ಬೆಂಗಳೂರಲ್ಲಿ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ: ಬಾಲಕನಿಗೆ ಗಂಭೀರ ಗಾಯ

author img

By

Published : Oct 3, 2022, 9:45 PM IST

street-dogs-attack-on-student-in-bengaluru

ಶಾಲೆಯಿಂದ ಮರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ನಗರದ ಹೊರಮಾವು ಬಳಿಯ ರಾಜಣ್ಣ ಲೇಔಟ್‌ನಲ್ಲಿ ವಿದ್ಯಾರ್ಥಿ ಮೇಲೆ ಬೀದಿ ನಾಯಿಗಳು ಮಾರಣಾಂತಿಕ ದಾಳಿ ನಡೆಸಿವೆ. ಬಾಲಕನ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯ ಸೇರಿ ಒಟ್ಟು 10ಕ್ಕೂ ಅಧಿಕ ಭಾಗಗಳಲ್ಲಿ ಗಾಯಗಳಾಗಿದೆ. ಕೊಪ್ಪಳ ಮೂಲದ ಈರಣ್ಣ ಎನ್ನುವ ಕೂಲಿ ಕಾರ್ಮಿಕನ ಪುತ್ರ ಯಶವಂತ (8) ಮೇಲೆ ಬೀದಿ ನಾಯಿಗಳ ದಾಳಿ ನಡೆದಿದೆ.

ಭಾನುವಾರ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿ ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ಮರಳುವಾಗ ನಾಲ್ಕೈದು ನಾಯಿಗಳು ಬಾಲಕನ ಮೇಲೆ ದಾಳಿ ಮಾಡಿವೆ. ಬಾಲಕನ ಚೀರಾಟ ಕೇಳಿದ ಸ್ಥಳೀಯರು ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನರ್ಸರಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಈರಣ್ಣನಿಗೆ ಮಾಹಿತಿ ತಿಳಿಸಿದ್ದು, ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಬಾಲಕನ ಎಡ ಕಿವಿಯ ಕೆಳಗಡೆ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ನಾಲ್ಕಕ್ಕೂ ಹೆಚ್ಚಿನ ಹೊಲಿಗೆ ಹಾಕಲಾಗಿದೆ. ತಲೆ, ಹೊಟ್ಟೆ, ತೊಡೆ, ಕಾಲು ಸೇರಿ ವಿವಿಧೆಡೆ ನಾಯಿ ಕಚ್ಚಿದ ಹಲ್ಲಿನ ಗುರುತುಗಳು ಆಳವಾಗಿ ಮೂಡಿವೆ. ನಾಯಿ ಕಡಿತದಿಂದ ನರಗಳು ಹಾಗೂ ತಲೆಯೊಳಗೆ ಗಾಯವಾಗಿರುವ ಬಗ್ಗೆ ತಿಳಿಯಲು ಸ್ಕ್ಯಾನಿಂಗ್‌ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ.

ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 5 ಗ್ರಾಮಗಳಿಗೆ ನುಗ್ಗಿ 12 ಜನರ ಮೇಲೆ ದಾಳಿ ನಡೆಸಿದ ಪಿಟ್​ಬುಲ್ ಶ್ವಾನ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.