75 ವರ್ಷ ದಾಟಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ: ಅಶ್ವತ್ಥನಾರಾಯಣ

author img

By

Published : Dec 8, 2022, 3:20 PM IST

75 ವರ್ಷ ದಾಟಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಬೇಕು: ಸಚಿವ ಅಶ್ವತ್ಥನಾರಾಯಣ

ಸಿದ್ದರಾಮಯ್ಯ ವಯಸ್ಸು ನಿವೃತ್ತಿ ದಾಟಿದೆ. ಅವರು ಈ ಕಾಲಕ್ಕೆ ಪ್ರಸ್ತುತ ನಾಯಕರಲ್ಲ. ಅವರು ಪಕ್ಷಕ್ಕೆ ಮಾರ್ಗದರ್ಶಕರಾಗಿರಬೇಕೇ ಹೊರತು ಸ್ಪರ್ಧಿಯಾಗಬಾರದು.- ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: 75 ವರ್ಷ ದಾಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತುತ ನಾಯಕರಲ್ಲ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ ಪಕ್ಷದ ಮಾರ್ಗದರ್ಶಕರಾಗಿರಬೇಕು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪಮಂಡಲ್ಲಿರುವ ಪಕ್ಷದ ನಾಯಕ. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರು ಅವರಾಗಿದ್ದು, ಅವರ ಸಾಧನೆಗಳು ಇಡೀ ಜಗತ್ತಿಗೆೆ ಗೊತ್ತಿದೆ. ಸಿದ್ದರಾಮಯ್ಯ ವಯಸ್ಸು ನಿವೃತ್ತಿ ದಾಟಿದೆ. ಅವರು ಈ ಕಾಲಕ್ಕೆ ಪ್ರಸ್ತುತವಲ್ಲ. ಅವರು ಪಕ್ಷಕ್ಕೆ ಮಾರ್ಗದರ್ಶಕರಾಗಿರಬೇಕು. ನಾನು ಇನ್ನೂ ಕಣದಲ್ಲಿದ್ದೇನೆ ಎನ್ನುವ ಮೂಲಕ ಸ್ವಾರ್ಥಿಯಾಗಬಾರದು. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಆದರೆ ಅಂಥ ಯಾವ ಗುಣವೂ ಸಿದ್ದರಾಮಯ್ಯ ಅವರಿಗೆ ಇಲ್ಲ. ಕೇವಲ ನಾನು, ನಾನು, ನಾನು ಎನ್ನುವುದಷ್ಟೇ ಅವರಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜನಪರ ಕೆಲಸಕ್ಕೆ ಜನರ ಬೆಂಬಲ: ದೇಶದ ಅನೇಕ ಕಡೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗುತ್ತಿರುವುದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ಗುಜರಾತ್​ನ ಜಯಭೇರಿಯೇ ಇದಕ್ಕೆ ದೊಡ್ಡ ಸಂದೇಶವಾಗಿದೆ ಎಂದರು.

ದೆಹಲಿ ಮುನ್ಸಿಪಲ್ ಎಲೆಕ್ಷನ್ ಹಿನ್ನಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಹಳ ವರ್ಷದಿಂದ ನಮ್ಮ ಪಕ್ಷ ಅಲ್ಲಿ ಆಡಳಿತ ನಡೆಸಿದೆ. ಸ್ಥಳೀಯ ಚುನಾವಣೆ ಸವಾಲಿನಿಂದ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ತೀರ್ಪನ್ನು ತಗೆದುಕೊಳ್ಳಬೇಕು. ಹೊಸ ಪ್ರಯತ್ನದಲ್ಲಿ ಜನರು ಬೇರೆಯವರಿಗೂ ಅವಕಾಶ ಕೊಟ್ಟಿರುತ್ತಾರೆ. ಅಲ್ಲಿ ನಾವು ಸೋತಿದ್ದೇವೆ.ಆದರೆ ನಮಗೆ ತೀರಾ ಹಿನ್ನಡೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು.

ರಾಜ್ಯದ ಮೇಲೂ ಗುಜರಾತ್​ ಫಲಿತಾಂಶದ ಪ್ರಭಾವ: ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. 2023 ರಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ರಚನೆಯಾಗಲಿದೆ. ಕಾಂಗ್ರೆಸ್ ಎಲ್ಲಾ ಕಡೆ ವಾಶ್ ಔಟ್ ಆಗುತ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ವಿಫಲವಾಗಿರೋದು ಇದರಿಂದ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುವುದಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.