ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆ ಪ್ರಾರಂಭ: ನಿಮ್ಮ ಮನೆ ಬಾಗಿಲಿಗೆ ಆಧಾರ್ ಸೇವೆ!

author img

By

Published : Jan 25, 2023, 7:15 PM IST

Aadhaar on wheels service launched in Bengaluru

ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆ ಪ್ರಾರಂಭಿಸಿದ ಕೊಟಕ್ ಮಹೀಂದ್ರಾ ಬ್ಯಾಂಕ್ - ಸಂಚಾರಿ ಆಧಾರ್ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಆಧಾರ್ ಆನ್ ವೀಲ್ಸ್.

ಬೆಂಗಳೂರು: ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆಯನ್ನು ಪ್ರಾರಂಭಿಸಿದೆ. ಇದು, ಒಂದು ಸಂಚಾರಿ ಆಧಾರ್ ಸೇವಾ ಕೇಂದ್ರವಾಗಿದ್ದು ಹಿರಿಯ ನಾಗರಿಕರೂ ಒಳಗೊಂಡಂತೆ, ವಿಶೇಷ ಚೇತನರು, ಮತ್ತು ಗರ್ಭಿಣಿಯರು ಹಾಗೂ ಇತರ ನಾಗರಿಕರಿಗೆ ಸುಲಭವಾಗಿ ಆಧಾರ್ ಸೇವೆಗಳನ್ನು ಒದಗಿಸುತ್ತದೆ.

ಆಧಾರ್ ಆನ್ ವೀಲ್ಸ್, ಆಧಾರ್‌ಗೆ ನೋಂದಣಿ ಮತ್ತು ಆಧಾರ್ ವಿವರಗಳ ನವೀಕರಣ ಮುಂತಾದ ಸಾಂಪ್ರದಾಯಿಕ ಆಧಾರ್ ಸೇವಾ ಕೇಂದ್ರವು ಒದಗಿಸುವ ಎಲ್ಲ ಪ್ರಮುಖ ಸೇವೆಗಳನ್ನೂ ಒದಗಿಸುತ್ತದೆ ಮತ್ತು ಇವೆಲ್ಲವೂ ನಗರದಲ್ಲಿ ವಾಸಿಸುತ್ತಿರುವ ನಾಗರಿಕರ ಮನೆಬಾಗಿಲಲ್ಲೇ ಲಭ್ಯವಾಗಲಿದೆ. ಈ ಸೇವೆ ನೀಡಲು ಬ್ಯಾಂಕ್ ಭಾರತದ ವಿಶಿಷ್ಟ ಗುರುತಿನ ಚೀಟಿಯ ಪ್ರಾಧಿಕಾರ(Unique Identification Authority of India)ದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದೆ. ಸೇವೆ ನೀಡುವ ಸಂಚಾರಿ ವಾಹನಗಳನ್ನು ಆಧಾರ್ ಆಪರೇಟರ್ ಮತ್ತು ಬ್ಯಾಂಕ್ ಸಿಬ್ಬಂದಿ ನಿರ್ವಹಿಸುತ್ತಾರೆ.

ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಧಾರ್ ಆನ್ ವೀಲ್ಸ್ ಅನ್ನು UIDAIನ ಆರ್​ಒ ಬೆಂಗಳೂರು ವಿಭಾಗದ ಉಪ ಮಹಾನಿರ್ದೇಶಕ ಅನೂಪ್ ಕುಮಾರ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಿ.ನ ಜಂಟಿ ಅಧ್ಯಕ್ಷ ಹೇಮಲ್ ವಕೀಲ್ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂಚಾರಿ ವ್ಯಾನ್ ನಗರದ ಪರಿಮಿತಿಯೊಳಗೆ ಕಾರ್ಯಾಚರಣೆ ನಡೆಸಲಿದ್ದು, ನಿವಾಸಗಳು, ಸೊಸೈಟಿಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಕಾರ್ಪೊರೇಟ್ ಕಚೇರಿಗಳು ಮುಂತಾದ ಸ್ಥಳಗಳಲ್ಲಿ ಸೇವೆಗಳನ್ನು ಒದಗಿಸಲಿದೆ. ಈ ಸೇವೆಯು ಆಯ್ದ ರಜಾದಿನಗಳಂದೂ ಕೂಡ ಲಭ್ಯವಿರಲಿದೆ.

ಇನ್ನೂ 10 ನಗರಗಳಿಗೆ ವಿಸ್ತರಿಸುವ ಗುರಿ:ಈ ರೀತಿಯ ವ್ಯಾನನ್ನು ಪುಣೆಯಲ್ಲಿ ಡಿಸಂಬರ್ 2021ರಲ್ಲಿ ಪರಿಚಯಿಸಲಾಗಿತ್ತು. ಮುಂದಿನ 12 ತಿಂಗಳುಗಳಲ್ಲಿ ಇದಕ್ಕೆ ದೊರೆತ ಧನಾತ್ಮಕ ಸ್ಪಂದನೆಯಿಂದ ಪ್ರೇರೇಪಿತಗೊಂಡು, ಬ್ಯಾಂಕ್ ದೇಶಾದ್ಯಂತ 20 ನಗರಗಳಲ್ಲಿ ಆಧಾರ್ ಆನ್ ವೀಲ್ಸ್ ಅನ್ನು ಪರಿಚಯಿಸಲಾಗಿತ್ತು. ಇದಲ್ಲದೇ, ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ 10 ನಗರಗಳಿಗೆ ಇದನ್ನು ವಿಸ್ತರಿಸುವ ಗುರಿಯನ್ನು ಬ್ಯಾಂಕ್​ ಹೊಂದಿದೆ. ಹೆಚ್ಚುವರಿಯಾಗಿ, ಆಧಾರ್​ ದಾಖಲಾತಿ ಮತ್ತು ನವೀಕರಣ ಸಂಬಂಧಿತ ಸೇವೆಗಳನ್ನು ದೇಶಾದ್ಯಂತ ಇರುವ ಕೊಟಕ್ ಮಹೀಂದ್ರಾ ಬ್ಯಾಂಕ್​ನ 120ಕ್ಕಿಂತ ಹೆಚ್ಚಿನ ಶಾಖೆಗಳಲ್ಲೂ ಪಡೆದುಕೊಳ್ಳಬಹುದು.

ಕೊಟಕ್ ಮಹೀಂದ್ರಾ ಬ್ಯಾಂಕ್​ನ “ಆಧಾರ್ ಆನ್ ವೀಲ್ಸ್” ಕಾರ್ಯಾಚರಣೆಯಲ್ಲಿರುವ ನಗರಗಳ ಪಟ್ಟಿ: ಮುಂಬೈ, ಪುಣೆ, ದೆಹಲಿ, ನಾಗ್ಪುರ, ಚೆನ್ನೈ, ಥಾಣೆ ,ಕೋಲ್ಕತ್ತಾ, ನಾಶಿಕ್, ಹೈದರಾಬಾದ್, ಕಾನ್ಪುರ, ಅಹಮದಾಬಾದ್, ಸೂರತ್, ಇಂದೋರ್, ಜೈಪುರ, ಲಕ್ನೌ , ನೋಯ್ಡ, ವಿಶಾಖಪಟ್ಟಣ, ಗುರುಗ್ರಾಮ, ವಡೋದರ, ಬೆಂಗಳೂರು ಸೇರಿವೆ.

ನಗರದ ನಿವಾಸಿಗಳು, ಅದರಲ್ಲೂ ನಿರ್ದಿಷ್ಟವಾಗಿ ಹಿರಿಯ ನಾಗರಿಕರು, ವಿಶೇಷ ಸಾಮರ್ಥ್ಯವುಳ್ಳವರು ಮುಂತಾದವರಿಗೆ ಸೇವೆ ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೇ ಇದು 5 ವರ್ಷ ವಯಸ್ಸು ಮತ್ತು 15 ವರ್ಷ ವಯಸ್ಸು ದಾಟುವ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್‌ ಅನ್ನು ನವೀಕರಿಸಲು ಮತ್ತು 10 ವರ್ಷಗಳ ಆಧಾರ್ ಪೂರೈಸಿದ ನಂತರ, ನಿವಾಸಿಗಳ ದಾಖಲೆಯನ್ನು ನವೀಕರಿಸುವುದಕ್ಕೂ ಇದು ನೆರವಾಗಲಿದೆ.

ಇದನ್ನೂ ಓದಿ:ಏರೋ ಇಂಡಿಯಾ 2023: ನಾಗರೀಕ ಸೌಲಭ್ಯ ಕಲ್ಪಿಸಲು ಬಿಬಿಎಂಪಿಯಿಂದ ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.