ರಾಜ್ಯದಲ್ಲಿಂದು 310 ಮಂದಿಗೆ ಸೋಂಕು ದೃಢ: 06 ಜನ ಸಾವು

author img

By

Published : Oct 14, 2021, 6:53 PM IST

ರಾಜ್ಯದಲ್ಲಿಂದು 310 ಮಂದಿಗೆ ಸೋಂಕು ದೃಢ; 06 ಜನ ಸಾವು

ರಾಜ್ಯದಲ್ಲಿಂದು 310 ಜನರಿಗೆ ಕೊರೊನಾ ವಕ್ಕರಿಸಿದ್ದು, 6 ಜನರು ಸಾವಿಗೀಡಾಗಿದ್ದಾರೆ. ಹಾಗೆ ಬೆಂಗಳೂರು ನಗರದಲ್ಲಿ 148 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿಂದು 1,14,967 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 310 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,82,399 ಏರಿಕೆ ಆಗಿದೆ. ಇತ್ತ 347 ಮಂದಿ ಡಿಸ್ಜಾರ್ಜ್ ಆಗಿದ್ದು 29,34,870 ಗುಣಮುಖರಾಗಿದ್ದಾರೆ.

06 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,922 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 9,578 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.26 ರಷ್ಟಿದ್ದರೆ ಸಾವಿನ ಪ್ರಮಾಣ ಶೇ. 1.93 ರಷ್ಟಿದೆ.

ಇನ್ನು ರಾಜಧಾನಿಯಲ್ಲಿ 148 ಮಂದಿಗೆ ಸೋಂಕು ದೃಢಪಟ್ಟಿದ್ದು, 12,48,892 ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 82 ಜನರು ಗುಣಮುಖರಾಗಿದ್ದು, 12,26,049 ಡಿಸ್ಜಾರ್ಜ್ ಆಗಿದ್ದಾರೆ. 2 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,205 ಕ್ಕೆ ಏರಿಕೆ‌ ಆಗಿದೆ. ಸದ್ಯ ಸಕ್ರಿಯ 6637 ಪ್ರಕರಣಗಳು ಇವೆ.

ರೂಪಾಂತರಿ ಅಪ್​ಡೇಟ್
ಅಲ್ಫಾ- 155
ಬೇಟ- 08
ಡೆಲ್ಟಾ- 1653
ಡೆಲ್ಟಾ ಪ್ಲಸ್- 04
ಡೆಲ್ಟಾ ಸಬ್ ಲೈನ್ಏಜ್- 202
ಡೆಲ್ಟಾ ಸಬ್ ಲೈನ್ಏಜ್ AY.12H -14
ಕಪ್ಪಾ- 160
ಈಟಾ- 01

ETV Bharat Logo

Copyright © 2024 Ushodaya Enterprises Pvt. Ltd., All Rights Reserved.