ಸಿದ್ದರಾಮಯ್ಯ ಎಲ್ಲರನ್ನೂ ಮುಗಿಸುವ ಭಸ್ಮಾಸುರ: ಶ್ರೀರಾಮುಲು

author img

By

Published : Jul 19, 2022, 4:03 PM IST

Updated : Jul 19, 2022, 5:12 PM IST

Minister Sriramulu spoke in Bidar

ಕಾಂಗ್ರೆಸ್​ ಪಕ್ಷದ ಬೆಂಬಲದ ಮೇಲೆ ಸಿದ್ದರಾಮಯ್ಯ ಹಾರಾಟ- ಪ್ರತಿಪಕ್ಷ ನಾಯಕರಿಗೆ ವೈಯಕ್ತಿಕ ವರ್ಚಸ್ಸು, ಸ್ವಂತ ಶಕ್ತಿ ಇಲ್ಲ- ಸಚಿವ ಶ್ರೀರಾಮುಲು ಟೀಕೆ

ಬೀದರ್​​: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ. ಅವರು ಯಾವ ಪಕ್ಷಕ್ಕೆ ಹೋಗಿದ್ದಾರೋ, ಆ ಪಕ್ಷವನ್ನು ಮುಳುಗಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ನಿಷ್ಠರಲ್ಲ, ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದ ವ್ಯಕ್ತಿ. ಕಾಂಗ್ರೆಸ್ ಪಕ್ಷದಲ್ಲಿ ಈಗ ಉಳಿದಿರುವುದು ಕೇವಲ ಉತ್ಸವ ಮೂರ್ತಿಗಳು. ಹಾಗಾಗಿ ಉತ್ಸವಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯ

ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸಿದರೆ, ಅವರು ಠೇವಣಿ ಕಳೆದುಕೊಳ್ಳಲಿದ್ದಾರೆ. ಕ್ಷೇತ್ರ ಹುಡುಕಾಡುತ್ತಿರುವ ಸಿದ್ದರಾಮಯ್ಯ ಸಿಎಂ ಹೇಗಾಗುತ್ತಾರೆ? ಪಕ್ಷದ ಬೆಂಬಲದ ಮೇಲೆ ಸಿದ್ದರಾಮಯ್ಯ ಹಾರಾಡುತ್ತಿದ್ದಾರೆ. ಅವರಿಗೆ ವೈಯಕ್ತಿಕ ವರ್ಚಸ್ಸು, ಸ್ವಂತ ಶಕ್ತಿ, ಮತ್ತು ಸಿದ್ಧಾಂತಗಳಿಲ್ಲ. ಹಿಂದುಳಿದ ಜಾತಿಯ ‌ಹೆಸರು ಹೇಳಿಕೊಂಡು ರಾಜಕೀಯ ‌ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ದೇಶ ರಾಜ್ಯದ ಜನರಿಂದ ತಿರಸ್ಕಾರಕ್ಕೊಳಗಾದ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇರುವವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್​ನವರು ಅಧಿಕಾರಕ್ಕೆ ಬರುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಟೀಕಿಸಿದರು.

ಓದಿ: ಕಾಂಗ್ರೆಸ್​​ನವರು ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ: ಸಚಿವ ಕಾರಜೋಳ

Last Updated :Jul 19, 2022, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.