ರಸ್ತೆಗಿಳಿದು ಜನರಿಗೆ ಕೋವಿಡ್​ ಲಸಿಕೆ ಹಾಕಿಸಿದ ಬೀದರ್ ಜಿಲ್ಲಾಧಿಕಾರಿ

author img

By

Published : Aug 28, 2021, 4:27 PM IST

Updated : Aug 28, 2021, 7:35 PM IST

corona-vaccine-awareness-by-bidar-dc-ramachandran

ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಖುದ್ದು ಪರಿಶಿಲನೆ ನಡೆಸಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಬಸ್​​ಗಳನ್ನು ನಿಲ್ಲಿಸಿ ಅದರಲ್ಲಿರುವ ಪ್ರಯಾಣಿಕರಿಗೆ ಲಸಿಕೆ ಹಾಕಿಸಿದರು.

ಬೀದರ್: ಕೊರೊನಾ ಲಸಿಕೆ ಪಡೆಯುವಂತೆ ಎಷ್ಟೇ ಜಾಗೃತಿ, ಮನವಿ ಮಾಡಿದರೂ ಹಿಂದೇಟು ಹಾಕುತ್ತಿರುವ ಜನರನ್ನು ಗುರುತಿಸಿ ಸ್ಥಳದಲ್ಲೇ ಲಸಿಕೆ ನೀಡಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳ ಜೊತೆ ಬೆಳಗ್ಗಿನಿಂದಲೇ ರಸ್ತೆಗಿಳಿದು ಅಭಿಯಾನ ಆರಂಭಿಸಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಬೈಕ್​, ಕಾರು, ಸಾರಿಗೆ ಬಸ್, ಆಟೋ ಹೀಗೆ ವಿವಿಧ ವಾಹನಗಳಲ್ಲಿ ಸಂಚರಿಸುವ ಜನರು ಲಸಿಕೆ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಲಸಿಕೆ ಪಡೆಯದೆ ಸುತ್ತಾಡುತ್ತಿದ್ದ ಜನರನ್ನು ಗುರುತಿಸಿ, ಸ್ಥಳದಲ್ಲೇ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಲಸಿಕೆ ನೀಡಿದರು.

ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್​​ಗಳನ್ನು ನಿಲ್ಲಿಸಿ ಖುದ್ದು ಪರಿಶಿಲನೆ ನಡೆಸಿದ ಜಿಲ್ಲಾಧಿಕಾರಿ, ಲಸಿಕೆ ಪಡೆಯದ ಪ್ರಯಾಣಿಕರಿಗೆ ವ್ಯಾಕ್ಸಿನೇಷನ್​​ ಹಾಕಿಸಿದರು.

ರಸ್ತೆಗಿಳಿದು ಜನರಿಗೆ ಕೋವಿಡ್​ ಲಸಿಕೆ ಹಾಕಿಸಿದ ಬೀದರ್ ಜಿಲ್ಲಾಧಿಕಾರಿ

ಜಿಲ್ಲೆಯನ್ನು ಕೊರೊನಾ ಮುಕ್ತರಾಗಿ ಮಾಡಲು ಅಧಿಕಾರಿಗಳಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕಾಗಿದೆ. ಸದ್ಯ ಜಿಲ್ಲೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಈ ಸಂಖ್ಯೆ ಶೂನ್ಯ ಮಾಡಬೇಕಾಗಿದೆ. ಇದಕ್ಕಾಗಿ ಸಾರ್ವಜನಿಕರಲ್ಲಿ ವಿಭಿನ್ನ ರೀತಿಯಲ್ಲಿ ಲಸಿಕೆ ಜಾಗೃತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ: Mysuru Gang Rape: ಮುಂಬೈಗೆ ತೆರಳಿದ ಸಂತ್ರಸ್ತೆಗೆ ಆರೋಪಿಗಳ ಫೋಟೋ ಕಳಿಸಿ ಖಚಿತಪಡಿಸಿಕೊಂಡ ಪೊಲೀಸರು!

Last Updated :Aug 28, 2021, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.