ಕೊಚ್ಚಿ ಬ್ಯೂಟಿಪಾರ್ಲರ್ ಮೇಲೆ ಗುಂಡಿನ ದಾಳಿ ಪ್ರಕರಣ: 8 ದಿನಗಳ ಕಾಲ ರವಿ ಪೂಜಾರಿ ಕೇರಳ ಪೊಲೀಸರ ವಶಕ್ಕೆ
Updated on: Jun 2, 2021, 9:13 PM IST

ಕೊಚ್ಚಿ ಬ್ಯೂಟಿಪಾರ್ಲರ್ ಮೇಲೆ ಗುಂಡಿನ ದಾಳಿ ಪ್ರಕರಣ: 8 ದಿನಗಳ ಕಾಲ ರವಿ ಪೂಜಾರಿ ಕೇರಳ ಪೊಲೀಸರ ವಶಕ್ಕೆ
Updated on: Jun 2, 2021, 9:13 PM IST
ಕೊಚ್ಚಿ ಬ್ಯೂಟಿ ಪಾರ್ಲರ್ ಮೇಲಿನ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಅಪರಾಧ ವಿಭಾಗದ ಕಸ್ಟಡಿಗೆ ನೀಡಲು ಎರ್ನಾಕುಲಂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮ್ಮತಿಸಿತ್ತು...
ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಸೆಂಟ್ರಲ್ ಜೈಲಿನಲ್ಲಿದ್ದ ಪಾತಕಿ ರವಿ ಪೂಜಾರಿಯನ್ನ ಕೇರಳ ಪೊಲೀಸರು 8 ಎಂಟು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
ಕೊಚ್ಚಿ ಬ್ಯೂಟಿ ಪಾರ್ಲರ್ ಮೇಲಿನ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಅಪರಾಧ ವಿಭಾಗದ ಕಸ್ಟಡಿಗೆ ನೀಡಲು ಎರ್ನಾಕುಲಂ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮ್ಮತಿಸಿತ್ತು.
2018 ರಲ್ಲಿ ಎರ್ನಾಕುಲಂನ ಕಡವಂತರದಲ್ಲಿರುವ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿಪಾರ್ಲರ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿನ್ ವರ್ಗೀಸ್ ಮತ್ತು ಬಿಲಾಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಇವರು ಪಾತಕಿ ರವಿ ಪೂಜಾರಿ ಸಹಚರರು ಎನ್ನಲಾಗ್ತಿದೆ. ಈ ಸಂಬಂಧ ಮಂಗಳವಾರ ನಗರಕ್ಕೆ ಆಗಮಿಸಿದ್ದ ಕೇರಳ ಪೊಲೀಸರು ಬಾಡಿವಾರೆಂಟ್ ಮೇಲೆ 8 ದಿನಗಳ ಕಾಲ ರವಿ ಪೂಜಾರಿಯನ್ನು ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದೊಯ್ದಿದ್ದಾರೆ.
ಎರಡು ದಶಕಗಳ ಹಿಂದೆ ದೇಶ ಬಿಟ್ಟು ಪರಾರಿಯಾಗಿದ್ದ ಈತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಡುವೆ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ನೀಡಿದ ಮಾಹಿತಿ ಮೇರೆಗೆ ಕಳೆದ ವರ್ಷ 2019 ಜ.19 ರಂದು ಸೆನೆಗಲ್ ಪೊಲೀಸರು ಬಂಧಿಸಿದ್ದರು.
ಆದರೆ ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸಲು ಕಾನೂನು ಸಮಸ್ಯೆ ಎದುರಾಗಿತ್ತು. ಅಂತಿಮವಾಗಿ ಕಾನೂನು ಹೋರಾಟ ಪ್ರಕ್ರಿಯೆ ಮುಗಿಸಿಕೊಂಡು ದೇಶಕ್ಕೆ ಕರೆತರುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದರು.
ಓದಿ: ಅಶ್ವತ್ಥ ನಾರಾಯಣ ಜಾತಿ ಲಸಿಕೆ ಡ್ರೈವ್ ಶುರು ಮಾಡಿದ್ದಾರಾ?: ಲಾವಣ್ಯ ಬಲ್ಲಾಳ್ ಪ್ರಶ್ನೆ
