ಮುಷ್ಕರ ವೇಳೆ ವಜಾಗೊಂಡಿದ್ದ 4,200 ಸಾರಿಗೆ ನೌಕರರು ಪುನರ್ ನೇಮಕ: ಸಚಿವ ಶ್ರೀರಾಮುಲು ಘೋಷಣೆ

author img

By

Published : Sep 21, 2021, 1:40 PM IST

ಮುಷ್ಕರ ವೇಳೆ ವಜಾಗೊಂಡಿದ್ದ 4,200 ಸಾರಿಗೆ ನೌಕರರು ಪುನರ್ ನೇಮಕ: ಸಚಿವ ಶ್ರೀರಾಮುಲು

ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ. ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರು ದೂರು ನೀಡಿದ್ದರು. ಅವರ ಎಲ್ಲ ಬೇಡಿಕೆ ಈಡೇರಿಸಲಾಗುವುದು ಎಂದಿದ್ದಾರೆ.

ಬೆಂಗಳೂರು: ಏಪ್ರಿಲ್​​​ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರ ವೇಳೆ ಮಾಡಲಾಗಿರುವ ವಜಾ, ಅಮಾನತು, ವರ್ಗಾವಣೆ ಪ್ರಕರಣಗಳು ಹಿಂಪಡೆಯಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಿನ್ನೆ ಮುಷ್ಕರ ನಡೆಸಿದರು. ವಜಾಗೊಂಡಿದ್ದ ನೌಕರರನ್ನ ಮರು ನೇಮಕ ಮಾಡಲಾಗುವುದು ಎಂದಿದ್ದಾರೆ. ಮುಷ್ಕರದ ವೇಳೆ ನೌಕರರ ಮೇಲೆ ನಿಗಮಗಳು ವಜಾ ಅಸ್ತ್ರ ಪ್ರಯೋಗಿಸಿದ್ದವು. ಈ ವೇಳೆ, 4,200 ನೌಕರರನ್ನ ವಜಾಗೊಳಿಸಲಾಗಿತ್ತು. ಹೀಗಾಗಿ ನೌಕರರ ಮರುನೇಮಕ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಮತ್ತೆ ಪ್ರತಿಭಟನೆ ನಡೆದಿತ್ತು.

ಮುಷ್ಕರ ವೇಳೆ ವಜಾಗೊಂಡಿದ್ದ 4,200 ಸಾರಿಗೆ ನೌಕರರು ಪುನರ್ ನೇಮಕ: ಸಚಿವ ಶ್ರೀರಾಮುಲು

ಪ್ರತಿಭಟನೆಯ ಬಳಿಕ ಸಾರಿಗೆ ನೌಕರ ಸಂಘಟನೆಯ ಮುಖಂಡರ ಜೊತೆ ಸಚಿವರು ಸಭೆ ನಡೆಸಿದ್ದರು. ಬಳಿಕ ಈ ಆದೇಶ ಹೊರಡಿಸಲಾಗಿದೆ. ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆ ಸರ್ಕಾರದ ಮುಂದಿಟ್ಟಿದ್ದರು. ಟ್ರೇಡ್ ಯೂನಿಯನ್ ಜೊತೆ ಚರ್ಚೆ ಮಾಡಲಾಗುತ್ತದೆ, ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ. ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರು ದೂರು ನೀಡಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಪ್ರಮುಖ ಬೇಡಿಕೆಯಂತೆ 4,200 ನೌಕರರನ್ನ ಪುನರ್ ನೇಮಕ ಮಾಡಲಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.