ಭೀಕರ ರಸ್ತೆ ಅಪಘಾತ: ಹಾರ್ಮೋನಿಯಂ ಮಾಸ್ಟರ್ ಕೃಷ್ಣರಾವ್ ನಿಧನ

author img

By

Published : Sep 3, 2021, 2:01 PM IST

ಹಾರ್ಮೋನಿಯಂ ಮಾಸ್ಟರ್ ಕೃಷ್ಣರಾವ್

ಭೀಕರ ರಸ್ತೆ ಅಪಘಾತದಲ್ಲಿ ಹಾರ್ಮೋನಿಯಂ ಕಲಾವಿದ ಕೃಷ್ಣರಾವ್​​ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರ: ಹಲವು ದೇಶಗಳಲ್ಲಿ ಹಾರ್ಮೋನಿಯಂ ಪ್ರದರ್ಶನ ನೀಡಿರುವ ಕಲಾವಿದ ಹಾರ್ಮೋನಿಯಂ ಕೃಷ್ಣರಾವ್ (84) ಇಂದು ಡಿ ಕ್ರಾಸ್​ನಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ನಂದಿಗೊಳ್ಳದ ನಿವಾಸಿ ಕೃಷ್ಣರಾವ್ ಮೃತಪಟ್ಟಿದ್ದಾರೆ. ಘಟನೆ ನಂತರ ಟ್ರಕ್​ ಸ್ಥಳದಲ್ಲೇ ಬಿಟ್ಟು, ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು: ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ..ವ್ಯಕ್ತಿಗೆ ಚಾಕು ಇರಿತ

ಕೃಷ್ಣರಾವ್, ನೂರಾರು ನಾಟಕಗಳಿಗೆ ಹಾರ್ಮೋನಿಯಂ ನುಡಿಸಿದ್ದಾರೆ. 14ಕ್ಕೂ ಹೆಚ್ಚು ದೇಶಗಳಲ್ಲಿ ಹಾರ್ಮೋನಿಯಂ ಕಲೆಯ ಪ್ರದರ್ಶನ ನೀಡಿದ್ದಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.