ವಿಶ್ವ ಬ್ರೈನ್​​​ ಟ್ಯೂಮರ್​​​​ ದಿನ... ಅತಿಯಾದ ಮೊಬೈಲ್​​​ ಬಳಕೆಯಿಂದ ದೂರ ಇರಲು ವೈದ್ಯರ ಸಲಹೆ!

author img

By

Published : Jun 8, 2019, 7:50 PM IST

ಮೊಬೈಲ್ ಗೇಮ್​ಗಳ ಅತಿಯಾದ ಬಳಕೆ, ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್​​ಅನ್ನು ತಲೆಯ ಹತ್ತಿರದಲ್ಲಿ ಇಟ್ಟು ಮಲಗುವುದು ಮಾಡಬಾರದು. ಅಲ್ಲದೆ ಮಳೆ ಗುಡುಗು ಬರುವ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರು: ಮಕ್ಕಳು ಹಾಗೂ ಯುವ ಜನರಲ್ಲಿ ಕಳೆದ ಹತ್ತು ವರ್ಷದಲ್ಲಿ ಬ್ರೈನ್ ಟ್ಯೂಮರ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದ್ವಿಗುಣವಾಗಿರುವುದು ಬಹಳ ಆತಂಕಕ್ಕೆ ದೂಡಿದೆ. ಹೀಗಾಗಿ ಬ್ರೈನ್ ಟ್ಯೂಮರ್ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಶೀಘ್ರ ಚಿಕಿತ್ಸೆ ಕೊಡಿಸುವುದು ವಿಶ್ವ ಬ್ರೈನ್ ಟ್ಯೂಮರ್ ದಿನದ ಸಂದೇಶ ಎಂದು ಚೀಫ್ ನ್ಯೂರೋ ಸರ್ಜನ್ ಡಾ. ಎನ್.ಕೆ.ವೆಂಕಟರಮಣ ಹೇಳಿದರು.

ಚೀಫ್ ನ್ಯೂರೋ ಸರ್ಜನ್ ಡಾ. ಎನ್.ಕೆ.ವೆಂಕಟರಮಣ

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಬ್ರೈನ್ ಟ್ಯೂಮರ್ ಹೆಚ್ಚುತ್ತಿರಲು ಅತಿಯಾದ ಮೊಬೈಲ್ ಬಳಕೆ ಕಾರಣ. ಬ್ರೈನ್ ಟ್ಯೂಮರ್​ಗೆ ಇಂತದ್ದೇ ನಿರ್ದಿಷ್ಟ ಕಾರಣ ಎಂದು ಪತ್ತೆ ಹಚ್ಚಿಲ್ಲವಾದರೂ ಇತ್ತಿಚೇಗೆ ಸಣ್ಣ ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಅತಿಯಾಗಿ ಮೆದುಳಿನ ಮೇಲೆ ಪ್ರಭಾವ ಬೀರುತ್ತಿದೆ. ರೇಡಿಯೇಷನ್​ನಿಂದಾಗಿ ಬ್ರೈನ್ ಟ್ಯೂಮರ್ ಸೆಲ್​ಗಳು ಆಕ್ಟಿವ್ ಆಗಬಹುದು ಎಂದು ಅಭಿಪ್ರಾಯಪಟ್ಟರು.

ಮೊಬೈಲ್ ಗೇಮ್​ಗಳ ಅತಿಯಾದ ಬಳಕೆ, ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್ ತಲೆಯ ಹತ್ತಿರದಲ್ಲಿ ಇಟ್ಟು ಮಲಗುವುದು ಮಾಡಬಾರದು. ಮಳೆ ಗುಡುಗು ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

Intro:
ವಿಶ್ವ ಬ್ರೈನ್ ಟ್ಯೂಮರ್ ದಿನ- ಅತಿಯಾದ ಮೊಬೈಲ್ ಬಳಕೆಯಿಂದ ದೂರ ಇರಲು ವೈದ್ಯರ ಸಲಹೆ
ಬೆಂಗಳೂರು- ಮಕ್ಕಳು ಹಾಗೂ ಯುವ ಜನರಲ್ಲಿ ಕಳೆದ ಹತ್ತು ವರ್ಷದಲ್ಲಿ ಬ್ರೈನ್ ಟ್ಯೂಮರ್ ಖಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದ್ವಿಗುಣವಾಗಿರುವುದು ಬಹಳ ಆತಂಕಕ್ಕೆ ದೂಡಿದೆ. ಹೀಗಾಗಿ ಬ್ರೈನ್ ಟ್ಯೂಮರ್ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಶೀಘ್ರದಲ್ಲಿ ಚಿಕಿತ್ಸೆ ಕೊಡಿಸುವುದು ವಿಶ್ವ ಬ್ರೈನ್ ಟ್ಯೂಮರ್ ದಿನ ಅಥವಾ ಮೆದುಳಿನ ಗೆಡ್ಡೆ ದಿನದ ಸಂದೇಶ ಎಂದು ಚೀಫ್ ನ್ಯೂರೋಸರ್ಜನ್ ಹಾಗೂ ಬ್ರೈನ್ಸ್ ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎನ್. ಕೆ ವೆಂಕಟರಮಣ ಈಟಿವಿ ಭಾರತ್ ಗೆ ತಿಳಿಸಿದರು.
ಬ್ರೈನ್ ಟ್ಯೂಮರ್ ಹೆಚ್ಚುತ್ತಿರಲು ಅತಿಯಾದ ಮೊಬೈಲ್ ಬಳಕೆ ಕಾರಣ
ಬ್ರೈನ್ ಟ್ಯೂಮರ್ ಗೆ ಇಂತದ್ದೇ ನಿರ್ದಿಷ್ಟ ಕಾರಣ ಎಂದು ಪತ್ತೆಹಚ್ಚಿಲ್ಲವಾದರೂ ಇತ್ತೀಚೆಗೆ ಸಣ್ಣಮಕ್ಕಳು ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಅತಿಯಾಗಿ ಮೆದುಳಿನ ಮೇಲೆ ಪ್ರಭಾವ ಬಿದ್ದು, ರೇಡಿಯೇಷನ್ ನಿಂದಾಗಿ ಬ್ರೈನ್ ಟ್ಯೂಮರ್ ಸೆಲ್ ಗಳು ಆಕ್ಟಿವ್ ಆಗಬಹುದು ಎಂದು ಡಾಕ್ಟರ್ ವೆಂಕಟಾಚಲಪತಿ ಅಭಿಪ್ರಾಯಪಟ್ಟರು. ಹೀಗಾಗಿ ಮೊಬೈಲ್ ಗೇಮ್ ಗಳ ಅತಿಯಾದ ಬಳಕೆ, ರಾತ್ರಿ ಮಲಗುವ ಸಮಯದಲ್ಲಿ ಮೊಬೈಲ್ ತಲೆಯ ಹತ್ತಿರದಲ್ಲಿ ಇಟ್ಟು ಮಲಗುವುದನ್ನು, ಮಳೆ ಗುಡುಗು ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಅತ್ಯಂತ ಕಡಿಮೆ ಬಳಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಅಥವಾ ಸಾಕಷ್ಟ ಅಡ್ವಾನ್ಸ್ ಟೆಕ್ನಾಲಜಿ ಬಂದಿರೋದ್ರಿಂದ ಸ್ಯಾಟಲೈಟ್ ಅಥವಾ ನೆಟ್ ಕನೆಕ್ಷನ್ ಇಲ್ಲದ ಮಿಮಿಕ್ಸ್ ಕ್ರಿಯೇಟ್ ಮಾಡಿರುವಂತಹ ಗೇಮ್ ಗಳನ್ನು ಆಡಬಹುದು. ಇದೇ ಅಲ್ಲದೆ ಹೆಚ್ಚಿನ ಸಂಧರ್ಭದಲ್ಲಿ ವಂಶವಾಹಿಗಳಿಂದಾಗಿ (ಜೀನ್ಸ್ ಗಳು), ಮಾಲಿನ್ಯ, ಆಹಾರ ವಿಧಾನ, ಒತ್ತಡದ ಜೀವನ ಶೈಲಿಯಿಂದಲೂ ಮೆದುಳು ಗೆಡ್ಡೆಗಳು ಬೆಳೆಯುವ ಸಾಧ್ಯತೆ ಇದೆ ಎಂದರು.
ಬ್ಲಡ್ ಕ್ಯಾನ್ಸರ್ ಬಳಿಕ ಮಕ್ಕಳಿಗೆ ಬರುವ ಎರಡನೇ ದೊಡ್ಡ ಖಾಯಿಲೆ ಮೆದುಳಿನ ಗಡ್ಡೆ.. ಆದಷ್ಟು ಬೇಗ ಡಯಾಗ್ನಾಸ್ಟಿಕ್ ಮಾಡಿಸಿ, ಚಿಕಿತ್ಸೆ ನೀಡಿದರೆ ಖಾಯಿಲೆಯಿಂದ ಮಕ್ಕಳನ್ನು ರಕ್ಷಿಸಬಹುದು. ಮಕ್ಕಳಲ್ಲಿ ಬರುವ ತಲೆನೋವನ್ನು ನಿರ್ಲಕ್ಷಿಸಲೇಬಾರದು..

ಬ್ರೈನ್ ಟ್ಯೂಮರ್ ಲಕ್ಷಣಗಳು
ಎಡೆಬಿಡದೆ ಬೆಳಗ್ಗಿನ ಜಾವದಲ್ಲಿ ಬರುವ ತಲೆನೋವು ಹಾಗೂ ವಾಂತಿ
ದೃಷ್ಟಿ ದೋಷ, ಎರಡೆರಡು ಕಾಣುವುದು
ಮಕ್ಕಳಲ್ಲಿ ಪಿಡ್ಸ್ ಬರುವುದು
ದೇಹದ ದೇಹದ ಬ್ಯಾಲೆನ್ಸ್ ತಪ್ಪುವುದು, ತಲೆ ಒಂದು ಬದಿಗೆ ಬಗ್ಗಿಸಿಕೊಂಡು ಇರುವುದು
ಕೈಕಾಲಿನ ಸ್ವಾಧೀನ ತಪ್ಪಿ ಬೀಳುವುದು, ಮಕ್ಕಳು ಕಾಲು ಅಡ್ಡಡ್ಡವಾಗಿಟ್ಟು ಅಗಲವಾಗಿ ನಡೆಯುವುದು.

ಸಣ್ಣ ಮಕ್ಕಳಲ್ಲಿ ತಲೆನೋವು ಅಥವಾ ತಲೆದಪ್ಪ ಆಗುವುದನ್ನು ಗುರುತಿಸಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಸಣ್ಣಮಕ್ಕಳ ಚಲನವಲಗಳನ್ನು ಗಮನಿಸಬೇಕು.. ಆಟ-ಪಾಠ, ಊಟದಲ್ಲಿ ಮಂಕಾಗಿದ್ದರೆ ಕೂಡಲೇ ಶಿಕ್ಷಕರು ಅಥವಾ ಮನೆಯವರು, ಸ್ನೇಹಿತರು ಗಮನಿಸಬೇಕಾಗುತ್ತದೆ. ಬ್ರೈನ್ ಟ್ಯೂಮರ್ ಸಾಮಾನ್ಯವಾಗಿ ಒಂದು ವರ್ಷದಿಂದ 80-90 ವಯಸ್ಸಿನವರೆಗೂ ಬರಬಹುದು. ಮೆದುಳಿನ ಯಾವ ಭಾಗದಲ್ಲಾದರೂ ಈ ಗೆಡ್ಡೆ ಬೆಳೆಯಬಹುದು. ಕೆಲವು ಮೆದುಳಿನ ಗೆಡ್ಡೆಗಳು ನಿಧಾನವಾಗಿ ಬೆಳೆದರೆ ಇನ್ನು ಕೆಲವು ವೇಗವಾಗಿ ಬೆಳೆಯುತ್ತವೆ. ಆದರೆ ಈ ಗೆಡ್ಡೆಗಳು ಇತರೆ ಕ್ಯಾನ್ಸರ್ ಗಳಂತೆ ದೇಹದ ಇತರ ಭಾಗಗಳಿಗೆ ಹರಡದೆ ಮೆದುಳಿನಲ್ಲಿ ಮಾತ್ರ ದೊಡ್ಡದಾಗುತ್ತದೆ.
ಬ್ರೈನ್ ಟ್ಯೂಮರ್ ಖಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಎಲ್ಲಾ ಅತ್ಯಾಧುನಿಕ ರೀತಿಯ ಶಸ್ತ್ರಚಿಕಿತ್ಸೆಗಳು ಈಗ ಲಭ್ಯವಿದ್ದು, ಎಸ್ ಎಸ್ ಎನ್ ಎಮ್ ಸಿ ಬ್ರೈನ್ ಸೆಂಟರ್ ಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆಗಳನ್ನು ನೀಡಿ, ರೋಗಿಗಳನ್ನು ಗುಣಪಡಿಸಲಾಗುತ್ತಿದೆ. ಅಲ್ಲದೆ ಅವೇಕ್ ಬ್ರೈನ್ ಸರ್ಜರಿ ಹಾಗೂ ನ್ಯೂರೋ ಮಾನಿಟರಿಂಗ್ ಸರ್ಜರಿಗಳನ್ನು ಇತ್ತಿಚೆಗೆ ಹೆಚ್ಚೆಚ್ಚು ನಡೆಸಲಾಗ್ತಿದೆ ಎಂದರು. ಒಟ್ಟಿನಲ್ಲಿ ಬ್ರೈನ್ ಟ್ಯೂಮರ್ ನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪತ್ತೆಹಚ್ಚಿ, ಹೆಚ್ಚು ಸಮಯ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಅಂತಾರೆ..

ಸೌಮ್ಯಶ್ರೀ
ವಿಶ್ವಲ್ ಮೋಜೋದಲ್ಲಿ ಕಳಿಸಲಾಗಿದೆ.
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.