ಮನೆ ಹುಡುಕುವವರ ಚಿಂತೆ ದೂರಾಗಿಸಿದ ಕೋಲಾರ ಹುಡುಗ್ರು... ಬೆಂಗಳೂರಿಗರಿಗೆ ವರವಾಯ್ತು ಸಿಂಪ್ಲಿ ಗೆಸ್ಟ್

author img

By

Published : May 26, 2019, 12:15 PM IST

Updated : May 26, 2019, 3:54 PM IST

ಬೆಂಗಳೂರಿಗೆ ಹೊಸತಾಗಿ ಬರೋರಿಗೆ ನಗರದಲ್ಲಿ ಮನೆ ಬಾಡಿಗೆಗೆ ಪಡೆಯೋದೇ ದೊಡ್ಡ ಕೆಲಸ. ಅದರಲ್ಲೂ ಯುವತಿಯರಿಗಂತೂ ಅಲ್ಲಿ ಸೇಫ್ಟಿಯದ್ದೇ ಚಿಂತೆ. ಸದ್ಯ ಈ ಸಮಸ್ಯೆಗೆ ಮೂವರು ಉತ್ಸಾಹಿ ಯುವಕರ ತಂಡವೊಂದು ಪರಿಹಾರ ಕಂಡುಕೊಂಡಿದ್ದಾರೆ.

ಹೈದರಾಬಾದ್​: ಕೆಲಸ ಹುಡುಕಿಕೊಂಡು ದಿನಕ್ಕೆ ಅದೆಷ್ಟೋ ಮಂದಿ ಸಿಲಿಕಾನ್​ ಸಿಟಿ ಕಡೆಗೆ ಬರುತ್ತಿದ್ದಾರೆ. ಹೀಗೆ ಬರುವ ಉದ್ಯೋಗಾಕಾಂಕ್ಷಿಗಳು ಉಳಿಯಲು ನೆಲೆ ಹುಡುಕುತ್ತಾರೆ. ಎಷ್ಟೋ ದುಡ್ಡು ಕೊಟ್ಟು ಬಿಡೋಣ ಜಾಗ ಸಿಕ್ರೆ ಸಾಕು ಎನ್ನುವ ಮನಸ್ಥಿತಿ ಅವರದ್ದು.

ಇದನ್ನೇ ಬಂಡವಾಳವಾಗಿಸಿಕೊಳ್ಳುವ ರಿಯಲ್​ ಎಸ್ಟೇಟ್​ ಡೀಲರ್​ಗಳು ಕಮಿಷನ್​ ಆಸೆಗೆ ಮೋಸ ಮಾಡುವ ವರದಿಗಳಾಗಿವೆ. ತಾವಿರುವ ಜಾಗ ಎಂಥದ್ದು, ಅವರ ಮನಸ್ಥಿತಿಗಳೇನೋ, ಅಲ್ಲ ತಾವು ಸೇಫಾಗಿದ್ದೀವಾ ಇಷ್ಟೆಲ್ಲ ಯೋಚನೆಗಳ ಮಧ್ಯೆಯೇ ಅನಿವಾರ್ಯವಾಗಿ ಜೀವನ ಮಾಡಬೇಕು.

ಕೋಲಾರ ಮೂಲದ ಉತ್ಸಾಹಿ ಯುವಕರಾದ ಸುಬ್ಬು ಅತ್ತಿಕುಂಟೆ, ಅಂಬರೀಶ್​ ಅತ್ತಿಕುಂಟೆ, ಚಿಕ್ಕಬಳ್ಳಾಪುರ ಮೂಲದ ಭಾನುಪ್ರಿಯಾ, ರಾಜಸ್ಥಾನ ಮೂಲದ ಮಾಯಾಂಕ್​ ಅವರು ಶುರುಮಾಡಿರುವ ಸಿಂಪ್ಲಿ ಗೆಸ್ಟ್​ ಹೆಸರಿನ ಸ್ಟಾರ್ಟ್​ಅಪ್​ (ನವೋದ್ಯಮ) ಇಂಥ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ.

simply guest
ಮನೆ ಹುಡುಕುವವರ ಚಿಂತೆ ದೂರಾಗಿಸಿದ ಕೋಲಾರ ಹುಡುಗ್ರು

ಒಂದು ಬೆಡ್, ಒಂದು ಮನೆ, ಫ್ಲಾಟ್​, ವಿಲಾ ಹೀಗೆ ಹಲವು ಬಗೆಯ ಪ್ರಾಪರ್ಟಿಗಳನ್ನು ಸಿಂಪ್ಲಿ ಗೆಸ್ಟ್​ ಪೂರೈಸುತ್ತದೆ. ಉದ್ಯೋಗಕ್ಕಾಗಿ ಬರುವ ಬೇರೆ ರಾಜ್ಯದ ಯುವಕ, ಯುವತಿಯರು ತಮಗೆ ಅನುಕೂಲಕ್ಕೆ ತಕ್ಕಂತೆ ಬಾಡಿಗೆಗೆ ಪಡೆಯಬಹುದಾಗಿದೆ.

ಟಿವಿ, ಫ್ಯಾನ್​, ಸೋಫಾ, ಫ್ರಿಡ್ಜ್​, ಕಬೋರ್ಡ್​, ಕಿಚನ್​ ಸೇರಿದಂತೆ ನಿತ್ಯ ಬೇಕಾಗುವ ಎಲ್ಲ ಸೌಲಭ್ಯಗಳು ಸಿಂಪ್ಲಿ ಗೆಸ್ಟ್​ ಪೂರೈಸುವ ಮನೆಗಳಲ್ಲಿರುತ್ತದೆ. ಮನೆ ಕೆಲಸಗಾರರನ್ನೂ ಸಂಸ್ಥೆಯೇ ಪೂರೈಸುತ್ತದೆ. ಬೇಕಿದ್ದರೆ ಅಡುಗೆ ಭಟ್ಟರನ್ನು ಬುಕ್​ ಮಾಡಹಬುದು.

ಮನೆ ಮಾಲಿಕರಿಗಿಲ್ಲ ಪ್ರಶ್ನಿಸುವ ಅವಕಾಶ...

ಮನೆ ಬಾಡಿಗೆ ಕೊಡುವ ಮಾಲೀಕರು ಪ್ರತೀ ವಿಷಯಕ್ಕೂ ಬಾಡಿಗೆದಾರರನ್ನು ಪ್ರಶ್ನಿಸುತ್ತಾರೆ ಎಂಬುದು ಬಹುತೇಕರ ಸಮಸ್ಯೆ. ಆದ್ರೆ, ಸಿಂಪ್ಲಿ ಗೆಸ್ಟ್​ ಪ್ರಾಪರ್ಟಿಗಳಲ್ಲಿ ಮನೆ ಮಾಲೀಕರ ಮಧ್ಯಪ್ರವೇಶ ತಡೆಯುವ ಒಂದು ಆಯ್ಕೆ ಲಭ್ಯವಿದೆ.

simply guest
ಬೆಂಗಳೂರಿಗರಿಗೆ ವರವಾಯ್ತು ಸಿಂಪ್ಲಿ ಗೆಸ್ಟ್

ಕೇಟರಿಂಗ್​ ಕೂಡ ಲಭ್ಯ...

ಸಿಂಪ್ಲಿ ಗೆಸ್ಟ್ ಸಂಸ್ಥೆಯು ಹಲವು ಕೇಟರಿಂಗ್​ ಏಜೆನ್ಸಿಗಳ ಜೊತೆ ಟೈ ಅಪ್​ ಮಾಡಿಕೊಂಡಿದ್ದು, ಊಟ ಬೇಕಿದ್ದರೆ ಬುಕ್ ಮಾಡಬಹುದು.

ಇಲ್ಲಿ ಎಲ್ಲವೂ ಶೇರಿಂಗ್​...

ನಿಮ್ಮ ಫ್ಲ್ಯಾಟ್​ ಮೇಟ್​ ಜೊತೆ ನೀವು ಒಂದು ಸಿನಿಮಾಗೆ ಹೋದ್ರೆ, ಅಥವಾ ಎಲ್ಲಾದರೂ ಊಟ ಮಾಡಿದರೆ ಅದನ್ನು ನಿಮ್ಮ ಖಾತೆಯಲ್ಲಿ ಆ್ಯಡ್​ ಮಾಡಬೇಕು. ಅದಕ್ಕೆ ಖರ್ಚಾದ ಹಣ ಎಷ್ಟು ಮಂದಿ ಇರುತ್ತಾರೋ ಅಷ್ಟು ಪಾಲಾಗಿ ಬಾಡಿಗೆ ಜೊತೆಯಲ್ಲೇ ಕಟ್ಟಬಹುದು.

ಐಡಿಯಾ ಬಂದದ್ದು ಹೇಗೆ?

ಬೆಂಗಳೂರಿನಲ್ಲಿ ಮನೆ ಬಾಡಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಈ ತಂಡವು ಅದಕ್ಕೆ ಅನುಗುಣವಾಗಿ ಎರಡು ಉದ್ಯಮಗಳನ್ನು ಆರಂಭಿಸಿದರು. ಆದರೆ ಅವು ಫಲ ಕೊಡಲಿಲ್ಲ. ಹೇಗೂ ಇದೇ ಉದ್ಯಮದಲ್ಲಿ ತೊಡಗಿಕೊಂಡಿದ್ದರಿಂದ ಸಿಂಪ್ಲಿಗೆಸ್ಟ್​ ಸಂಸ್ಥೆ ಆರಂಭಿಸಿದರು.

ಯುವತಿಯರಿಗೆ ಸೇಫ್​...

ಬೇರೆ ರಾಜ್ಯದ ಯುವತಿಯರು ಬೆಂಗಳೂರಿಗೆ ಬಂದ ಮೇಲೆ ಮೊದಲ ನೋಡುವುದು ತಮ್ಮ ಸೇಫ್ಟಿ. ಸಿಂಪ್ಲಿಗೆಸ್ಟ್​ ಇವರಿಗಾಗೆಂದೇ ಕೆಲವು ಸೇವೆಗಳನ್ನು ನೀಡುತ್ತಿದ್ದು. ಬಳಕೆದಾರ ಹೆಣ್ಣುಮಕ್ಕಳು ಜಾಲತಾಣಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಪರ್ಕಕ್ಕೆ: 9663057700, 7676401002 .ವೆಬ್​ ವಿಳಾಸ: http://simplyguest.com

Intro:Body:

ಮನೆ ಹುಡುಕುವವರ ಚಿಂತೆ ದೂರಾಗಿಸಿದ ಕೋಲಾರ ಹುಡುಗ್ರು... ಬೆಂಗಳೂರಿಗರಿಗೆ ವರವಾಯ್ತು ಸಿಂಪ್ಲಿ ಗೆಸ್ಟ್



ಹೈದರಾಬಾದ್​: ಕೆಲಸ ಹುಡುಕಿಕೊಂಡು ದಿನಕ್ಕೆ ಅದೆಷ್ಟೋ ಮಂದಿ ಸಿಲಿಕಾನ್​ ಸಿಟಿ ಕಡೆಗೆ ಬರುತ್ತಿದ್ದಾರೆ. ಹೀಗೆ ಬರುವ ಉದ್ಯೋಗಾಕಾಂಕ್ಷಿಗಳು ಉಳಿಯಲು ನೆಲೆ ಹುಡುಕುತ್ತಾರೆ. ಎಷ್ಟೋ ದುಡ್ಡು ಕೊಟ್ಟಿಬಿಡೋಣ ಜಾಗ ಸಿಕ್ರೆ ಸಾಕು ಎನ್ನುವ ಮನಸ್ಥಿತಿ ಅವರದ್ದು. 



ಇದನ್ನೇ ಬಂಡವಾಳವಾಗಿಸಿಕೊಳ್ಳುವ ರಿಯಲ್​ ಎಸ್ಟೇಟ್​ ಡೀಲರ್​ಗಳು ಕಮಿಷನ್​ ಆಸೆಗೆ ಮೋಸ ಮಾಡುವ ವರದಿಗಳಾಗಿವೆ. ತಾವಿರುವ ಜಾಗ ಎಂಥದ್ದು, ಅವರ ಮನಸ್ಥಿತಿಗಳೇನೋ, ಅಲ್ಲ ತಾವು ಸೇಫಾಗಿದ್ದೀವಾ ಇಷ್ಟೆಲ್ಲ ಯೋಚನೆಗಳ ಮಧ್ಯೆಯೇ ಅನಿವಾರ್ಯವಾಗಿ ಜೀವನ ಮಾಡಬೇಕು.



ಕೋಲಾರ ಮೂಲದ ಉತ್ಸಾಹಿ ಯುವಕರಾದ ಸುಬ್ಬು ಅತ್ತಿಕುಂಟೆ, ಅಂಬರೀಶ್​ ಅತ್ತಿಕುಂಟೆ ಹಾಗೂ ರಾಜಸ್ಥಾನ ಮೂಲದ ಮಾಯಾಂಕ್​ ಅವರು ಶುರುಮಾಡಿರುವ ಸಿಂಪ್ಲಿ ಗೆಸ್ಟ್​ ಹೆಸರಿನ ಸ್ಟಾರ್ಟ್​ಅಪ್​ (ನವೋದ್ಯಮ) ಇಂಥ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. 



ಒಂದು ಬೆಡ್, ಒಂದು ಮನೆ, ಫ್ಲಾಟ್​, ವಿಲಾ ಹೀಗೆ ಹಲವು ಬಗೆಯ ಪ್ರಾಪರ್ಟಿಗಳನ್ನು ಸಿಂಪ್ಲಿ ಗೆಸ್ಟ್​ ಪೂರೈಸುತ್ತದೆ. ಉದ್ಯೋಗಕ್ಕಾಗಿ ಬರುವ ಬೇರೆ ರಾಜ್ಯದ ಯುವಕ, ಯುವತಿಯರು ತಮಗೆ ಅನುಕೂಲಕ್ಕೆ ತಕ್ಕಂತೆ ಬಾಡಿಗೆಗೆ ಪಡೆಯಬಹುದಾಗಿದೆ. 



ಟಿವಿ, ಫ್ಯಾನ್​, ಸೋಫಾ, ಫ್ರಿಡ್ಜ್​, ಕಬೋರ್ಡ್​, ಕಿಚನ್​ ಸೇರಿದಂತೆ ನಿತ್ಯ ಬೇಕಾಗುವ ಎಲ್ಲ ಸೌಲಭ್ಯಗಳು ಸಿಂಪ್ಲಿ ಗೆಸ್ಟ್​ ಪೂರೈಸುವ ಮನೆಗಳಲ್ಲಿರುತ್ತದೆ. ಮನೆ ಕೆಲಸಗಾರರನ್ನೂ ಸಂಸ್ಥೆಯೇ ಪೂರೈಸುತ್ತದೆ. ಬೇಕಿದ್ದರೆ ಅಡುಗೆ ಭಟ್ಟರನ್ನು ಬುಕ್​ ಮಾಡಹಬುದು. 



ಮನೆ ಮಾಲಿಕರಿಗಿಲ್ಲ ಪ್ರಶ್ನಿಸುವ ಅವಕಾಶ 

ಮನೆ ಬಾಡಿಗೆ ಕೊಡುವ ಮಾಲೀಕರು ಪ್ರತೀ ವಿಷಯಕ್ಕೂ ಬಾಡಿಗೆದಾರರನ್ನು ಪ್ರಶ್ನಿಸುತ್ತಾರೆ ಎಂಬುದು ಬಹುತೇಕರ ಸಮಸ್ಯೆ. ಆದ್ರೆ, ಸಿಂಪ್ಲಿ ಗೆಸ್ಟ್​ ಪ್ರಾಪರ್ಟಿಗಳಲ್ಲಿ ಮನೆ ಮಾಲೀಕರ ಮಧ್ಯಪ್ರವೇಶ ತಡೆಯುವ ಒಂದು ಆಯ್ಕೆ ಲಭ್ಯವಿದೆ. 



ಕೇಟರಿಂಗ್​ ಕೂಡ ಲಭ್ಯ 

ಸಿಂಪ್ಲಿ ಗೆಸ್ಟ್ ಸಂಸ್ಥೆಯು ಹಲವು ಕೇಟರಿಂಗ್​ ಏಜೆನ್ಸಿಗಳ ಜೊತೆ ಟೈ ಅಪ್​ ಮಾಡಿಕೊಂಡಿದ್ದು, ಊಟ ಬೇಕಿದ್ದರೆ ಬುಕ್  ಮಾಡಬಹುದು. 



ಇಲ್ಲಿ ಎಲ್ಲವೂ ಶೇರಿಂಗ್​

ನಿಮ್ಮ ಫ್ಲ್ಯಾಟ್​ ಮೇಟ್​ ಜೊತೆ ನೀವು ಒಂದು ಸಿನಿಮಾಗೆ ಹೋದ್ರೆ, ಅಥವಾ ಎಲ್ಲಾದರೂ ಊಟ ಮಾಡಿದರೆ ಅದನ್ನು ನಿಮ್ಮ ಖಾತೆಯಲ್ಲಿ ಆ್ಯಡ್​ ಮಾಡಬೇಕು. ಅದಕ್ಕೆ ಖರ್ಚಾದ ಹಣ ಎಷ್ಟು ಮಂದಿ ಇರುತ್ತಾರೋ ಅಷ್ಟು ಪಾಲಾಗಿ ಬಾಡಿಗೆ ಜೊತೆಯಲ್ಲೇ ಕಟ್ಟಬಹುದು. 



ಐಡಿಯಾ ಬಂದದ್ದು ಹೇಗೆ?

ಬೆಂಗಳೂರಿನಲ್ಲಿ ಮನೆ ಬಾಡಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಈ ತಂಡವು ಅದಕ್ಕೆ ಅನುಗುಣವಾಗಿ ಎರಡು ಉದ್ಯಮಗಳನ್ನು ಆರಂಭಿಸಿದರು. ಆದರೆ ಅವು ಫಲ ಕೊಡಲಿಲ್ಲ. ಹೇಗೂ ಇದೇ ಉದ್ಯಮದಲ್ಲಿ ತೊಡಗಿಕೊಂಡಿದ್ದರಿಂದ ಸಿಂಪ್ಲಿಗೆಸ್ಟ್​ ಸಂಸ್ಥೆ ಆರಂಭಿಸಿದರು.



ಯುವತಿಯರಿಗೆ ಸೇಫ್​

ಬೇರೆ ರಾಜ್ಯದ ಯುವತಿಯರು ಬೆಂಗಳೂರಿಗೆ ಬಂದಮೇಲೆ ಮೊದಲ ನೋಡುವುದು ತಮ್ಮ ಸೇಫ್ಟಿ. ಸಿಂಪ್ಲಿಗೆಸ್ಟ್​ ಇವರಿಗಾಗೆಂದೇ ಕೆಲವು ಸೇವೆಗಳನ್ನು ನೀಡುತ್ತಿದ್ದು. ಬಳಕೆದಾರ ಹೆಣ್ಣುಮಕ್ಕಳು ಜಾಲತಾಣಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


Conclusion:
Last Updated :May 26, 2019, 3:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.