ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನ.27ಕ್ಕೆ ಮುಂದೂಡಿಕೆ

author img

By

Published : Nov 25, 2022, 2:19 PM IST

Updated : Nov 25, 2022, 3:56 PM IST

ಟಿಕೆಟ್ ಆಕಾಂಕ್ಷಿ ಶ್ರೀಶೈಲಪ್ಪ ಬಿದರೂರಿಗೆ  ಹೃದಯಾಘಾತ

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಗದಗ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರು: ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದು, ವರ್ತೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಗಳ ಸಭೆಯನ್ನು ನ.27ಕ್ಕೆ ಮುಂದೂಡಲಾಗಿದೆ.

ನಗರದ ಹೊರವಲಯದ ವರ್ತೂರು ರೆಸಾರ್ಟ್​​ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯಬೇಕಿತ್ತು. ಈ ಸಭೆಯಲ್ಲಿ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದ ಗದಗ ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರು ಭಾಗಿಯಾಗಿದ್ದರು. ಅವರು ರೋಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಇದನ್ನೂ ಓದಿ: ವ್ಯಕ್ತಿ ಅಲ್ಲ, ಪಕ್ಷ ಮುಖ್ಯ, ಯಾರೇ ಆದ್ರೂ ಒಬ್ಬರಿಗೆ ಒಂದೇ ಟಿಕೆಟ್: ಡಿ.ಕೆ ಶಿವಕುಮಾರ್

ಶ್ರೀಶೈಲಪ್ಪ ಬಿದರೂರು ರಾಜಕೀಯ ಜೀವನ:

  • 1994 – ವಿಧಾನಸಭಾ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಿಂದ ಜನತಾದಳ ಟಿಕೆಟ್ ಮೇಲೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ್ ವಿರುದ್ಧ ಗೆದ್ದರು.
  • 1999 – ಜನತಾದಳ ಇಬ್ಭಾಗವಾದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯಾಗಿ ರೋಣ ಮತಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಪರಾಭವಗೊಂಡರು.
  • 2005 - ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿ ಗದಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಬಿದರೂರು.
  • 2008 – ಗದಗ ವಿಧಾನಸಭಾ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಹೆಚ್.ಕೆ. ಪಾಟೀಲ ವಿರುದ್ಧ ಗೆಲುವು ಕಂಡರು.
  • 2012 - ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಕೆಜೆಪಿಗೆ ಬೆಂಬಲಿಸಿದ್ದ ಇವರು ಪುನಃ ತಮ್ಮ ನಡೆ ಬದಲಾಯಿಸಿ ಭಾರತೀಯ ಜನತಾ ಪಕ್ಷದಲ್ಲೇ ಮುಂದುವರೆದರು.
  • 2013 – ಗದಗ ವಿಧಾನಸಭಾ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 18,715 ಮತಗಳನ್ನು ಪಡೆದು ಹೆಚ್.ಕೆ. ಪಾಟೀಲ ವಿರುದ್ಧ ಸೋತರು.
  • ಪೂರ್ವಪರ ಜನತಾ ದಳ ಮುಖಾಂತರ ರಾಜಕಾರಣ ಪ್ರಾರಂಭಿಸಿ ನಂತರ ಜೆಡಿಎಸ್ ಪಕ್ಷ ಸೇರಿ, ತದನಂತರ ಬಿಜೆಪಿ ಸೇರ್ಪಡೆಗೊಂಡು 2008ರಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಶಾಸಕರಾಗಿ ನಂತರ 2018ರಲ್ಲಿ ಬಿಜೆಪಿ ಟಿಕೆಟ್​ ನಿರಾಕರಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
  • ಶ್ರೀಶೈಲಪ್ಪ ಬಿದರೂರು ಅವರು 15.11.2022ರಂದು ಗದಗ/ರೋಣ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು.
Last Updated :Nov 25, 2022, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.