ನೇಮಕಾತಿ ಪರೀಕ್ಷೆಗಳ ಅಕ್ರಮ ಸರ್ಕಾರದ ಯೋಗ್ಯತೆಗೆ ಹಿಡಿದ ಕನ್ನಡಿ: ಸಿದ್ದರಾಮಯ್ಯ

author img

By

Published : Aug 26, 2022, 2:46 PM IST

Siddaramaiah

ನೇಮಕಾತಿ ಪರೀಕ್ಷೆಗಳಲ್ಲಿ ಬಯಲಾಗುತ್ತಿರುವ ಅಕ್ರಮ ಸರ್ಕಾರದ ಯೋಗ್ಯತೆಯನ್ನು ತಿಳಿಸುತ್ತದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರು: ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರು ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣಗಳ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷಾ ಹಗರಣ ನಡೆದಿದ್ದು ಸರ್ಕಾರದ ಯೋಗ್ಯತೆಗೆ ಕನ್ನಡಿ ಹಿಡಿದಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಈ ಪ್ರಕರಣದ ಹಿರಿ ತಲೆಗಳನ್ನು ಇನ್ನೂ ಬಂಧಿಸಿಲ್ಲ, ಆಗಲೇ ಕೆಪಿಟಿಸಿಎಲ್ ಕಿರಿಯ ಅಭಿಯಂತರರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು, ಲಕ್ಷಗಟ್ಟಲೆ ಹಣ ಕೈ ಬದಲಾಗಿರುವುದು ಸರ್ಕಾರದ ಯೋಗ್ಯತೆಗೆ ಕನ್ನಡಿ ಎಂದಿದ್ದಾರೆ.

ಸರ್ಕಾರದ ಶೇ 40 ಅಕ್ರಮಗಳಿಗೆ ನಾಡಿನ ಜನ ಛೀಮಾರಿ ಹಾಕುತ್ತಿದ್ದಾಗ ಬಿಜೆಪಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಚರ್ಚೆಯನ್ನು ಹುಟ್ಟು ಹಾಕಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಿತು. ಪಿಎಸ್‌ಐ ನೇಮಕಾತಿ ಹಗರಣ ಹೊರಬರುತ್ತಿದ್ದಂತೆ ಹಿಜಾಬ್ ಮುಂತಾದ ವಿವಾದವನ್ನು ಸೃಷ್ಟಿಸಿ ಜನರನ್ನು ಮತ್ತೊಂದು ಸುತ್ತು ಬಕ್ರಾ ಮಾಡಬಹುದು ಎಂದು ನಂಬಿಕೊಂಡು ತಮ್ಮ ಗಲಭೆ ಸ್ಕ್ವಾಡ್‌ಗಳನ್ನು ಬೀದಿಗಿಳಿಸಿತು ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಗಣೇಶನಿಗೂ ಸಾವರ್ಕರ್​​ಗೂ ಏನು ಸಂಬಂಧ?: ಡಿ.ಕೆ ಶಿವಕುಮಾರ್ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.