ಸದನದ ಸಮಯ ಹಾಳಾಯ್ತು ಎಂದು ಯಾರೂ ನಮ್ಮನ್ನು ಕೇಳಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

author img

By

Published : Feb 21, 2022, 6:34 PM IST

Lakshmi Hebbalkar talk about session and ishwarappa flag talk issue

ರಾಷ್ಟ್ರ ಧ್ವಜದ ಬಗ್ಗೆ ಅಪಮಾನ ಮಾಡಿದವರ ವಿರುದ್ಧ ಪ್ರತಿಭಟನೆ ಮಾಡಬಾರದಾ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಪ್ರಶ್ನಿಸಿದ್ದಾರೆ.

ಬೆಂಗಳೂರು: ಸದನದ ಸಮಯ ಹಾಳಾಯ್ತು ಎಂದು ಯಾರೂ ಇಲ್ಲಿಯವರೆಗೂ ನಮ್ಮನ್ನ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಸದನದ ಸಮಯ ಹಾಳಾಯ್ತು ಎಂದು ಯಾರೂ ನಮ್ಮನ್ನು ಕೇಳಿಲ್ಲ

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಮುಂದುವರಿಸಿದ್ದೇವೆ. ಬಿಜೆಪಿಯವರಿಗೆ ಕಣ್ಣು ಕಾಣ್ತಿಲ್ಲ, ಕಿವಿಯೂ ಕೇಳ್ತಿಲ್ಲ. ಜನಪರ ಕಾಳಜಿ ಯಾರಿಗೆ ಇದೆ ಎಂದು ಜನರಿಗೆ ಗೊತ್ತಿದೆ ಎಂದರು.

ಕೊರೊನಾ, ಪ್ರವಾಹ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರಾಷ್ಟ್ರ ಧ್ವಜದ ಬಗ್ಗೆ ಅಪಮಾನ ಮಾಡಿದವರ ಬಗ್ಗೆ ಪ್ರತಿಭಟನೆ ಮಾಡಬಾರದಾ?. ಇದು ಕಾಂಗ್ರೆಸ್​​​ನ ಹೋರಾಟ ಅಲ್ಲ. ಇದು ದೇಶದ ಹೋರಾಟ. ನಾನೂ ಫೇಸ್​​ಬುಕ್, ಟ್ವಿಟರ್, ಇನ್​​ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿದ್ದೇನೆ. ನನಗೆ ಆ ರೀತಿಯ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಗದ್ದಲದ ನಡುವೆಯೂ 4 ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.