ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್​​ನ 'ಪೇ ಸಿಎಂ' ಅಭಿಯಾನ

author img

By

Published : Sep 23, 2022, 8:29 AM IST

KN_BNG

ಬಿಜೆಪಿ ವಿರುದ್ದ ಪೇಸಿಎಂ ಅಭಿಯಾನ​ ಮುಂದುವರೆಸಿರುವ ಕಾಂಗ್ರೆಸ್​​ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಪೇಸಿಎಂ ಎಂಬ ಪೋಸ್ಟರ್​ಗಳನ್ನ ಹರಿಬಿಟ್ಟಿದೆ.

ಬೆಂಗಳೂರು: ಕಾಂಗ್ರೆಸ್ ನಾಯಕರ ಬಂಧನದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಪೇಸಿಯಂ ಅಭಿಯಾನವನ್ನು ಮುಂದುವರಿದಿದೆ. ಅಭಿಯಾನ ಮುಂದುವರಿಸಿದ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಪೇಸಿಎಂ ಪೇಮೆಂಟ್ ಪೇಜ್ ಹರಿಬಿಟ್ಟಿದೆ.

ಪಿಎಸ್ಐ ಸ್ಕ್ಯಾಮ್ ₹ 80,00,000, ₹40% ಕಾಂಟ್ರಾಕ್ಟರ್ಸ್, 50 ಲಕ್ಷ ಅಸಿಸ್ಟೆಂಟ್ ಪ್ರೊಫೆಸರ್, 30 ಲಕ್ಷ ಜೂನಿಯರ್ ಇಂಜಿನಿಯರ್ಸ್ ನೇಮಕಕ್ಕೆ ಹಣ ರಿಸೀವ್ ಆಗಿದೆ ಎಂಬಂತೆ ಪೋಸ್ಟರ್ ರಚನೆ ಮಾಡಿ ಹರಿಬಿಡಲಾಗಿದೆ. ಇನ್ನು 2,500 ಕೋಟಿ ಪೇಮೆಂಟ್ ಸಿಎಂ ಸೀಟಿಗೆ ಫೇಲ್ ಆಗಿದೆ ಎಂಬ ಪೋಸ್ಟರ್ ಅಳವಡಿಸಿ ಲೇವಡಿ ಮಾಡಲಾಗಿದೆ.

  • 40% ಕಮಿಷನ್‌ಗೆ ಕಿರುಕುಳ ನೀಡಿ ಒಂದು ಜೀವ ಬಲಿ ಪಡೆದ ಆರೋಪಿಯಾಗಿದ್ದ ಈಶ್ವರಪ್ಪರನ್ನು ಒಂದು ದಿನವೂ ಬಂಧಿಸಿ ವಿಚಾರಣೆ ನಡೆಸಲಿಲ್ಲ.

    ಆದರೆ #PayCM ಪೋಸ್ಟರ್ ಅಂಟಿಸಿದವರ ವಿರುದ್ಧ 7,8 ಕೇಸ್‌ಗಳು, ಬಂಧನಕ್ಕೆ ವಿಶೇಷ ಪೊಲೀಸ್ ತಂಡ. ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ.@BSBommai ಅವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ?

    — Karnataka Congress (@INCKarnataka) September 22, 2022 " class="align-text-top noRightClick twitterSection" data=" ">

40% ಕಮಿಷನ್‌ ಕಿರುಕುಳ ನೀಡಿ ಒಂದು ಜೀವ ಬಲಿ ಪಡೆದು ಆರೋಪಿಯಾಗಿದ್ದ ಈಶ್ವರಪ್ಪರನ್ನು ಒಂದು ದಿನವೂ ಬಂಧಿಸಿ ವಿಚಾರಣೆ ನಡೆಸಲಿಲ್ಲ. ಆದರೆ, ಪೇಸಿಎಂ ಪೋಸ್ಟರ್ ಅಂಟಿಸಿದವರ ವಿರುದ್ಧ 7,8 ಕೇಸ್‌ಗಳು, ಬಂಧನಕ್ಕೆ ವಿಶೇಷ ಪೊಲೀಸ್ ತಂಡ. ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ. ಬಸವರಾಜ ಬೊಮ್ಮಾಯಿ ಅವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ? ಎಲ್ಲಾ ಇಲಾಖೆಯ ನಂತರ ಅಲ್ಪಸಂಖ್ಯಾತ ಇಲಾಖೆಗೂ 40% ಕಮಿಷನ್ ಸೋಂಕು ಹಬ್ಬಿದಂತಿದೆ.

ಶಾಲಾ ಕಟ್ಟಡ ತಯಾರಿದ್ದರೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ತಯಾರಿಲ್ಲದೆ ಮತ್ತೊಂದು ಹೊಸ ಕಟ್ಟಡಕ್ಕೆ ಅಧಿಕಾರಿಗಳು ಆಸಕ್ತಿ ತೋರಿಸುತ್ತಿರುವುದೇಕೆ? ಕಮಿಷನ್ ಆಸೆಗಾಗಿಯೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ, ಈ ಎಲ್ಲಾ ಅವಾಂತರಗಳನ್ನು ಗಮನಿಸುವುದಿಲ್ಲವೇ? ಎಂದು ಕಾಂಗ್ರೆಸ್​​ ಪ್ರಶ್ನಿಸಿದೆ.

  • 40% ಕಮಿಷನ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದಲೇ ಅಧಿಕೃತವಾಗಿ ಅಭಿಯಾನ ಆರಂಭಿಸಿದ್ದೇವೆ.

    ಈ ಅಭಿಯಾನದ ಭಾಗವಾಗಿ PAYCM ಪೋಸ್ಟರ್ ಅಂಟಿಸಿದ್ದಕ್ಕಾಗಿ ನಮ್ಮ ಕಾರ್ಯಕರ್ತರನ್ನು ರಾತ್ರೋರಾತ್ರಿ ಬಂಧಿಸಿದ್ದಾರೆ.

    ನಾಳೆ ನಾವೇ ಅಧಿಕೃತವಾಗಿ ಪೋಸ್ಟರ್ ಅಂಟಿಸುವ ಹೋರಾಟ ಮಾಡುತ್ತೇವೆ.
    - @siddaramaiah pic.twitter.com/rvXdwD3t0V

    — Karnataka Congress (@INCKarnataka) September 22, 2022 " class="align-text-top noRightClick twitterSection" data=" ">

ಇದಲ್ಲದೆ ಶಾಸಕ ರವಿ ಸುಬ್ರಮಣ್ಯ ಅವರ ಭಾವಚಿತ್ರ ಹಾಕಿ ರಾಘವೇಂದ್ರ ಬ್ಯಾಂಕ್ ಸ್ಕ್ಯಾಮ್​ಗೆ ಪೆಸಿಎಂ ಮಾಡಿ, ಕೋವಿಡ್ ಸ್ಕ್ಯಾಮ್​ಗೆ ಪೆಸಿಎಂ ಮಾಡಿ ಎಂದು ಸಚಿವ ಸುಧಾಕರ್ ಅವರ ಭಾವಚಿತ್ರ, ರಾಜ್ಯಸಭೆ ಸದಸ್ಯ ಜಗ್ಗೇಶ್ ಭಾವಚಿತ್ರ ಹಾಕಿ ವಿದ್ಯಾರ್ಥಿಗಳ ಶ್ವೇತ ಸ್ಕ್ಯಾಮ್​ಗೆ ಪೇಸಿಎಂ ಮಾಡಿ, ಆಹಾರ ಕಿಟ್ ಸ್ಕ್ಯಾಮ್​ಗೆ ಪೆಸಿಎಂ ಮಾಡಿ ಎಂದು ಸಚಿವ ಶಿವರಾಂ ಹೆಬ್ಬಾರ್ ಭಾವಚಿತ್ರ, ಸಚಿವ ಅಶ್ವಥ್ ನಾರಾಯಣ್ ಭಾವಚಿತ್ರ ಹಾಕಿ, ಪಿಎಸ್ಐ ಸ್ಕ್ಯಾಮ್​ಗೆ ಪೇಸಿಎಂ ಮಾಡಿ ಮತ್ತು ಬಿ.ವೈ.ವಿಜಯೇಂದ್ರ ಭಾವಚಿತ್ರ ಹಾಕಿ ವಿಜಯೇಂದ್ರ ಸೇವಾ ತೆರಿಗೆ ಸ್ಕ್ಯಾಮ್​ಗೆ ಪೇ ಸಿಎಂ ಮಾಡಿ ಎಂದು ಕಾಂಗ್ರೆಸ್ ಲೇವಡಿ ಮಾಡಿದ್ದು ಡೀಲ್ ನಿಮ್ಮದು ಕಮಿಷನ್ ನಮ್ದು ಎಂಬ ಅಡಿ ಬರಹ ನೀಡಿದೆ.

KN_BNG
ಕಾಂಗ್ರೆಸ್​​ನ ಪೇಸಿಎಂ ಅಭಿಯಾನ

ಇದನ್ನೂ ಓದಿ: ಪೇಸಿಎಂ, ಪೇಎಕ್ಸ್‌ಸಿಎಂ ಅಲ್ಲ. ಇದು ಪೇ ಟೀಂ.. ಎಎಪಿಯಿಂದಲೂ ಕ್ಯೂಆರ್‌ ಕೋಡ್‌ ಮಾದರಿ ಪೋಸ್ಟರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.