ಎಫ್​ಕೆಸಿಸಿಐಯಿಂದ 17ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ

author img

By

Published : Sep 22, 2022, 7:15 AM IST

KN_BNG

ಎಫ್​ಕೆಸಿಸಿಐ ಸಂಸ್ಥೆಯಿಂದ 65 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಫ್ತು ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರು: ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ 17ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದಲ್ಲಿ ನಡೆಯಿತು. ರಾಡಿಸನ್ ಬ್ಲೂ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಫ್.ಕೆ.ಸಿ.ಸಿ.ಐ ಸಂಸ್ಥೆಯಿಂದ ಒಟ್ಟು 65 ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಚಿವ ಮುರುಗೇಶ್ ನಿರಾಣಿ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಫ್ತು ಶ್ರೇಷ್ಠ ಪ್ರಶಸ್ತಿ ಮೂಲಕ ರಫ್ತುದಾರರನ್ನು ಬೆಂಬಲಿಸುವ ಜೊತೆಗೆ ಉತ್ತೇಜಿಸುವ ಕೆಲಸವನ್ನು ಸಂಸ್ಥೆ ಕಳೆದ 17 ವರ್ಷದಿಂದ ನಡೆಸಿಕೊಂಡು ಬರುತ್ತಿದೆ. ಕೈಗಾರಿಕಾ ವಲಯದಲ್ಲಿ ಹಾಗೂ ರಫ್ತು ಕ್ಷೇತ್ರದಲ್ಲಿ ಸಾಧನೆಗೈದ ಕೈಗಾರಿಕೋದ್ಯಮಿಗಳನ್ನು ಸನ್ಮಾನಿಸಿದ್ದು ಸಂತಸವಾಗಿದೆ ಎಂದರು.

ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದ ಕೈಗಾರಿಕಾ ವಲಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಪ್ರಸಾದ್, ಒಟ್ಟು 65 ಸಾಧಕರಿಗಿಂದು ಪ್ರಶಸ್ತಿ ಪ್ರದಾನ ನೆಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಫ್‌.ಕೆ.ಸಿ.ಸಿ.ಐನ ಇತರ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: 74ನೇ ವಾರ್ಷಿಕ ಎಮ್ಮಿಸ್ 2022 ಪ್ರಶಸ್ತಿ ಪ್ರದಾನ: ವಿಜೇತರ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿ ಅಚ್ಚರಿಯಾದ ತಾರಾಬಳಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.