ಒಟ್ಟಿಗೆ ಫೈಟರ್​ ಜೆಟ್​ ಹಾರಿಸಿದ ತಂದೆ-ಮಗಳು: ವಾಯುಪಡೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಜೋಡಿ

author img

By

Published : Jul 5, 2022, 6:49 PM IST

Air Commodore Sanjay Sharma

ಬೀದರ್​ನಲ್ಲಿರುವ ವಾಯುಪಡೆ ಸ್ಟೇಷನ್​​ನಲ್ಲಿ ಒಟ್ಟಿಗೆ ಸೇರಿಕೊಂಡು ತಂದೆ - ಮಗಳು ಫೈಟರ್ ಜೆಟ್ ಯುದ್ಧ ವಿಮಾನ ಹಾರಿಸುವ ಮೂಲಕ ಹೊಸದೊಂದು ದಾಖಲೆ ಸೃಷ್ಟಿ ಮಾಡಿದ್ದಾರೆ.

ಬೀದರ್​​: ಭಾರತೀಯ ವಾಯುಪಡೆಯಲ್ಲಿ ಇಂದು ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ತಂದೆ - ಮಗಳು ಒಟ್ಟಿಗೆ ಫೈಟರ್ ಜೆಟ್​ ಹಾರಿಸಿದ್ದಾರೆ. ಫ್ಲೈಯಿಂಗ್​ ಆಫೀಸರ್​​ ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್​​ ಆಗಿರುವ ಸಂಜಯ್​ ಶರ್ಮಾ ಈ ದಾಖಲೆ ಬರೆದಿದ್ದಾರೆ. ಜೊತೆಗೆ ಭಾರತೀಯ ವಾಯುಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ - ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • Father-daughter duo, Flying Officer Ananya & Air Commodore Sanjay Sharma,created history on May 30 when they flew in same formation of Hawk-132 aircraft at IAF Station Bidar,where Flying Officer Ananya is undergoing her training before she graduates onto superior fighter aircraft pic.twitter.com/dUW4zCmc9V

    — ANI (@ANI) July 5, 2022 " class="align-text-top noRightClick twitterSection" data=" ">

ಬೀದರ್​​ನ ಐಎಎಫ್​ ಸ್ಟೇಷನ್​​ನಲ್ಲಿ ಹಾಕ್​​-132 ವಿಮಾನವನ್ನ ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ತಂದೆ ಸಂಜಯ್​​ ಶರ್ಮಾ ಈ ಇತಿಹಾಸ ಸೃಷ್ಟಿಸಿದ್ದು,ಫ್ಲೈಯಿಂಗ್​ ಆಫೀಸರ್​ ಆಗಿರುವ ಅನನ್ಯಾ ಉನ್ನದ ಯುದ್ಧ ವಿಮಾನದಲ್ಲಿ ಪದವಿ ಪಡೆದು, ತರಬೇತಿ ಪಡೆದುಕೊಳ್ಳುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ.

ಇದನ್ನೂ ಓದಿರಿ: 'ನನಗೆ ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆ': ಟಿಎಂಸಿ ಸಂಸದೆ ವಿವಾದಿತ ಹೇಳಿಕೆ

ಮಗಳೊಂದಿಗೆ ಸಂಜಯ್​ ಶರ್ಮಾ ಪೋಸ್ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಾಯುಪಡೆ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದ ಬೀದರ್​​ನಲ್ಲಿ ಮೇ. 30ರಂದು ಒಟ್ಟಿಗೆ ಫೈಟರ್​ ಯುದ್ಧ ವಿಮಾನ ಹಾರಿಸಿದ್ದಾರೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.