ಸಬ್​ಇನ್ಸ್​ಪೆಕ್ಟರ್​ ನೇಮಕಾತಿ ಅಕ್ರಮ: ತಲೆಮರೆಸಿಕೊಂಡಿರುವ ಪಿಎಸ್​ಐ ನವೀನ್​ಗಾಗಿ ಸಿಐಡಿ ಹುಡುಕಾಟ

author img

By

Published : Sep 9, 2022, 3:19 PM IST

ಪಿಎಸ್​ಐ ನವೀನ್

ಸಬ್​ಇನ್ಸ್​ಪೆಕ್ಟರ್​ ನೇಮಕಾತಿ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಲು ಸಿಐಡಿ ತಂಡ ಮುಂದಾಗಿದೆ.

ಬೆಂಗಳೂರು: ಸಬ್ ಇನ್ಸ್​ಪೆಕ್ಟರ್​ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪಿಎಸ್​ಐ ನವೀನ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಗಳನ್ನು ಸಿಐಡಿ ಬಂಧಿಸಲು ಮುಂದಾಗಿದೆ.

ಸಿಐಡಿ ತಂಡ ಎಲ್ಲ ಕಡೆ ಹುಡುಕಾಟ ನಡೆಸುತ್ತಿದೆ. ಈ ನಡುವೆ ನವೀನ್ ಮೊಬೈಲ್ ಬಳಸುತ್ತಿಲ್ಲ. ಸಂಬಂಧಿಗಳ ಮೇಲೂ ಕಣ್ಣಿಡಲಾಗಿದೆ. ಸಂಬಂಧಿಕರ ಚಲನವಲನ ಗಮನಿಸಲಾಗುತ್ತಿದೆ. ಪಿಎಸ್ಐ ನವೀನ್ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಇಲಾಖೆಯಲ್ಲಿ ಕಾನ್ಸ್​​ಟೇಬಲ್​ ಆಗಿದ್ದ ಅವರು ಬಳಿಕ ಅಕ್ರಮವಾಗಿ ಪಿಎಸ್​ಐ ಆಗಿ ಆಯ್ಕೆ ಆಗಿದ್ದರು. 545 ಪಿಎಸ್​ಐ ಅಕ್ರಮ ಪ್ರಕರಣ ಹೊರಬಂದ ಬಳಿಕ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವೀನ್ ಹಣ ಕೊಟ್ಟು ಅಕ್ರಮವಾಗಿ ಪಿಎಸ್​ಐ ಆಗಿ ಆಯ್ಕೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 545 ಪಿಎಸ್​ಐ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಸಾಥ್ ನೀಡಿದ್ದರು. ಈ ಹಿಂದೆ ಸಿಐಡಿ ತಂಡ ಬ್ಯಾಡರಹಳ್ಳಿ ಠಾಣೆಯ ಪಿ.ಎಸ್.ಐ ಆಗಿದ್ದ ಹರೀಶ್ ಎನ್ನುವವರನ್ನು ಬಂಧಿಸಿದ್ದರು. ಈಗ ನವೀನ್ ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಎಲ್ಲ ಆಯಾಮಗಳಲ್ಲೂ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮದ್ಯ ಹೈಕೋರ್ಟ್​ನಲ್ಲಿ ನವೀನ್ ನಿರೀಕ್ಷಣಾ ಜಾಮೀನು ವಜಾ ಮಾಡಿದೆ ಎಂದು ಮೂಲಗಳು ಹೇಳಿವೆ.

ಓದಿ: 20 ದಿನದ ಅವಧಿಯಲ್ಲಿ ಆನೆ ದಾಳಿಗೆ 2ನೇ ಬಲಿ: ಮಲೆನಾಡಿಗರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.