ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ತೆರೆ: ₹170 ಕೋಟಿಯಷ್ಟು ಒಡಂಬಡಿಕೆ

author img

By

Published : Jan 22, 2023, 5:47 PM IST

International Cereals Festival concluded

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ 2023ಕ್ಕೆ ತೆರೆ- ಸಿಟಿ ಜನತೆಯಿಂದ ಉತ್ತಮ ಸ್ಪಂದನೆ - 170 ಕೋಟಿ ರೂಪಾಯಿ ಒಡಂಬಡಿಕೆ

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ತೆರೆ..

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ-2023ಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಡೆಯ ದಿನವಾದ ಇಂದು ಮೇಳಕ್ಕೆ ಜನಸಾಗರವೇ ಹರಿದುಬಂದಿತ್ತು. ಭರಾಟೆಯಿಂದ ಸಿರಿಧಾನ್ಯ ಖರೀದಿಸಿದ ಜನತೆ ಅಗತ್ಯ ಮಾಹಿತಿ ಪಡೆದುಕೊಂಡರು. ಸಿರಿಧಾನ್ಯ ಮೇಳಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ರಾಜ್ಯದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಇದಾಗಿದೆ. ಕಡೆಯ ದಿನವಾದ ಹಿನ್ನೆಲೆ ಅರಮನೆ ಮೈದಾನದ ತ್ರಿಪುರವಾಸಿನಿಗೆ ಜನಸಾಗರವೇ ಹರಿದುಬಂದಿತ್ತು. ರಾಜಧಾನಿ ಜನತೆ ಕುತೂಹಲದಿಂದ ಸಿರಿಧಾನ್ಯದ ಪ್ರದರ್ಶನ ವೀಕ್ಷಿಸಿತು. ಸಿರಿಧಾನ್ಯ ಉತ್ಪನ್ನಗಳ ಸವಿದು ಮೆಚ್ಚುಗೆ ವ್ಯಕ್ತಪಡಿಸಿತು. ಆರೋಗ್ಯದ ಬಗ್ಗೆ ಇತ್ತೀಚೆಗೆ ಹೆಚ್ಚಿನ ಕಾಳಜಿ ಬರುತ್ತಿರುವ ಹಿನ್ನೆಲೆೆ ಜನರು ಸಿರಿಧಾನ್ಯದ ಕಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಈ ಇಲಾಖೆಗಳ ಅಂಗ ಸಂಸ್ಥೆಗಳು, ಪ್ರಾದೇಶಿಕ ಸಾವಯವ ಕೃಷಿಕರ ಒಕ್ಕೂಟಗಳು, ರೈತ ಉತ್ಪಾದಕರ ಸಂಸ್ಥೆಗಳು, ನವೋದ್ಯಮಿಗಳು ಈ ಪೆವಿಲಿಯನ್​ನಲ್ಲಿ ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಮಾಹಿತಿಯನ್ನು ಒದಗಿಸಿರುತ್ತಾರೆ. ಈ ಪೆವಿಲಿಯನ್​​ನಲ್ಲಿ ಒಟ್ಟು 84 ಮಳಿಗೆಗಳಿದ್ದು ಸಾವಯವ ಮತ್ತು ಸಿರಿಧಾನ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿ ಸಾಧಿಸಿರುವ ಪ್ರಗತಿಯ ಮುನ್ನೋಟವನ್ನು ಪ್ರಚುರಪಡಿಸಿದರು.

ಜನರನ್ನು ಆಕರ್ಷಿಸುವಲ್ಲಿ ಯಶಸ್ವಿ: ಸಿರಿಧಾನ್ಯ ಆಧಾರಿತ ಬೇಕರಿ ಉತ್ಪನ್ನಗಳಾದ ನವಣೆ, ಮಸಾಲೆ, ಬ್ರೆಡ್, ರಾಗಿ ಬ್ರೆಡ್, ಪಿಜಾ, ಬರ್ಗರ್, ನೂಡಲ್ಸ್, ಪಾಸ್ತಾ, ವಿವಿಧ ಬಿಸ್ಕೆಟ್​​, ಚಕ್ಕುಲಿ, ಖಾರಸೇವ್ ಮುಂತಾದ ತಿಂಡಿ ತಿನಿಸುಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಯಾವುದೇ ಖಾಸಗಿ ಸಂಸ್ಥೆಗಳ ಉತ್ಪನ್ನಗಳಿಗೆ ಕಡಿಮೆ ಇಲ್ಲದಂತೆ ಸರಿಸಮನಾಗಿ ವಿಧ, ಪ್ಯಾಕಿಂಗ್ ವಿನ್ಯಾಸ ಹಾಗೂ ಮಾರಾಟ ಮಾದರಿಯಲ್ಲಿ ವಿವಿಧತೆಯೊಂದಿಗೆ ಮಾರುಕಟ್ಟೆ ಮಾಡುತ್ತಿದಾರೆ ಎಂದು ಮೇಳದಲ್ಲಿ ಭಾಗವಹಿಸಿದ ರೈತರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

₹170 ಕೋಟಿಯಷ್ಟು ಒಡಂಬಡಿಕೆ: ಬಿ2ಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) ಸಭೆಗಳು ಮೇಳದ ಭಾಗವಾಗಿ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಿಗೆ 100ಕ್ಕೂ ಅಧಿಕ ಮಾರುಕಟ್ಟೆದಾರರು ನೋಂದಾಯಿಸಿದ್ದರು. ಮೇಳದ ಮೊದಲನೇ ದಿನ 27 ಬಿ2ಬಿ ಸಭೆಗಳನ್ನು ನಡೆಸಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ₹35,39 ಕೋಟಿ ಮೊತ್ತದ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಮೇಳದ ಎರಡನೇ ದಿನ 86 ಸಭೆಗಳು ಆಯೋಜಿಸಲಾಗಿದ್ದು, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ 135 ಕೋಟಿಗಳಷ್ಟು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ 113 ಸಭೆಗಳು ಜರುಗಿದ್ದು, 170.39 ಕೋಟಿಗಳಷ್ಟು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಮೇಳಕ್ಕೆ ಆಗಮಿಸಿ ಮೇಳದ ಅನುಭವ ಪಡೆದ ರೈತ ಬಾಂಧವರು ತೃಪ್ತ ಭಾಬನೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿರಿಧಾನ ಮತ್ತು ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಉತ್ತಮ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಲು ಬಿ2ಬಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನ 48 ಸಾವಿರ ಜನರು ಮೇಳದಲ್ಲಿ ಭಾಗವಹಿಸಿದ್ದರೆ, ಎರಡನೇ ದಿನ 60 ಸಾವಿರ ಜನರು ಮೇಳಕ್ಕೆ ಆಗಮಿಸಿದ್ದರು.

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ 2023: ಸಿರಿಧಾನ್ಯ ಆರೋಗ್ಯವಂತ ಸಮಾಜದ ಆಧಾರ ಸ್ತಂಭ. ಇನ್ನು ರೈತರಿಗೆ ಮಾರುಕಟ್ಟೆ ಕಲ್ಪಿಸಲು, ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಜ.20ರಂದು ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ -2023 ರನ್ನು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸನಿಯಲ್ಲಿ ಕೃಷಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸಿರಿಧಾನ್ಯ ಮೇಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮನಸೆಳೆದ ಸಿರಿಧಾನ್ಯ ಮಾರಾಟ, ಬಹುವಿಧದ ಭಕ್ಷ್ಯ ಖಾದ್ಯದ ಮಳಿಗೆಗಳು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.