ಬ್ರಿಟಿಷ್ ನಾಡಲ್ಲಿ ಬೀದರ ಹುಡುಗನ ಕನ್ನಡ ಪ್ರೇಮ: MS ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶನ
Updated on: Jan 25, 2023, 5:54 PM IST

ಬ್ರಿಟಿಷ್ ನಾಡಲ್ಲಿ ಬೀದರ ಹುಡುಗನ ಕನ್ನಡ ಪ್ರೇಮ: MS ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶನ
Updated on: Jan 25, 2023, 5:54 PM IST
ಲಂಡನ್ ಸಿಟಿ ವಿವಿಯ ಬೇಯಸ್ ಬಿಸ್ನೆಸ್ ಸ್ಕೂಲ್‍ನಲ್ಲಿ ಇತ್ತೀಚೆಗೆ ಎಂಎಸ್ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಬೀದರ್ ಮೂಲದ ಆದೀಶ ರಜನೀಶ ವಾಲಿ ಎಂಬವರು ಕನ್ನಡ ಧ್ವಜ ಪ್ರದರ್ಶಿಸಿ ಅಭಿಮಾನ ಮೆರೆದರು.
ಬೀದರ್: ಬ್ರಿಟನ್ ಪಾರ್ಲಿಮೆಂಟರ್ ಲೀಡರ್ಶಿಪ್ಗೆ ಆಯ್ಕೆಯಾಗಿರುವ ಬೀದರ್ ಮೂಲದ ಕನ್ನಡಿಗ ಆದೀಶ ರಜನೀಶ ವಾಲಿ ಇತ್ತೀಚೆಗೆ ಲಂಡನ್‍ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡ ಧ್ವಜ ಹಿಡಿದು ಅಭಿಮಾನ ಮೆರೆದಿದ್ದರು. ಎಂಜಿನಿಯರಿಂಗ್ ಘಟಿಕೋತ್ಸವದಲ್ಲಿ ಕನ್ನಡದ ಬಾವುಟವನ್ನು ಕೊರಳಿಗೆ ಹಾಕಿಕೊಂಡು ಹೆಜ್ಜೆ ಹಾಕಿ ಪದವಿ ಸ್ವೀಕರಿಸಿದ್ದ ಇವರು, ಇದೀಗ ಲಂಡನ್ ಸಿಟಿ ವಿವಿಯ ಬೇಯಸ್ ಬಿಸ್ನೆಸ್ ಸ್ಕೂಲ್‍ನಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಸ್ವೀಕರಿಸುವಾಗಲೂ ಕನ್ನಡ ಧ್ವಜ ಪ್ರದರ್ಶಿಸಿಯೇ ಪದವಿ ಸ್ವೀಕರಿಸಿದ್ದಾರೆ.
ಅಜ್ಜ ಶಿವಶರಣಪ್ಪ ವಾಲಿ ಕನ್ನಡದ ಕಲಿ: ಬೀದರ್ ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಇವರ ಅಜ್ಜ, ಪತ್ರಕರ್ತರಾಗಿರುವ ಶಿವಶರಣಪ್ಪ ವಾಲಿ ಅವರ ಶ್ರಮ ಸ್ಮರಣೀಯವಾಗಿದೆ. ಗಡಿಜಿಲ್ಲೆಯಲ್ಲಿ ಹಿಂದಿ, ಉರ್ದು, ಮರಾಠಿ ಭಾಷಿಕರು ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಕನ್ನಡದ ಭಾಷೆ ಕಡೆಗಣಿಸುತ್ತಿದ್ದ ಸಂದರ್ಭದಲ್ಲಿ ಶಿವಶರಣಪ್ಪ ವಾಲಿ ಉತ್ತರ ಕನ್ನಡ ಎಂಬ ಪತ್ರಿಕೆ ಆರಂಭಿಸಿ, ಕನ್ನಡ ಭಾಷಾ ಪ್ರೇಮ ಸಾರಿದ್ದರು.
ಆದೀಶ್ ವಾಲಿಗೆ ಅಜ್ಜನಿಂದ ಪ್ರೇರಣೆ: ನನ್ನಲ್ಲಿ ಕನ್ನಡದ ಅಭಿಮಾನ ಬೆಳೆಯಲು ಅಜ್ಜ ಶಿವಶರಣಪ್ಪ ವಾಲಿ ಅವರು ಪ್ರೇರಣೆ, ಮಾರ್ಗದರ್ಶಕರಾಗಿದ್ದಾರೆ ಎಂದು ಆದೀಶ್ ವಾಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ದಿ. ಶಕುಂತಲಾ ವಾಲಿ ಅವರೊಂದಿಗೆ ಖ್ಯಾತ ಉದ್ಯಮಿ ಹಾಗೂ ತಂದೆ ಡಾ.ರಜನೀಶ ವಾಲಿ ಮತ್ತು ತಾಯಿ ಅಂಜನಾ ವಾಲಿ ಕನ್ನಡತನವನ್ನು ಮೈಗೂಡಿಸಿಕೊಳ್ಳುವಲ್ಲಿ ನನಗೆ ಸ್ಪೂರ್ತಿ ತುಂಬಿದ್ದಾರೆ ಎಂದು ತಿಳಿಸಿದ್ದಾರೆ. ಲಂಡನ್ದಲ್ಲಿ ಕನ್ನಡ ಧ್ವಜ ಹಿಡಿದು ಪದವಿ ಪ್ರಮಾಣ ಪತ್ರ ಪಡೆದಿರುವ ಆದೀಶ್ ವಾಲಿ ಅವರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜ್ಯದ ವಿವಿಧೆಡೆಯಿಂದ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ ನನ್ನ ಉಸಿರು: ಸಿರಿಗನ್ನಡಂ ಗೆಲ್ಗೆ. ಶ್ರೀಮಂತ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಬೇಕಿತ್ತು. ಮನೆಯಲ್ಲಿ ಕನ್ನಡ, ರಕ್ತದಲ್ಲಿ ಕನ್ನಡ, ನಮ್ಮ ಉಸಿರು ಕನ್ನಡ ಆಗಬೇಕೆಂದು ಕನ್ನಡಿಗರಿಗೆ ಸಲಹೆ ನೀಡಿದ ಅವರು, ಬ್ರಿಟಿಷ್ ನಾಡಿನಲ್ಲಿ ಕನ್ನಡ ಧ್ವಜ ಹಿಡಿಯುವ ಮಹದಾಸೆ ನನ್ನದಾಗಿತ್ತು. ಕನ್ನಡಿಗರು ವಿದೇಶದಲ್ಲಿ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಬೇಕು. ಅಷ್ಟೇ ಅಲ್ಲ, ಪದವಿಯನ್ನು ಇಡೀ ಕರ್ನಾಟಕ, ಕನ್ನಡಿಗರು ಹಾಗೂ ಕನ್ನಡಕ್ಕೆ ಅರ್ಪಿಸುವುದಾಗಿಯೂ ಆದೀಶ್ ರಜನೀಶ ವಾಲಿ ಹೇಳಿದ್ದರು.
ಇದನ್ನೂಓದಿ: ಕಾಶಿ, ಉಜ್ಜಯಿನಿ ರೀತಿಯಲ್ಲಿ ಗಾಣಗಾಪುರ ಸಮಗ್ರ ಅಭಿವೃದ್ಧಿ: ಸಿಎಂ ಬೊಮ್ಮಾಯಿ
