ಸಿಇಟಿ ಸೀಟು ಹಂಚಿಕೆಯಲ್ಲಿ ರಿಪೀಟರ್ಸ್​ಗಳ ಪಿಯುಸಿ ಅಂಕ ಪರಿಗಣನೆ: ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಸರ್ಕಾರದ ಮೇಲ್ಮನವಿ

author img

By

Published : Sep 13, 2022, 10:13 PM IST

ಹೈಕೋರ್ಟ್​ಗೆ ಸರ್ಕಾರ ಮೇಲ್ಮನವಿ

ಸಿಇಟಿ ಸೀಟು ಹಂಚಿಕೆಯಲ್ಲಿ ರಿಪೀಟರರ್ಸ್​​​ಗಳ ಪಿಯುಸಿ ಅಂಕ ಪರಿಗಣಿಸಲು ಸೂಚಿಸಿದ್ದ ಹೈಕೋರ್ಟ್​ ಏಕ ಸದಸ್ಯ ಪೀಠ. ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಸರ್ಕಾರ ಮೇಲ್ಮನವಿ.

ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್​ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಲು ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಸರ್ಕಾರ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಸಿಇಟಿ ಸೀಟು ಹಂಚಿಕೆಯಲ್ಲಿ ರಿಪೀಟರ್ಸ್​ಗಳ ಪಿಯುಸಿ ಅಂಕ ಪರಿಗಣನೆ: ಏಕಸದಸ್ಯ ಪೀಠದ ಆದೇಶದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ರ್ಯಾಂಕಿಂಗ್​ ಸಿಗುವುದಿಲ್ಲ. ಅಲ್ಲದೇ, ಕೊರೊನಾದಿಂದ ಪರೀಕ್ಷೆ ಇಲ್ಲದೇ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚು ನೆರವಾಗಲಿದೆ.

ಆದ್ದರಿಂದ ಏಕಸದಸ್ಯ ಪೀಠದ ಆದೇಶವನ್ನು ರದ್ದು ಪಡಿಸಬೇಕು. 2020-21ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಆದರೆ, ಅವರ ಅಂಕಗಳನ್ನು ಸಿಇಟಿಯಲ್ಲಿ ಪಡೆದುಕೊಂಡಲ್ಲಿ ಸಿಇಟಿಯಲ್ಲಿ ಹೆಚ್ಚು ರ್ಯಾಂಕ್​ ಸಿಗಲಿದೆ. ಇದರಿಂದ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗ ಆವರಿಸಿದ್ದ ಕಾರಣದಿಂದ 2020-21ನೇ ಸಾಲಿನಲ್ಲಿ ಪಿಯುಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳನ್ನು 2021-22ನೇ ಸಾಲಿನ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷ ಪ್ರಾಧಿಕಾರ(ಕೆಇಎ) ಟಿಪ್ಪಣಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈಶ್ವರ್​.ಆರ್​. ಸೇರಿ ಮತ್ತಿತರರು ಹೈಕೋರ್ಟ್​ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕೆಇಎ ಟಿಪ್ಪಣಿಯನ್ನು ರದ್ದು ಪಡಿಸಿತ್ತು. ಅಲ್ಲದೆ, ರಿಪೀಟರ್ಸ್​ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್​ ಈ ತೀರ್ಪಿನಲ್ಲಿ ತಿಳಿಸಿತ್ತು.

(ಇದನ್ನೂ ಓದಿ: ಸಿಇಟಿ ಸೀಟು ಹಂಚಿಕೆ: ರಿಪಿಟರ್ಸ್​ಗಳ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ತೀರ್ಪು, ರ‍್ಯಾಂಕ್​ ಲಿಸ್ಟ್​ನಲ್ಲಿ ಏರುಪೇರು..?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.