ಮೂತ್ರಪಿಂಡ ಆರೋಗ್ಯವಾಗಿರಲು ಈ ವಿಷಯಗಳತ್ತ ಕಾಳಜಿವಹಿಸಿ: ನಿರ್ಲಕ್ಷ್ಯ ವಹಿಸಿದ್ರೆ ಅಪಾಯ ಗ್ಯಾರಂಟಿ

author img

By

Published : Mar 10, 2022, 7:08 AM IST

'ಈಟಿವಿ ಭಾರತ'ದೊಂದಿಗೆ ಮಾತನಾಡಿದ  ಸುಷ್ಮಾರಾಣಿ ರಾಜು

ಇತ್ತೀಚೆಗೆ ದೇಶದಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಒಂದಲ್ಲ ಒಂದು ಕಾರಣಕ್ಕೆ ಕಿಡ್ನಿ ವೈಫಲ್ಯ ಪ್ರಕರಣಗಳು ಅಧಿಕವಾಗಿದೆ. ವಾರ್ಷಿಕವಾಗಿ 2-3 ಲಕ್ಷ ಜನರು‌ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದು ವರದಿಯೊಂದರಿಂದ ಬಹಿರಂಗವಾಗಿದೆ.

ಬೆಂಗಳೂರು: ದಿನೇ ದಿನೇ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಕಾಡ್ತಿದೆ. ಅದರಲ್ಲೂ, ಕಿಡ್ನಿ ಸಮಸ್ಯೆ ವಯಸ್ಸಿನ ಅಂತರವನ್ನ ದಾಟಿ ಹೆಚ್ಚಾಗ್ತಿದೆ.

ಇತ್ತೀಚೆಗೆ ದೇಶದಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಒಂದಲ್ಲ ಒಂದು ಕಾರಣಕ್ಕೆ ಕಿಡ್ನಿ ವೈಫಲ್ಯ ಪ್ರಕರಣಗಳು ಅಧಿಕವಾಗಿದೆ. ವಾರ್ಷಿಕವಾಗಿ 2-3 ಲಕ್ಷ ಜನರು‌ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದು ವರದಿಯೊಂದರಿಂದ ಬಹಿರಂಗವಾಗಿದೆ. ಮುಂದಿನ 5 ವರ್ಷಗಳಲ್ಲಿ 30 ರ ವಯೋಮಾನದ ಯುವ ಸಮುದಾಯದಲ್ಲಿ ದೀರ್ಘಾವಧಿ ಕಿಡ್ನಿ ಸಮಸ್ಯೆ (ಸಿ.ಕೆ.ಡಿ-ಕ್ರೋನಿಕ್ ಕಿಡ್ನಿ ಡಿಸೀಸ್) ಪ್ರಮಾಣ ಶೇ. 5 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದನ್ನ ವೈದ್ಯರು ಅಂದಾಜಿಸಿದ್ದಾರೆ.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸುಷ್ಮಾರಾಣಿ ರಾಜು

ಹೀಗಾಗಿ, ಪ್ರತಿ ವರ್ಷ ಮಾರ್ಚ್ 10 ರಂದು ವಿಶ್ವ ಕಿಡ್ನಿ ದಿನವನ್ನ ಆಚರಿಸಲಾಗುತ್ತದೆ. ಮೂತ್ರಪಿಂಡ ರೋಗ ಕಡಿಮೆ ಮಾಡುವುದು ಮತ್ತು ಮೂತ್ರಪಿಂಡ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅಂದಹಾಗೇ, ನಮ್ಮ ಶರೀರದಲ್ಲಿ ಕಿಡ್ನಿ ಅಂಗವು ಬಹು ಮುಖ್ಯ ಪಾತ್ರವಹಿಸಲಿದ್ದು, ದೇಹದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನ ಮೂತ್ರದ ಮೂಲಕ ಹೊರಹಾಕುವ ಕೆಲಸ ಮಾಡುತ್ತೆ. ಕಿಡ್ನಿ ತನ್ನ ಕೆಲಸವನ್ನ ನಿಲ್ಲಿಸಿದ್ದರೆ ದೇಹದೊಳಗಿರುವ ಕಲ್ಮಶವು ರಕ್ತದೊಂದಿಗೆ ಬೆರೆತು ಸಮಸ್ಯೆಗಳು ಶುರುವಾಗುತ್ತದೆ ಅಂತಾ ಸಕ್ರಾ ಆಸ್ಪತ್ರೆಯ ಹಿರಿಯ ಮೂತ್ರಪಿಂಡ ತಜ್ಞರಾಗಿರುವ ಸುಷ್ಮಾರಾಣಿ ರಾಜು 'ಈಟಿವಿ ಭಾರತ'ದೊಂದಿಗೆ ವಿವರಿಸಿದರು.

ರೋಗ ಲಕ್ಷಣಗಳೇನು?: ಸಾಮಾನ್ಯವಾಗಿ ಕಿಡ್ನಿ ಸಮಸ್ಯೆ ಇದ್ದರೆ ಆರಂಭದಲ್ಲಿ ಯಾವುದೇ ಲಕ್ಷಣಗಳು ಗೋಚರಗಳು ಆಗೋದಿಲ್ಲ. ಆದಾಗ್ಯೂ, ಕೈ- ಕಾಲು ಊತ, ಬಾಹು ಬರಬಹುದು, ಮುಖದಲ್ಲಿ ಸ್ವೇಲಿಂಗ್ಸ್, ಮೂತ್ರದಲ್ಲಿ ರಕ್ತ ಬರುವುದು, ರಾತ್ರಿ ಸಮಯದಲ್ಲಿ ಪದೇ ಪದೆ ಮೂತ್ರ ವಿಸರ್ಜನೆ ಆಗುವುದು ಸೇರಿದಂತೆ ಹಸಿವು ಆಗದೇ ಇರುವುದು, ಮೈ ತುರಿಕೆ, ರಕ್ತ ಹೀನತೆ ಇವೆಲ್ಲವೂ ಪ್ರಮುಖ ಗುಣಲಕ್ಷಣಗಳು.

ಸಿಂಪಲ್ ಟೆಸ್ಟ್​ನಲ್ಲೇ ಪತ್ತೆ ಸಾಧ್ಯ: ಕಿಡ್ನಿ ಸಮಸ್ಯೆ ಆರಂಭದಲ್ಲಿ ತಿಳಿಯದೇ ಇದ್ದರೂ ಅದರ ಪತ್ತೆಗಾಗಿ ಸಮಸ್ಯೆ ಹೆಚ್ಚಾಗುವವರೆಗೆ ಕಾಯುವ ಅವಶ್ಯಕತೆ ಇಲ್ಲ. ಬದಲಿಗೆ ಸಿಂಪಲ್ ಟೆಸ್ಟ್ ನಲ್ಲೇ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ಯೋ ಇಲ್ವೋ ಅನ್ನೋದನ್ನ ಅರಿಯಬಹುದು. ಈ ಕುರಿತು ಮಾಹಿತಿ ನೀಡಿರುವ ಡಾ. ಸುಷ್ಮಾ ರಾಣಿ ರಕ್ತ ಪರೀಕ್ಷೆ, ಯುರಿನ್ ಪರೀಕ್ಷೆ ಹಾಗೂ ಬಿಪಿ ಟೆಸ್ಟ್ ಮಾಡುವುದರಿಂದ ತಿಳಿಯಬಹುದು ಅಂತಾರೆ.

ಆರೋಗ್ಯಯುತ ಕಿಡ್ನಿಗೆ ಏನೆಲ್ಲ ಮಾಡಬೇಕು?: ಕಿಡ್ನಿಯು ಆರೋಗ್ಯಯುತವಾಗಿ ಇರಬೇಕು ಅಂದರೆ ಪೌಷ್ಟಿಕಾಹಾರದೊಂದಿಗೆ ಉತ್ತಮ ಆಹಾರ ಸೇವೆನೆ ಮಾಡಬೇಕು. ದೇಹದ ತೂಕದ ಕುರಿತು ಗಮನ ಹರಿಸಬೇಕು. ಒಬೆಸಿಟಿ ಬರದಂತೆ ನೋಡಿಕೊಳ್ಳುವುದು, ಆರೋಗ್ಯಕರ ಜೀವನ‌ಶೈಲಿ ರೂಪಿಸಿಕೊಳ್ಳಬೇಕು. ಹಾಗೇ ನಿತ್ಯ ವ್ಯಾಯಾಮ ಮಾಡುವುದು, 10-12 ಗ್ಲಾಸ್ ನೀರು ಕುಡಿಯುವುದು ಒಳ್ಳೆಯದು. ಧೂಮಪಾನ ಮಾಡದಿರುವುದು ಸೂಕ್ತ.

ಇದನ್ನೂ ಓದಿ: ಪಂಚರಾಜ್ಯಗಳ ಭವಿಷ್ಯ ನಿರ್ಧಾರ.. ಸಂಜೆ ವೇಳೆಗೆ ಪೂರ್ಣ ಫಲಿತಾಂಶ

ಇನ್ನು ದೀರ್ಘಾವಧಿ ಕಾಯಿಲೆಗಳಾದ ಶುಗರ್, ಬಿಪಿ ಕಾಯಿಲೆ ಇರುವವರು ಆಗಾಗ ತಪಾಸಣೆ ಮಾಡಿಸುವುದು. ಹಾಗೇ ಕಿಡ್ನಿ ವೈದ್ಯರನ್ನ ಭೇಟಿ ಮಾಡಿ ಸರಿಯಾದ ಚಿಕಿತ್ಸೆ ಪಡೆಯುವುದು ಒಳಿತು. ಅತಿಯಾದ ಪೇನ್ ಕಿಲ್ಲರ್ ಮಾತ್ರೆಗಳನ್ನ ಸೇವಿಸುವುದು, ಸ್ವಯಂ ಔಷಧ ತೆಗೆದುಕೊಳ್ಳುವುದನ್ನ ಮಾಡದಂತೆ ಡಾ. ಸುಷ್ಮಾ ರಾಣಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಸದ್ದಿಲ್ಲದೇ ಕೊಲ್ಲುವ ಮೂತ್ರಪಿಂಡ ರೋಗದ ಕುರಿತು ಎಚ್ಚರ ವಹಿಸುವುದು ಒಳಿತು.‌ ಒಮ್ಮೆ ಇದರ ಕುರಿತು ನಿರ್ಲಕ್ಷ್ಯ ವಹಿಸಿದರೆ ಡಯಾಲಿಸಿಸ್ ನಂತಹ ಶಿಕ್ಷೆಯನ್ನು ಜೀವ ಇರುವವರೆಗೂ ಅನುಭವಿಸಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.