ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

author img

By

Published : Sep 17, 2022, 2:32 PM IST

Karnataka high court

ರಾಜಕಾಲುವೆ ಒತ್ತುವರಿ ವಿಚಾರವಾಗಿ ಸರ್ವೆ ಮತ್ತು ಭೂ ದಾಖಲೆಗಳ ಇಲಾಖೆ ನಡೆಸಿರುವ ವರದಿಗೆ ಬಾಗ್ಮನೆ ಟೆಕ್ ಪಾಕ್​ನಿಂದ ಪ್ರತಿಕ್ರಿಯೆ ಬರುವವರೆಗೂ ಕ್ರಮಕ್ಕೆ ಮುಂದಾಗಬಾರದು ಎಂದು ಬಿಎಂಪಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿರುವ ಆರೋಪದಲ್ಲಿ ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.

ಬಾಗ್ಮನೆ ಟೆಕ್ ಪಾರ್ಕ್​ನಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಆರೋಪಿಸಿದ್ದ ಬಿಬಿಎಂಪಿ ತೆರವಿಗೆ ಜಾಗ ಗುರುತು ಮಾಡಿತ್ತು. ಇದನ್ನು ಪ್ರಶ್ನಿಸಿ ಬಾಗ್ಮನೆ ಟೆಕ್ ಪಾರ್ಕ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಸರ್ವೆ ಮತ್ತು ಭೂ ದಾಖಲೆಗಳ ಇಲಾಖೆ ನಡೆಸಿರುವ ವರದಿಗೆ ಬಾಗ್ಮನೆ ಟೆಕ್ ಪಾರ್ಕ್​ನಿಂದ ಪ್ರತಿಕ್ರಿಯೆ ಬರುವವರೆಗೂ ಕ್ರಮಕ್ಕೆ ಮುಂದಾಗಬಾರದು. ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಮೀಕ್ಷೆ ನಡೆಸದೇ ರಾಜ ಕಾಲುವೆಯ ಮೇಲೆ ಬಾಗ್ಮನೆ ಟೆಕ್ ಪಾರ್ಕ್ ಕಾಂಪೌಂಡ್ ನಿರ್ಮಿಸಿದೆ ಎಂದು ತೆರವು ಮಾಡುವುದಾಗಿ ಮೌಖಿಕವಾಗಿ ತಿಳಿಸಿದ್ದಾರೆ. ಬಾಗ್ಮನೆ ಟೆಕ್ ಪಾರ್ಕ್​ಗೆ ಹೊಂದಿಕೊಂಡಿರುವ ಪೂರ್ವಂಕರ್​​ ನಿರ್ಮಿಸಿರುವ ವಸತಿ ನಿಲಯಗಳು ಒತ್ತುವರಿಯಿಂದ ಟೆಕ್ ಪಾರ್ಕ್​ನಲ್ಲಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಬಿಬಿಎಂಪಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಬಿಬಿಎಂಪಿ ಸರ್ವೆ ನಡೆಸಿತ್ತು. ಇದನ್ನು ಪೂರ್ವಂಕರ್​ ಸಂಸ್ಥೆಯವರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಮರು ಸರ್ವೇ ಮಾಡಿ ಬಳಿಕ‌ ಒತ್ತುವರಿ ಗುರುತಿಸಬೇಕು ಎಂದು ಸೂಚನೆ ನೀಡಿತ್ತು. ಆದರೂ ಈವರೆಗೂ ಬಿಬಿಎಂಪಿ ಸರ್ವೇ ಮಾಡಿಲ್ಲ. ಈ ನಡುವೆ ಒತ್ತುವರಿಯಾಗಿದೆ ಎಂದು ಆರೋಪಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಪರ ವಕೀಲರು, ಪೂರವಂಕರ್​ ವಸತಿ ನಿಲಯಗಳ ಒತ್ತುವರಿ ಸಂಬಂಧ ಈಗಾಗಲೇ ಸರ್ವೇ ಮಾಡಲಾಗಿದ್ದು ನೋಟಿಸ್ ಜಾರಿ ಮಾಡಿರುವುದಾಗಿ ಹೇಳಿದರು. ಈ ವೇಳೆ ಸರ್ವೇ ನಡೆಸಿರುವ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ ನ್ಯಾಯಪೀಠ, ಒತ್ತವರಿಯಾಗಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿದೆ.

ಇದನ್ನೂ ಓದಿ: ಬಾಗಮನೆ ಟೆಕ್ ಪಾರ್ಕ್, ಪೂರ್ವಂಕರ ಸಂಸ್ಥೆಗಳಿಂದ ರಾಜಕಾಲುವೆ ಒತ್ತುವರಿ: ಪಾಲಿಕೆಯ ಎರಡನೇ ಸಮೀಕ್ಷೆಯಲ್ಲಿ ದೃಢ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.