಡಲಿದ್ದಾರೆ.

(ಓದಿ: ಮೈಸೂರಿನತ್ತ ಭಾರತ್ ಜೋಡೋ ಪಾದಯಾತ್ರೆ: ರಾಹುಲ್, ಸಿದ್ದರಾಮಯ್ಯ, ಡಿಕೆಶಿ ಭಾಗಿ LIVE)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.