40 ಲಕ್ಷ ಬೆಲೆ ಬಾಳುವ ಬೈಕ್​ಗಳೊಂದಿಗೆ ಐವರು ಕಳ್ಳರ ಬಂಧನ: ಪೊಲೀಸರನ್ನು ಶ್ಲಾಘಿಸಿದ ಎಸ್ಪಿ

author img

By

Published : Sep 13, 2022, 9:40 PM IST

kn_bng_02_

ದುಬಾರಿ ಬೆಲೆಯ ಬೈಕ್​ಗಳ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್: ಮನೆ ಮುಂದೆ‌ ನಿಲ್ಲಿಸಿದ್ದ ದುಬಾರಿ ಬೆಲೆಯ ರಾಯಲ್ ಎನ್​​ಫೀಲ್ಡ್​​ ಬುಲೆಟ್ ಬೈಕ್ ಸೇರಿದಂತೆ ಐಷಾರಾಮಿ ಬೈಕ್​ಗಳನ್ನು ಕದ್ದಿದ್ದ ಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿ 25 ಐಷಾರಾಮಿ ಬೈಕ್​ಗಳ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಹೊಸೂರಿನ ಪ್ರಕಾಶ್ ರಾಜ್, ಗೋಪಿ, ನವೀನ್ ಕುಮಾರ್ ಹಾಗೂ ಆನೇಕಲ್ ತಾಲೂಕಿನ ನಂದೀಶ, ಹೊಸಕೋಟೆಯ ಮಹಮದ್ ಶಾಹಿದ್ ಬಂಧಿತ ಆರೋಪಿಗಳು. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಹ್ಯಾಂಡಲ್ ಮುರಿದು ವಾಹನಗಳನ್ನು ಕದಿಯುತ್ತಿದ್ದ ಆರೋಪಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದರಿಂದ ಬೇಸರಗೊಂಡ ಬೈಕ್​ ಮಾಲೀಕರು ಪೊಲೀಸರಿಗೆ ಹಿಡಿ ಶಾಪ ಹಾಕಿದ್ದರು.

ಇದನ್ನು ಮನಗಂಡ ಸರ್ಜಾಪುರ ಇನ್ಸ್​​ಪೆಕ್ಟರ್​ ತಮ್ಮ ಸಿಬ್ಬಂದಿ ಎಸ್ಐ ದುಂಡಪ್ಪ ಬಾರ್ಕಿ, ಪ್ರಭು, ಸಂತೋಷ್, ಓರ್ವ ಮಹಿಳಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದ ವೇಳೆ ಆರೋಪಿಗಳು ಹಂದೇನಹಳ್ಳಿ ಕ್ರಾಸ್ ಬಳಿ ನಿಂತು ಲಾಂಗು ಮಚ್ಚು ಹಿಡಿದು ದರೋಡೆ ಮಾಡಲು ಯತ್ನಿಸುತ್ತಿದ್ದಾಗ ಪೋಲೀಸರ ತಂಡ ಆರೋಪಿಗಳ ಮೇಲೆ ದಾಳಿ ನಡೆಸಿದೆ.

ಬಳಿಕ ಐವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಬೈಕ್​ ಕದ್ದಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ರಾತ್ರಿ ಸಮಯದಲ್ಲಿ ಬೈಕ್​ಗಳನ್ನು ಕದ್ದ ನಂಬರ್ ಪ್ಲೇಟ್ ಬದಲಿಸಿ, ನಕಲಿ ಡಾಕ್ಯಮೆಂಟ್​ ತಯಾರಿಸಿ ಕಡಿಮೆ ದುಡ್ಡಿಗೆ ಬೈಕ್​ಗಳ ಮಾರಾಟ ಮಾಡುತ್ತಿರವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳು ಸರ್ಜಾಪುರ, ಮಾಲೂರು, ಹೊಸಕೋಟೆ, ಹೊಸೂರು, ಸೂರ್ಯಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಬೈಕ್​ಗಳನ್ನು ಕದ್ದಿರವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಶ್ಲಾಘಿಸಿ ಬಹುಮಾನ ನೀಡಿದ್ದಾರೆ.

ಇದನ್ನೂ ಓದಿ:ಗೋವಾ ಮದ್ಯ ಅಕ್ರಮ ಸಾಗಾಟ: ಕಾರು ಬಿಟ್ಟು ಪರಾರಿಯಾದ ಚಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.