ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ.. ಹಳೆ ವೈಷಮ್ಯದಿಂದಾಗಿಯೇ ಕೊಲೆ ಶಂಕೆ

author img

By

Published : Nov 13, 2021, 1:47 PM IST

Updated : Nov 13, 2021, 5:55 PM IST

man-attacked-and-killed-in-middle-of-the-road-at-bangalore

ಇಂದು ಬೆಳಗ್ಗೆ ನಾಗವಾರದಲ್ಲಿ ಹೋಗುವಾಗ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿ‌ ದುಷ್ಕರ್ಮಿಗಳ ಗುಂಪು ಏಕಾಏಕಿ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ ಹಾಗೂ ತಲೆಭಾಗಕ್ಕೆ ಮಾರಾಕಾಸ್ತ್ರದಿಂದ ಕೊಚ್ಚಿದ್ದಾರೆ.

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ‌‌ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ (Hennuru Police station) ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru Rural District) ಮೂಲದ ಶ್ರೀಧರ್ ಮೃತಪಟ್ಟ ವ್ಯಕ್ತಿ ಎಂದು‌ ಗುರುತಿಸಲಾಗಿದೆ.

ಇಂದು ಬೆಳಗ್ಗೆ ನಾಗವಾರದಲ್ಲಿ ಹೋಗುವಾಗ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿ‌ ದುಷ್ಕರ್ಮಿಗಳ ಗುಂಪು ಏಕಾಏಕಿ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ ಹಾಗೂ ತಲೆಭಾಗಕ್ಕೆ ಮಾರಕಾಸ್ತ್ರದಿಂದ (Murder in Bengaluru) ಕೊಚ್ಚಿದ್ದಾರೆ. ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ಶ್ರೀಧರ್ ಮೃತಪಟ್ಟಿದ್ದಾರೆ.

ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ..ಹಳೆ ವೈಷಮ್ಯಕ್ಕೆ ಬಲಿಪಡೆದ ಶಂಕೆ

ಹಲ್ಲೆ ಮಾಡುವಾಗ ಆರೋಪಿಗಳು ತಮಿಳಿನಲ್ಲಿ ಮಾತನಾಡುತ್ತಿರುವುದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಹೆಣ್ಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕೊಲೆಗೆ ಹಳೇ ವೈಷ್ಯಮವೇ ಕಾರಣವಿರಬಹುದು ಎಂದು ಶಂಕಿಸಿದ್ದಾರೆ. ಸ್ಥಳದಲ್ಲಿ ದೊರೆತಿರುವ ಸಾಕ್ಷ್ಯಾಧಾರ ಸಂಗ್ರಹಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಡಿಸಿಪಿ ಪ್ರತಿಕ್ರಿಯೆ:

ಸ್ಥಳಕ್ಕೆ ನಗರ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ‌ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾರೆ. ಮೃತನನ್ನು ಶ್ರೀಧರ್ ಎಂದು ಗುರುತಿಸಲಾಗಿದ್ದು, ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದ.‌ ಜೊತೆಗೆ ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಎಂಬ ಸಂಘ ಸಂಸ್ಥೆಯ ಉಪಾಧ್ಯಕ್ಷನಾಗಿದ್ದ ಎಂದು ತಿಳಿಸಿದ್ದಾರೆ.

man-attacked-and-killed-in-middle-of-the-road-at-Bangalore
ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ..ಹಳೆ ವೈಷಮ್ಯಕ್ಕೆ ಬಲಿಪಡೆದ ಶಂಕೆ

ಎರಡು ವಿಶೇಷ ತಂಡ ರಚನೆ:

ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತನ್ನ ಕಾರಿನಲ್ಲಿ ಹೋಗುವಾಗ‌‌ ಐವರು ಆರೋಪಿಗಳು ಶ್ರೀಧರ್​ನನ್ನು ಅಡ್ಡಗಟ್ಟಿದ್ದಾರೆ. ಕೂಡಲೇ ಶ್ರೀಧರ್ ಸ್ಥಳದಿಂದ ತಪ್ಪಿಸಿಕೊಂಡು (Bengaluru shridhar murder) ಓಡಿ ಹೋದರೂ ಕೂಡ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಹಂತಕರಿಗಾಗಿ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Lorry - Auto Accident; ಯಾದಗಿರಿಯಲ್ಲಿ ಭೀಕರ ಅಪಘಾತ; ಮಗು ಸೇರಿ ಮೂವರ ದುರ್ಮರಣ

Last Updated :Nov 13, 2021, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.