ಉಗ್ರ ಚಟುವಟಿಕೆಗಳಿಗೆ ಹಣ ಫಂಡಿಂಗ್​ ಆರೋಪ: PFI ಮೇಲೆ ಎನ್​ಐಎ ದಾಳಿ.. ರಾಜ್ಯದಲ್ಲಿ 7 ಜನ ಅರೆಸ್ಟ್

author img

By

Published : Sep 22, 2022, 5:05 PM IST

Updated : Sep 22, 2022, 8:18 PM IST

ಎನ್​ಐಎ

ಉಗ್ರ ಚಟುವಟಿಕೆಗಳಿಗೆ ಹಣ ಫಂಡಿಂಗ್​ ಮಾಡುತ್ತಿದ್ದ ಆರೋಪದ ಮೇಲೆ ಯಾಸಿರ್​ ಹಸನ್​ ಎಂಬ ವ್ಯಕ್ತಿಯನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲೆ ಇಂದು ಎನ್​ಐಎ ದಾಳಿ ಮಾಡಿದೆ. ಉಗ್ರ ಚಟುವಟಿಕೆ ಕೃತ್ಯಗಳಿಗೆ ಹಣ ದೇಣಿಗೆ ಆರೋಪ‌ದ ಮೇರೆಗೆ ಪಿಎಫ್ಐ ನಾಯಕರು ಹಾಗೂ ಕಾರ್ಯಕರ್ತರು ಸೇರಿ ರಾಜ್ಯದಲ್ಲಿ ಏಳು ಮಂದಿ ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಅನೀಸ್ ಅಹಮದ್, ಆಫ್ಸರ್ ಪಾಷಾ, ಅಬ್ದುಲ್ ವಾಹೀದ್, ಯಾಸೀರ್ ಅರಾಫತ್ ಹಸನ್, ಮೊಹಮ್ಮದ್ ಸಾಕಿಬ್, ಮೊಹಮ್ಮದ್ ಫಾರೂಕ್ ಹಾಗೂ ಶಾಹೀದ್ ನಾಸೀರ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ಐಎ ವಿಚಾರಣೆ ನಡೆಸಲು‌ ಸಿದ್ಧತೆ ನಡೆಸಿಕೊಂಡಿದೆ. ಬಂಧಿತ ಆರೋಪಿಗಳು ಹಲವು ವರ್ಷಗಳಿಂದ‌‌ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ದೇಶ-ವಿದೇಶಗಳಿಂದ ಬಂದ ಹಣವನ್ನು ಸಂಗ್ರಹಿಸಿ ಸಮಾಜ ವಿರೋಧಿ ಚಟುವಟಿಕೆಗಳಿಗೆ ಹಣ ವಿನಿಯೋಗಿಸುತ್ತಿದ್ದರು ಎನ್ನಲಾಗುತ್ತಿದೆ.

ದೇಶದ ಒಳಗೆ ಹಾಗೂ ವಿದೇಶಗಳಿಂದ ಹಣ್ಣು ಸೇರಿಸಿ ಆ ಹಣದಿಂದ ಟೆರರ್ ಫಂಡಿಂಗ್ ಮಾಡುತ್ತಿದ್ದ ಅರೋಪದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಮುಸ್ಲಿಂ ಯುವಕರನ್ನು ತಲೆಕೆಡಿಸಿ ಅವರನ್ನು ಒಪ್ಪಿಸಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಲು ಹಾಗೂ ಐಸಿಸ್​​ಗೆ ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದರು. ಮಾರಕಾಸ್ತ್ರಗಳನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಭಯ ಉಂಟು ಮಾಡುವಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಐಪಿಸಿ ಸೆಕ್ಷನ್ ಪ್ರಕಾರ 120, 153a, 17 ,18, 18B, 20, 22B, 38, 39 of UAPA ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು, ತಮಿಳುನಾಡಿನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರ ಪ್ರಕರಣ: ಎನ್‌ಐಎಗೆ ವರ್ಗಾವಣೆ!

Last Updated :Sep 22, 2022, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.