ರಾಜ್ಯಕ್ಕೆ ಮತ್ತೊಂದು ಹೆಮ್ಮೆಯ ಗರಿ.. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆ

ರಾಜ್ಯಕ್ಕೆ ಮತ್ತೊಂದು ಹೆಮ್ಮೆಯ ಗರಿ.. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆ
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳನ್ನು ಸೇರ್ಪಡೆ ಮಾಡಲಾಗಿದೆ.
ನವದೆಹಲಿ: ಶ್ರೀಮಂತ ಕಲೆ, ವಾಸ್ತುಶಿಲ್ಪಗಳನ್ನು ಹೊಂದಿರುವ ಹೊಯ್ಸಳರ ಕಾಲದ ದೇವಾಲಯಗಳು ಯುನೆಸ್ಕೋ ವಿಶ್ವಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡು, ಮೈಸೂರಿನ ಸೋಮಾನಾಥಪುರದಲ್ಲಿರುವ ಹೊಯ್ಸಳರ ದೇವಾಲಯಗಳಿಗೆ ಈ ಗರಿಮೆ ಸಿಕ್ಕಿದೆ. ಈ ಮೂಲಕ ಭಾರತದ 42 ತಾಣಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಂತಾಗಿದೆ.
-
#WATCH | Riyadh, Saudi Arabia: On Sacred Ensembles of the Hoysalas being inscribed on the UNESCO World Heritage List, Permanent Representative of India to UNESCO, Vishal V Sharma says "India rejoices at the inclusion of the Sacred Ensembles of the Hoysalas on the World Heritage… pic.twitter.com/siytswfqXP
— ANI (@ANI) September 18, 2023
ಈ ಬಗ್ಗೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿರುವ ಯುನೆಸ್ಕೋ, ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ವಿಶಿಷ್ಠ ಮತ್ತು ವಿಶೇಷ ವಾಸ್ತುಶಿಲ್ಪದ ಕೆತ್ತನೆಗಳು ಇದೀಗ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತಕ್ಕೆ ಅಭಿನಂದನೆಗಳು ಎಂದಿದೆ. ಹೊಯ್ಸಳ ದೇವಾಲಯ 2014ರಿಂದ ವಿಶ್ವಪಾರಂಪರಿಕ ತಾಣಗಳ ಸಂಭಾವ್ಯ ಪಟ್ಟಿಯಲ್ಲಿತ್ತು. ಕೊನೆಗೂ ಮಾನ್ಯತೆ ಗಿಟ್ಟಿಸಿಕೊಂಡಿದೆ.
ದೇವಾಯಗಳ ವೈಶಿಷ್ಟ್ಯತೆಗಳು: 12 ರಿಂದ 13ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಗಳು ವಾಸ್ತುಶಿಲ್ಪಗಳಿಂದಲೇ ವಿಶ್ವವಿಖ್ಯಾತಿ ಪಡೆದಿವೆ. ಕರ್ನಾಟಕದ ಎಲ್ಲಾ ಹೊಯ್ಸಳ ದೇವಾಲಯಗಳನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ಅತ್ಯಂತ ವಿಶೇಷ ವಾಸ್ತುಶಿಲ್ಪದ ದೇವಾಲಯಗಳು ಇವುಗಳಾಗಿವೆ.
-
🔴BREAKING!
— UNESCO 🏛️ #Education #Sciences #Culture 🇺🇳 (@UNESCO) September 18, 2023
Just inscribed on the @UNESCO #WorldHeritage List: Sacred Ensembles of the Hoysalas, #India 🇮🇳. Congratulations! 👏👏
➡️ https://t.co/69Xvi4BtYv #45WHC pic.twitter.com/Frc2IGlTkf
ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಮಿಶ್ರಣವಾಗಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿವೆ. ಅದರಲ್ಲೂ ಬೇಲೂರು, ಹಳೇಬೀಡು ಮತ್ತು ಮೈಸೂರಿನ ಸೋಮನಾಥಪುರದಲ್ಲಿನ ಶಿಲ್ಪಕಲೆಗಳು ಅಪ್ರತಿಮವಾಗಿವೆ. ಸ್ಮಾರಕಗಳ ನಿರ್ಮಾಣಕ್ಕೆ 127 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ ಅಂತಾ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಕಲ್ಲಿನ ಕೆತ್ತನೆಗಳು ತುಂಬಾ ಸೂಕ್ಷ್ಮವಾಗಿವೆ.
ಹೊಯ್ಸಳ ದೇವಾಲಯಗಳು ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ದೇಶಕ್ಕೆ ಸಂತೋಷದ ವಿಷಯ. ಈ ಸಂತಸದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ.
-
It is a joyous occasion for our nation that two of our cultural legacies have been included in UNESCO's List of World Heritage Sites.
— Amit Shah (@AmitShah) September 18, 2023
Santiniketan in West Bengal and the Sacred Ensembles of the Hoysalas in Karnataka are living testaments to the eternity of our culture.
While… pic.twitter.com/bNcXYNIFv3
ಕಳೆದ ವರ್ಷ ನಾಮನಿರ್ದೇಶನ : 2022- 23ರ ವಿಶ್ವ ಪಾರಂಪರಿಕ ಪಟ್ಟಿಗೆ ಕರ್ನಾಟಕದ ಐತಿಹಾಸಿಕ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳರ ಕಾಲದ ದೇವಾಲಯಗಳನ್ನು ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಪಟ್ಟಿಗೆ ಭಾರತ ನಾಮನಿರ್ದೇಶನ ಮಾಡಿತ್ತು. ಇದೀಗ ದೇವಾಲಯಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಯುನೆಸ್ಕೋದ ಭಾರತದ ಪ್ರತಿನಿಧಿ ವಿಶಾಲ್ ಶರ್ಮಾ ಸೋಮವಾರ ಘೋಷಿಸಿದರು.
ಹೊಯ್ಸಳರ ಪವಿತ್ರ ದೇವಾಲಯಗಳನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದ್ದು ದೇಶವೇ ಸಂತೋಷಪಡುವಂತಾಗಿದೆ. ನಮ್ಮ ನಾಮನಿರ್ದೇಶನವನ್ನು ಮನ್ನಿಸಿದ್ದಕ್ಕಾಗಿ ಭಾರತದ ಪರವಾಗಿ ವಿಶ್ವ ಪರಂಪರೆಯ ಸಮಿತಿಗೆ ಧನ್ಯವಾದಗಳು ಎಂದಿದ್ದಾರೆ.
ನಿನ್ನೆಯಷ್ಟೇ ನೊಬೆಲ್ ಪುರಸ್ಕೃತ ಜಗತ್ಪ್ರಸಿದ್ಧ ಸಾಹಿತಿ ರವೀಂದ್ರನಾಥ ಟಾಗೋರ್ ಅವರು ಬದುಕಿ ಬಾಳಿದ ಅವರ ಮನೆಯಾದ ಪಶ್ಚಿಮ ಬಂಗಾಳದಲ್ಲಿರುವ 'ಶಾಂತಿನಿಕೇತನ'ವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. (ಪಿಟಿಐ)
