ಇಡಿ, ಸಿಬಿಐ ಟೆನ್ಶನ್‌ನಲ್ಲಿ ನನಗೆ ನಿದ್ದೆಯೇ ಬರುತ್ತಿಲ್ಲ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು

author img

By

Published : Aug 5, 2022, 4:47 PM IST

Updated : Aug 5, 2022, 6:52 PM IST

ಕೆಜಿಎಫ್ ಬಾಬು

ನಲವತ್ತು ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಇಡಿಯವರು ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ ಎಂದು ಕೆಜಿಎಫ್ ಬಾಬು ಹೇಳಿದರು.

ಬೆಂಗಳೂರು: ಇಡಿ ಬರುತ್ತಾರೆ, ಸಿಬಿಐ ಬರುತ್ತಾರೆ ಎಂದು ನಿದ್ದೆಯೂ ಬರುತ್ತಿಲ್ಲ, ಟೆನ್ಷನ್ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಆತಂಕ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಲವತ್ತು ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಇಡಿಯವರು ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ. ನನ್ನ ಹೆಂಡತಿಗೆ ಬೆದರಿಸಿದ್ದಾರೆ. ಹೆಂಡತಿಗೆ ಆಪರೇಷನ್ ಆಗಿದೆ. ಆದರೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದೇನೆ. ಆದರೂ ನನಗೆ ಯಾವುದೇ ಭಯವಿಲ್ಲ ಎಂದರು.

ಎಂಎಲ್​​ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾರಣ ಇಡಿ ನನಗೆ ಕಿರುಕುಳ ನೀಡುತ್ತಿದೆ. ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದಿದ್ದೆ. ಆದರೆ, ಈಗ ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಪಾರ್ಟಿಯಲ್ಲೇ ಇರುತ್ತೇನೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ನಾನು ಕೆಲಸ ಮಾಡ್ತೇನೆ. ಅಲ್ಲಿಂದ ಸ್ಪರ್ಧಿಸಿ ಎಂದು ಜನ ಒತ್ತಾಯಿಸುತ್ತಿದ್ದಾರೆ. ಚಿಕ್ಕಪೇಟೆಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂದು ತಿಳಿಸಿದರು.

ಕಂಟಕವಾಯ್ತು ಶಾಸಕ ಜಮೀರ್ ದೋಸ್ತಿ: ಗುಜರಿ ವ್ಯಾಪಾರ ಹಾಗೂ ರಿಯಲ್‌ ಎಸ್ಟೇಟ್​​​ನಿಂದಲೇ ಕೋಟ್ಯಂತರ ರೂ.ಆಸ್ತಿ ಸಂಪಾದನೆ ಮಾಡಿರುವ ಕಾಂಗ್ರೆಸ್​​ನ ಯೂಸೂಫ್ ಶರೀಫ್ (ಕೆಜಿಎಫ್ ಬಾಬು) ಚಾಮರಾಜಪೇಟೆ ಶಾಸಕ ಜಮೀರ್ ಗೆ ನೀಡಿದ ಮೂರು ಕೋಟಿ ನೀಡಿದ ಸಾಲ ಕಂಟಕವಾಗತೊಡಗಿದೆ. ಕೆಜಿಎಫ್ ಬಾಬು ವಿರುದ್ಧ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌. ಮತ್ತೊಂದೆಡೆ ಪಿಎಂಎಲ್‌ಎ ಪ್ರಕರಣದಡಿ ಜಪ್ತಿ ಮಾಡುವ ವಸ್ತುಗಳ ಅಧಿಕಾರ ಹೊಂದಿರುವ ಅಜ್ಯುಡಿಕ್ಟಿಂಗ್ ಕಮಿಟಿಯು‌ ಆಗಸ್ಟ್ 10ರೊಳಗೆ ಉತ್ತರ ನೀಡುವಂತೆ ಕೆಜಿಎಫ್ ಬಾಬುಗೆ ಶೋಕಾಶ್ ನೊಟೀಸ್ ನೀಡಿದೆ.

ಇಡಿ, ಸಿಬಿಐ ಟೆನ್ಶನ್‌ನಲ್ಲಿ ನನಗೆ ನಿದ್ದೆಯೇ ಬರುತ್ತಿಲ್ಲ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು

ಐಎಂಎ ಪ್ರಕರಣದಲ್ಲಿ ಅವ್ಯವಹಾರ ನಡೆಸಿದ ಆರೋಪದಡಿ ಕಳೆದ ವರ್ಷ ಇಡಿ ಶಾಸಕ ಜಮೀರ್ ಮನೆ ಮೇಲೆ‌ ದಾಳಿ ನಡೆಸಿದ್ದಾಗ ಕೆಜಿಎಫ್ ಬಾಬು 3 ಕೋಟಿ ರೂ.ಸಾಲ ನೀಡಿರುವುದು ತನಿಖೆ ವೇಳೆ ಕಂಡುಬಂದಿತ್ತು. ಇದೇ ಜಾಡಿನ ಮೇರೆಗೆ ಇಡಿ ಅಧಿಕಾರಿಗಳು ಬಾಬು ಮನೆ ಮೇಲೆ ದಾಳಿ‌ ನಡೆಸಿ ಚಿನ್ನಾಭರಣ ಹಾಗೂ ದುಬಾರಿ ಮೌಲ್ಯದ ವಾಚ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿತ್ತು.

ಜಪ್ತಿಯಾದ ಚಿನ್ನಾಭರಣ ಬಿಡಿಸಿಕೊಳ್ಳಲು ಬಾಬು ಅಜ್ಯುಡಿಕ್ಟಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ್ದಾರೆ‌. ಇನ್ನೊಂದೆಡೆ ಇಡಿ ಅಧಿಕಾರಿಗಳು ಐಎಂಎ ಹಗರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಮನ್ಸೂರ್ ಖಾನ್ ಜಮೀರ್ ಗೆ 63 ಕೋಟಿ ನೀಡಿದ್ದರು. ಇದೇ ವ್ಯಕ್ತಿಗೆ ಕೆಜಿಎಫ್ ಬಾಬು 3 ಕೋಟಿ ಸಾಲ ನೀಡಿದ್ದು, ಇದನ್ನ ವಾಪಸ್ ಸಹ ಪಡೆದುಕೊಂಡಿಲ್ಲ.

ತನಿಖೆಯಲ್ಲಿ ಐಷಾರಾಮಿ ಜೀವನ ನಡೆಸಲು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಬಾಬು ಅವರಿಂದ ಜಪ್ತಿಯಾದ ವಸ್ತುಗಳನ್ನು ನೀಡದಂತೆ ಇಡಿಯು ಕಮಿಟಿಗೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಆಗಸ್ಟ್ 10 ರೊಳಗೆ ಲಿಖಿತ ಉತ್ತರ ನೀಡಲು ಕೆಜಿಎಫ್ ಬಾಬುಗೆ ಅಜ್ಯುಡಿಕ್ಟಿಂಗ್ ಕಮಿಟಿಯಿಂದ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಕೆಜಿಎಫ್ ಬಾಬು ಉತ್ತರ ನೀಡಿದ ನಂತರ‌ ವಶಪಡಿಸಿಕೊಂಡ ವಸ್ತುಗಳ ವಾಪಸ್ ನೀಡುವ ಬಗ್ಗೆ ಸಮಿತಿ ತೀರ್ಮಾನಿಸಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ 'ನಕಲಿ ಛಾಪಾ ಕಾಗದ ತೆಲಗಿ'ಗಳ ಸದ್ದು; ಸಿಸಿಬಿಯಿಂದ 10 ಮಂದಿ ಬಂಧನ

Last Updated :Aug 5, 2022, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.