23 ಕೆರೆಗಳನ್ನು ನುಂಗಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ..

author img

By

Published : Sep 16, 2022, 4:57 PM IST

Bangalore Development Authority

23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪ ಹೇಳಿದ್ದ ಬಿಡಿಎ ಕೆರೆಯನ್ನು ಸಂಪೂರ್ಣ ಮುಚ್ಚಿಹಾಕಿತ್ತು ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರು: ಮಳೆಯ ಅನಾಹುತ ಬಳಿಕ ಒಂದೊಂದು ಆತಂಕಕಾರಿ ವಿಚಾರ ಬೆಳಕಿಗೆ ಬರುತ್ತಿದ್ದು, ಇದೀಗ ಸ್ವತಃ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಹಲವು ಕೆರೆಗಳನ್ನು ನುಂಗಿರುವ ಮಾಹಿತಿ ಹೊರಬಿದ್ದಿದೆ.

ಕೆರೆಗಳ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಒತ್ತುವರಿಗೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ನೀರು ಹರಿವಿನ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿಹಾಕಿ ರಸ್ತೆಗಳ ಮೇಲೆ ನೀರು ಹರಿಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳಿಗೆ ಮಣ್ಣು ತುಂಬಿದ್ದ ಬಿಡಿಎ ಅದರ ಮೇಲೆ ಬಡಾವಣೆ ನಿರ್ಮಿಸಿ, 3,530 ನಿವೇಶನಗಳನ್ನು ನಿರ್ಮಿಸಿದೆ. ಈ ಸಂಬಂಧ ಸರ್ಕಾರಕ್ಕೆ ಬಿಡಿಎ ಬರೆದಿರುವ ಪತ್ರವು ಇದೀಗ ಬಹಿರಂಗವಾಗಿದೆ. 23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪ ಹೇಳಿದ್ದ ಬಿಡಿಎ ಕೆರೆಯನ್ನು ಸಂಪೂರ್ಣ ಮುಚ್ಚಿಹಾಕಿತ್ತು ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

1985ರಲ್ಲಿ ನಡೆದ ಲಕ್ಷ್ಮಣ ರಾವ್ ಸಮಿತಿ ನೆಡೆಸಿದ್ದ ಕೆರೆಗಳ ಸರ್ವೇ: 1985ರಲ್ಲಿ ನಡೆದ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇಗಳ ವರದಿಯ ಆಧಾರದ ಮೇರೆಗೆ ಬಡಾವಣೆ ನಿರ್ಮಿಸಲಾಗಿದೆ. ಇದೀಗ ಈ ಕೆರೆಗಳಿದ್ದ ಭಾಗದಲ್ಲಿ ಸಣ್ಣ ಮಳೆಗೂ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಆದರೆ, ಅಂದಿನ ಸರ್ಕಾರ ಬಿಡಿಎ ಸಲ್ಲಿಸಿದ ಮನವಿಗೆ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ.‌ ಹೀಗಾಗಿ ಸದ್ಯ ಈ 23 ಕೆರೆಗಳ ಮೇಲೆ ತಲೆ ಎತ್ತಿರುವ ಬಡಾವಣೆಗಳು ಅಕ್ರಮ ಎನ್ನಲಾಗಿದೆ.

ಮುಚ್ಚಲಾಗಿರುವ ಕೆರೆಗಳು : ನಾಗಸಂದ್ರ ಚೆನ್ನಮ್ಮಕೆರೆ (328 ನಿವೇಶನ), ತಿಪ್ಪಸಂದ್ರ ಕೆರೆ 3ನೇ ಹಂತ (234 ನಿವೇಶನ), ತಿಪ್ಪಸಂದ್ರ ಕೆರೆ 2ನೇ ಹಂತ (13 ನಿವೇಶನ), ಅಗರ ಕೆರೆ (113 ನಿವೇಶನ), ಎಳ್ಳುಕುಂಟೆ ಕೆರೆ (161 ನಿವೇಶನ), ಕಾಚರಕನಹಳ್ಳಿ ಕೆರೆ (126 ನಿವೇಶನ), ಹುಳಿಮಾವುಕೆರೆ (153 ನಿವೇಶನ), ವೆಂಕಟರಾಯನಕೆರೆ (130 ನಿವೇಶನ), ನಾಗರಬಾವಿ ಕೆರೆ (37 ನಿವೇಶನ), ಚಳ್ಳಕೆರೆ (71 ನಿವೇಶನ), ದೊಮ್ಮಲೂರು ಕೆರೆ (10 ನಿವೇಶನ), ಮೇಸ್ತ್ರಿ ಪಾಳ್ಯ ಕೆರೆ (23 ನಿವೇಶನ), ಬೆನ್ನಿಗಾನಹಳ್ಳಿ ಕೆರೆ (18 ನಿವೇಶನ), ಹೆಣ್ಣೂರು ಕೆರೆ (434 ನಿವೇಶನ) ತಲಘಟ್ಟಪುರ ಕೆರೆ (94 ನಿವೇಶನ), ಕೇತಮಾರನಹಳ್ಳಿ ಕೆರೆ (230 ನಿವೇಶನ), ಮಂಗನಹಳ್ಳಿ ಕೆರೆ (27 ನಿವೇಶನ), ಗೆದ್ದಲಹಳ್ಳಿ ಕೆರೆ (126 ನಿವೇಶನ), ಚಿಕ್ಕಮಾರನಹಳ್ಳಿ ಕೆರೆ (115 ನಿವೇಶನ), ಬಾಣಸವಾಡಿ ಕೆರೆ (67 ನಿವೇಶನ), ಚನ್ನಸಂದ್ರ ಕೆರೆ (222 ನಿವೇಶನ), ಶಿನಿವಾಗಿಲು ಅಮಾನಿಕೆರೆ (486 ನಿವೇಶನ), ಬಿಳೇಕಹಳ್ಳಿ ಕೆರೆ (312 ನಿವೇಶನ).

ಇದನ್ನೂ ಓದಿ: ರಾಜಕಾಲುವೆ ಒತ್ತುವರಿ: ವಿಚಾರಣೆ ಮುಂದೂಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.