ಪ್ರಿಯಕರನೊಂದಿಗೆ ಲವ್ವಿಡವ್ವಿ.. ಪತಿಯ ಕೊಲೆಗೆ ಸುಪಾರಿ ನೀಡಿದ್ಲು ಅರ್ಧಾಂಗಿ: ಗಂಡ ಜೀವಂತ, ಲವರ್​ ಆತ್ಮಹತ್ಯೆ

author img

By

Published : Aug 20, 2022, 9:18 PM IST

Etv Bharatwoman-gave-supari-to-kill-husband-arrested-in-bengaluru

ಗಂಡನ ಕೊಲ್ಲಲು ಪ್ರಿಯಕರನಿಗೆ ಸುಪಾರಿ ನೀಡಿದ ಮಹಿಳೆ ಜೈಲುಪಾಲಾಗಿದ್ದಾಳೆ. ಅತ್ತ ಪ್ರಿಯತಮೆಗಾಗಿ ಕೊಲೆ ಸುಪಾರಿ ಪಡೆದ ವ್ಯಕ್ತಿಯೇ ಭಯಭೀತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿಡ್ನಾಪ್​ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಠಾಣೆ ಪೊಲೀಸರು ಚಾಲಾಕಿ ಮಹಿಳೆ, ಅವರ ತಾಯಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಂಗಳೂರು: ಪ್ರಿಯಕರನ ಮೂಲಕ ಗಂಡನ ಕೊಲ್ಲಲು ಸುಪಾರಿ ನೀಡಿದ ಅರ್ಧಾಂಗಿ ಜೈಲುಪಾಲಾಗಿದ್ದಾರೆ. ವ್ಯಕ್ತಿಯನ್ನು ಕಿಡ್ನಾಪ್​ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣ ಭೇದಿಸಿದ ಪೊಲೀಸರು, ನಗರದ ಪೀಣ್ಯ ಸಮೀಪದ ದೊಡ್ಡಬಿದರಕಲ್ಲು ನಿವಾಸಿಗಳಾದ ಅನುಪಲ್ಲವಿ ಮತ್ತು ಆಕೆಯ ತಾಯಿ ಅಮುಜಮ್ಮ ಹಾಗೂ ಸಹಚರರಾದ ಪೀಣ್ಯ ಬಡಾವಣೆಯ ಹರೀಶ್, ನಾಗರಾಜು ಮತ್ತು ಮುಗಿಲನ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೀನ್ ಹಾಗೂ ಅನುಪಲ್ಲವಿ ದಂಪತಿ ಪೀಣ್ಯ ಸಮೀಪದ ದೊಡ್ಡಬಿದರಕಲ್ಲುನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈ ನಡುವೆ ಪರಿಚಯವಾಗಿದ್ದ ಹಿಮಂತ ಎಂಬಾತನ ಜೊತೆ ಅನುಪಲ್ಲವಿ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಇವರಿಬ್ಬರ ನಡುವಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ನವೀನ್​ನನ್ನೇ ಮುಗಿಸಲು ಇವರಿಬ್ಬರೂ ಪ್ಲಾನ್​ ಮಾಡಿದ್ದರು. ಅದರಂತೆ ಅನುಪಲ್ಲವಿ, ಪ್ರಿಯಕರ ಹಿಮಂತನಿಗೆ ಕೊಲೆಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು.

ಸುಪಾರಿ ಪಡೆದ ಹಿಮಂತ, ತನ್ನಿಬ್ಬರು ಸ್ನೇಹಿತರಿಗೆ ಕೊಲೆ ಮಾಡಲು ತಿಳಿಸಿದ್ದ. ಬಳಿಕ ಹರೀಶ್ ಹಾಗೂ ನಾಗರಾಜ್ ಎಂಬಿಬ್ಬರು ನವೀನ್‌ನನ್ನು ಜುಲೈ 23ರಂದು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ತಮಿಳುನಾಡಿನ ವಿರೂದ್ ನಗರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಲೆ ಮಾಡಲು ತಮಿಳುನಾಡಿನ ಮುಗಿಲನ್ ಹಾಗು ಕಣ್ಣನ್ ಎಂಬುವರನ್ನು ಕರೆಸಿಕೊಂಡಿದ್ದರು.

ಟೊಮೆಟೊ ಸಾಸ್ ಹಾಕಿ ಡ್ರಾಮಾ: ಆದರೆ ನವೀನ್​ನನ್ನು ಕೊಲ್ಲಲು ಧೈರ್ಯ ಸಾಲದ ಆರೋಪಿಗಳು ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ನವೀನ್ ಕುಡಿದು ಪ್ರಜ್ಞಾಹೀನ ಸ್ಥಿತಿ ತಲುಪಿದಾಗ ಆತನ ದೇಹದ ಮೇಲೆ ಟೊಮೆಟೊ ಸಾಸ್ ಹಾಕಿ ಫೋಟೋ ತೆಗೆದುಕೊಂಡಿದ್ದಾರೆ. ಆ ಫೋಟೋವನ್ನು ಅನುಪಲ್ಲವಿ ಪ್ರಿಯಕರ ಹಿಮಂತನಿಗೆ ಕಳುಹಿಸಿದ್ದಾರೆ. ಆದರೆ ಫೋಟೋ ನೋಡಿ ಗಾಬರಿಗೊಂಡ ಹಿಮಂತ, ನವೀನ್ ಕೊಲೆಯಾದ ಎಂದು ಪೊಲೀಸರಿಗೆ ಹೆದರಿ ಆ.1ರಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಆತ್ಮಹತ್ಯೆ ಬಗ್ಗೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಘಟನೆ ನಡೆದಾಗ ಆತ್ಮಹತ್ಯೆ ಬಗ್ಗೆ ಕಾರಣ, ಸುಳಿವು ಪತ್ತೆಯಾಗಿರಲಿಲ್ಲ. ಸದ್ಯ ಈ ಸುಪಾರಿ ಪ್ರಕರಣದ ಬಳಿಕವೇ ಆತ್ಮಹತ್ಯೆ ಕಾರಣ ಬಯಲಾಗಿದೆ.

ಇದನ್ನೂ ಓದಿ: ಕಡಿಮೆ ಅಂಕದಿಂದ ಸಿಗದ ಎಲ್​ಎಲ್​ಬಿ ಸೀಟ್: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ

ಕಿಡ್ನಾಪ್ ಆಗಿದ್ದ ನವೀನ್ ತಮಿಳುನಾಡಿನಿಂದ ವಾಪಸ್‌ ಆಗಿದ್ದ. ಕಿಡ್ನಾಪ್ ಪ್ರಹಸನ ಅರಿತ ನವೀನ್ ಆಗಸ್ಟ್​ 2ರಂದು ತನ್ನ ಪತ್ನಿಯ ವಿರುದ್ಧ ದೂರು ನೀಡಿದ್ದ. ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು ಅನುಪಲ್ಲವಿ, ಅವರ ತಾಯಿ ಅಮುಜಮ್ಮ ಹಾಗೂ ಸಹಚರರಾದ ಪೀಣ್ಯ ಬಡಾವಣೆಯ ಹರೀಶ್, ನಾಗರಾಜು ಮತ್ತು ಮುಗಿಲನ್ ಎಂಬುವರನ್ನು ಬಂಧಿಸಿದ್ದಾರೆ.

ಆ ಪ್ರಕರಣ ಸಂಬಂಧ ನಿರಂತರ ಕಾರ್ಯಾಚರಣೆ ನಡೆಸಿ ನವೀನ್ ಪತ್ನಿ ಅನುಪಲ್ಲವಿ, ಅಮುಜಮ್ಮ, ಹರೀಶ್, ನಾಗರಾಜ್ ಹಾಗೂ ಮುಗಿಲನ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: 25 ವರ್ಷದ ಹಿಂದೆ ಕೊಲೆ ಮಾಡಿ ಪರಾರಿ: ಕಲಬುರಗಿಯಲ್ಲಿ ಸುಪಾರಿ ಕಿಲ್ಲರ್​ ಕೊನೆಗೂ ಅಂದರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.