'50 ಲಕ್ಷಕ್ಕೆ ನವ್ಯಶ್ರೀ ಬೇಡಿಕೆಯಿಟ್ಟಿದ್ದರು, ಈಗಾಗಲೇ 5 ಲಕ್ಷ ಪಡೆದುಕೊಂಡಿದ್ದಾರೆ': ಟಾಕಳೆ

author img

By

Published : Jul 20, 2022, 6:55 AM IST

rajakumara takale navyashree fight

''ನವ್ಯಶ್ರೀ ನನಗೆ ಮಾನಸಿಕವಾಗಿ ‌ಕಿರುಕುಳ ನೀಡುತ್ತಿದ್ದಾರೆ‌. 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ 2 ಲಕ್ಷ ‌ಹಣವನ್ನು ಡಿಡಿ ಮೂಲಕ ಹಾಗು 3 ಲಕ್ಷ ರೂ. ಕ್ಯಾಶ್ ಪಡೆದುಕೊಂಡಿದ್ದಾರೆ.'' - ರಾಜಕುಮಾರ ಟಾಕಳೆ ಆರೋಪ

ಬೆಳಗಾವಿ: ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಒಂದೆಡೆ ನವ್ಯಶ್ರೀ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಧಿಕಾರಿ ಟಾಕಳೆ ಪೊಲೀಸರಿಗೆ ದೂರು ನೀಡಿದ್ರೆ, ಇನ್ನೊಂದೆಡೆ ಟಾಕಳೆ ಅವರೇ ನನ್ನ ಗಂಡ ಎಂದು ನವ್ಯಶ್ರೀ ಹೇಳಿದ್ದಾರೆ. ಇದೆಲ್ಲದರ ನಡುವೆ ಟಾಕಳೆ, ನವ್ಯಶ್ರೀ ಮತ್ತು ಅವರ ಆಪ್ತ ತಿಲಕ್ ನಡುವೆ ನಡೆದ ಮಾತುಕತೆ ಎನ್ನಲಾದ ಆಡಿಯೋ ಕೂಡ ನವ್ಯಶ್ರೀ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ರಾಜಕುಮಾರ್ ಟಾಕಳೆ ಪ್ರತಿಕ್ರಿಯಿಸಿ, ಕೆಲ ಆರೋಪಗಳನ್ನು ಮಾಡಿದ್ದಾರೆ.


"ನಾಲ್ಕು ವರ್ಷಗಳಿಂದ ನವ್ಯಶ್ರೀ ನನಗೆ ಮಾನಸಿಕವಾಗಿ ‌ಕಿರುಕುಳ ನೀಡುತ್ತಿದ್ದಾರೆ‌. 50 ಲಕ್ಷ ರೂ ಹಣಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಈಗಾಗಲೇ 2 ಲಕ್ಷ ‌ಹಣವನ್ನು ಡಿಡಿ ಮೂಲಕವೂ 3 ಲಕ್ಷ ರೂ. ಕ್ಯಾಶ್ ಮೂಲಕ ಪಡೆದುಕೊಂಡಿದ್ದಾರೆ. ನನ್ನ ಪತ್ನಿಯ ಸಹಕಾರದಿಂದ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ" ಎಂದು ಅವರು ತಿಳಿಸಿದರು.

"5-6 ತಿಂಗಳಿಂದ ಬ್ಲ್ಯಾಕ್‌ಮೇಲ್ ನಡೆಯುತ್ತಿದೆ. ನಾನು ಅವರ ಪತಿ ಎಂದು ನವ್ಯಶ್ರೀ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಹೇಳಿದ್ದಾರೆ. ಇದಾದ ಬಳಿಕ‌ ಮತ್ತೆ 50 ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಿಂದು ವಿವಾಹ ಪದ್ಧತಿಯ ಪ್ರಕಾರ ಎರಡನೇ ಮದುವೆ ಆಗಲು ಅವಕಾಶವಿಲ್ಲ. ನನ್ನ ಮದುವೆ ವಿಚಾರ ತಿಳಿದು ನವ್ಯಶ್ರೀ ಈಗ ನಾನೇ ಅವರ ಪತಿ ಎನ್ನುವ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ" ಎಂದರು.

ಇದನ್ನೂ ಓದಿ: ರಾಜಕುಮಾರ ಟಾಕಳೆ, ನವ್ಯಶ್ರೀ ಮಾತನಾಡಿರುವ ಆಡಿಯೋ ರಿಲೀಸ್

"ಆಡಿಯೋದಲ್ಲಿ ಎಲ್ಲಿಯೂ ಪತ್ನಿ ಎಂದು ನಾನು ಹೇಳಿಲ್ಲ. ಮಾನವೀಯ ದೃಷ್ಟಿಯಿಂದ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮನೆಯಲ್ಲಿ ಜಗಳ ನಡೆದಿತ್ತು. ಆಗ ನಾನು ಅವರನ್ನು ಮನೆಯಲ್ಲಿ ಇರಿಸಿಕೊಳ್ಳುತ್ತೇನೆ ಎಂದಿದ್ದೇನೆ. ಮಾತನಾಡುವಾಗ ಪತ್ನಿಯೂ ನನ್ನ ಜೊತೆಗಿದ್ದರು" ಎಂದು ಟಾಕಳೆ ಹೇಳಿದ್ದಾರೆ.

ಇದನ್ನೂ ಓದಿ: 'ಅವನೇ ನನ್ನ ಗಂಡ'.. ಬೆಳಗಾವಿಯಲ್ಲಿ ಸಾಮಾಜಿಕ ಕಾರ್ಯಕರ್ತೆ - ಅಧಿಕಾರಿ ಮಧ್ಯೆ ವಿವಾದ

"ತಿಲಕ್ ಕುಮಾರ್ ಅವರ ಮಾವ ಅಂತಾ ಹೇಳಿದ್ದರು. ಆಮೇಲೆ ಆಕೆಯ ಫ್ರೆಂಡ್ ಎಂದು ಗೊತ್ತಾಗಿದೆ. ವೀಡಿಯೋ, ಆಡಿಯೋ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು. ಸೌಮ್ಯ ಮನುಷ್ಯನಿಗೆ ಅನ್ಯಾಯವಾದರೆ ರಾಕ್ಷಸ ಆಗುತ್ತಾನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲು ದೂರು ನೀಡಿದ್ದೇನೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.