ಬೆಳ್ಳಂಬೆಳಗ್ಗೆ ವಾಹನ ಸವಾರರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು : 200 ವಾಹನಗಳು ಸೀಜ್....

author img

By

Published : Jan 15, 2022, 12:40 PM IST

Vehicles seized by Bengaluru police, Vehicles seized by Bengaluru police in Weekend curfew,  Bengaluru police news, ವೀಕ್​ ಎಂಡ್​ ಕರ್ಫ್ಯೂ ಹಿನ್ನೆಲೆ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ವಾಹನಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು, ಬೆಂಗಳೂರು ಪೊಲೀಸ್​ ಸುದ್ದಿ,

ಪಶ್ಚಿಮ ವಿಭಾಗದಲ್ಲಿ 103 ದ್ವಿಚಕ್ರ ವಾಹನಗಳು, 10 ಆಟೋಗಳು, 8 ಕಾರುಗಳು ಸೇರಿ 131 ವಾಹನ ಸೀಜ್ ಆಗಿವೆ. ಉತ್ತರ ವಿಭಾಗದಲ್ಲಿ 17 ಟೂ ವ್ಹೀಲರ್ ಸೀಜ್ ಮಾಡಿ‌ ಕೇಸ್ ಬುಕ್ ಮಾಡಲಾಗಿದೆ..

ಬೆಂಗಳೂರು : ರಾಜಧಾನಿಯಲ್ಲಿ ವೀಕೆಂಡ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸುಖಾಸುಮ್ಮನೆ ಹೊರಗೆ ಬಂದ ವಾಹನಗಳನ್ನು ಸೀಜ್ ಮಾಡಿ ಕೇಸ್ ಬುಕ್ ಮಾಡಿದ್ದಾರೆ.‌ ಬೆಳಗ್ಗೆ 6ರಿಂದ 10ಗಂಟೆಯ ಸಮಯದಲ್ಲಿಯೇ ಸುಮಾರು 200 ವಾಹನಗಳನ್ನ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌

200 ವಾಹನಗಳನ್ನ ಸೀಜ್ ಮಾಡಿದ ಪೊಲೀಸರು..

ಪಶ್ಚಿಮ ವಿಭಾಗದಲ್ಲಿ 103 ದ್ವಿಚಕ್ರ ವಾಹನಗಳು, 10 ಆಟೋಗಳು, 8 ಕಾರುಗಳು ಸೇರಿ 131 ವಾಹನ ಸೀಜ್ ಆಗಿವೆ. ಉತ್ತರ ವಿಭಾಗದಲ್ಲಿ 17 ಟೂ ವ್ಹೀಲರ್ ಸೀಜ್ ಮಾಡಿ‌ ಕೇಸ್ ಬುಕ್ ಮಾಡಲಾಗಿದೆ.

ರಸ್ತೆಗೆ ಇಳಿಯುತ್ತಿರುವವರ ಒಂದೊಂದು ಕಾರಣ ಕೇಳಿ ಪೊಲೀಸರಿಗೆ ಸಾಕಾಗಿದೆ. ಸದ್ಯ ಸಂಜೆ ವೇಳೆಗೆ ಈ ವಾಹನಗಳ ಸಂಖ್ಯೆ ದುಪ್ಪಟ್ಟಾಗುವ ಎಲ್ಲ ಸಾಧ್ಯತೆಗಳಿವೆ.

ಓದಿ: Weekend Curfew: ಅನಗತ್ಯವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸುತ್ತಿರುವ ಹುಬ್ಬಳ್ಳಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.