ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು

author img

By

Published : Nov 3, 2022, 10:54 AM IST

two children drown in krishi pond

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಸ್ತೇನಹಳ್ಳಿ ಗ್ರಾಮದ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಬೆಂಗಳೂರು: ಶಾಲೆ ಮುಗಿಸಿ ಮನೆಗೆ ಆಗಮಿಸುತ್ತಿದ್ದಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕಳೆದ ಶನಿವಾರ ಮಾಸ್ತೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಚೇತನ್ (12) ಮತ್ತು ಕುಮಾರ್ ಎಂಬುವರ ಮಗ ಜಗದೀಶ್ (12) ಮೃತ ವಿದ್ಯಾರ್ಥಿಗಳು. ಹೆನ್ನಾಗರ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಬಾಲಕರು, ಆಟವಾಡಲು ತೆರಳಿದ್ದು ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ಪ್ರಕರಣ ಕುರಿತು ಮಾಹಿತಿ ನೀಡಿದ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ

ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ಸಾವು

ಹೆನ್ನಾಗರ ದಿಣ್ಣೆ (ಹೆಚ್ ಹೊಸಹಳ್ಳಿ) ಯಲ್ಲಮ್ಮ ದೇವಿ ದೇವಾಲಯದ ಸಮೀಪವಿರುವ ವಸಂತ್ ಮತ್ತು ಚಂದ್ರಿಕಾ ಎಂಬುವರ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದ ಸುತ್ತ ಬೇಲಿ ಹಾಕಿರಬೇಕು ಮತ್ತು ಗಾಳಿ ತುಂಬಿದ ಟ್ಯೂಬ್​ಗಳನ್ನು ನೀರಿನಲ್ಲಿ ಹಾಕಿರಬೇಕೆಂಬ ನಿಯಮವಿದ್ದರೂ ಜಮೀನಿನ ಮಾಲೀಕ ವಸಂತ್ ನಿರ್ಲಕ್ಷ್ಯ ವಹಿಸಿರುವುದೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು : ಸಿಎಂ ಭರವಸೆ

ಬೆಳಗಾವಿ ಮೂಲದಿಂದ ಕೂಲಿಗೆಂದು ಬಂದಿದ್ದ ಈ ಇಬ್ಬರು ಬಾಲಕರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡದೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಹೆಚ್ ಹೊಸಹಳ್ಳಿ ಯುವಕ ವೃಂದ ಈ ಕುರಿತಾದ ವಿಡಿಯೋಗಳನ್ನು ಮಾಧ್ಯಮಕ್ಕೆ ರವಾನಿಸಿದ ಬೆನ್ನಲ್ಲೇ ಎಚ್ಚೆತ್ತ ಸೂರ್ಯನಗರ ಪೊಲೀಸ್ ಇನ್ಸ್​ಪೆಕ್ಟರ್ ರಾಘವೇಂದ್ರ, ದೂರು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.