ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

author img

By

Published : Oct 3, 2022, 12:05 PM IST

Karnataka Fire and Emergency Services Department

ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಹೊಂದಿದ್ದ, ಅಧಿಕೃತ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ. ಅಷ್ಟೇ ಅಲ್ಲದೇ ಅಸಂಬದ್ಧವಾಗಿ ಸರಣಿ ಟ್ವೀಟ್​ಗಳನ್ನು ಮಾಡಲಾಗುತ್ತಿದೆ.

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಇಲಾಖೆ ಹೊಂದಿದ್ದ ಟ್ವಿಟರ್ ಖಾತೆಯನ್ನು ಎರಡು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದೆ. ಅಸಂಬದ್ಧವಾಗಿ ಸರಣಿ ಟ್ವೀಟ್ ಮಾಡಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಸದ್ಯ ಖಾತೆ ಹ್ಯಾಕ್ ಆಗಿರುವುದನ್ನು ಗಮನಿಸಿರುವ ಇಲಾಖೆಯ ಡಿಜಿಟಲ್ ಕಮ್ಯುನಿಕೇಷನ್ ತಂಡ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆಯೂ ಸಹ ಸೈಬರ್ ವಂಚಕರು ಜಯನಗರ ಸಂಚಾರಿ ಪೊಲೀಸ್, ವಿವೇಕನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಅಧಿಕೃತ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದರು. ಅಲ್ಲದೇ ಅಸಂಬದ್ಧ ಟ್ವೀಟ್ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು.

ಇದನ್ನೂ ಓದಿ: ಥಾಣೆ ಪೊಲೀಸ್ ವೆಬ್‌ಸೈಟ್ ಹ್ಯಾಕ್: ಭಾರತ ಸರ್ಕಾರದಿಂದ ಕ್ಷಮೆಯಾಚಿಸುವಂತೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.