Covid Report : ರಾಜ್ಯದಲ್ಲಿಂದು 254 ಮಂದಿ ಪಾಸಿಟಿವ್‌, ಸೋಂಕಿನಿಂದ ಮೂವರು ಸಾವು

author img

By

Published : Nov 24, 2021, 7:06 PM IST

karnataka corona report

ರಾಜ್ಯದಲ್ಲಿಂದು 254 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ..

ಬೆಂಗಳೂರು : ರಾಜ್ಯದಲ್ಲಿಂದು 65,371 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 254 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,94,255ಕ್ಕೆ ಏರಿಕೆ ಆಗಿದೆ.

ಇಂದು 546 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 29,49,629 ಮಂದಿ ಗುಣಮುಖರಾಗಿದ್ದಾರೆ. ಮೂವರು ಮಂದಿ ಮೃತಪಡುವ ಮೂಲಕ ಸಾವಿನ ಸಂಖ್ಯೆ 38,185ಕ್ಕೆ ಏರಿದೆ. ಸದ್ಯ 6,412 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರ ಪ್ರಮಾಣವು ಶೇ.0.38 ಹಾಗೂ ಸಾವಿನ ಪ್ರಮಾಣ ಶೇ.1.18ರಷ್ಟಿದೆ. ಇಂದು 5,462 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 964 ಪ್ರಯಾಣಿಕರು ಯುಕೆಯಿಂದ ಬಂದಿದ್ದಾರೆ.

ಬೆಂಗಳೂರು ಕೋವಿಡ್ ​: ರಾಜಧಾನಿ ಬೆಂಗಳೂರಿನಲ್ಲಿ 152 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,55,440ಕ್ಕೆ ತಲುಪಿದೆ. 464 ಜನರು ಗುಣಮುಖರಾಗಿದ್ದಾರೆ. 12,33,996 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,326 ಇದೆ. 5,117 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪಡೇಟ್:

ಅಲ್ಫಾ - 155
ಬೀಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01

ಇದನ್ನೂ ಓದಿ: 'ದುನಿಯಾ ಋಣ'ದಲ್ಲಿ ಬೆಣ್ಣೆ ನಗರಿಯ ಕುಟುಂಬ.. ಮದುವೆಗೆ ನಟ ವಿಜಯ್​ ಬರುವಂತೆ ಪಟ್ಟು ಹಿಡಿದ ವಧು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.