ದೊಡ್ಡಬಳ್ಳಾಪುರ: ರೆವಿನ್ಯೂ ಇನ್ಸ್​ಪೆಕ್ಟರ್ ಮೇಲೆ ಎಸಿಬಿ ದಾಳಿ, 2 ಕೋಟಿ 25 ಲಕ್ಷ ಅಕ್ರಮ ಆಸ್ತಿ ಪತ್ತೆ

author img

By

Published : Nov 24, 2021, 9:57 PM IST

Updated : Nov 24, 2021, 10:33 PM IST

inspector-n-lakshmi-narasimhayya

ದೊಡ್ಡಬಳ್ಳಾಪುರದ ತೇರಿನಬೀದಿಯ ಅರಳು ಮಲ್ಲಿಗೆ ಶಾಲೆಯ ಮುಂಭಾಗದ ಎನ್.ಲಕ್ಷ್ಮಿನರಸಿಂಹಯ್ಯ ನಿವಾಸದ ಮೇಲೆ ಇಂದು ಬೆಳಗ್ಗೆ 6:30ರ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದರು. ಒಟ್ಟು 12 ಗಂಟೆ ನಡೆದ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯಲ್ಲಿ 2 ಕೋಟಿ 25 ಲಕ್ಷ 90 ಸಾವಿರದ 647 ರೂಪಾಯಿ ಪತ್ತೆಯಾಗಿದೆ.

ದೊಡ್ಡಬಳ್ಳಾಪುರ: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಕಸಬಾ ರೆವಿನ್ಯೂ ಇನ್ಸ್​ಪೆಕ್ಟರ್ ಎನ್. ಲಕ್ಷ್ಮಿನರಸಿಂಹಯ್ಯ ನಿವಾಸದ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 12 ಗಂಟೆಗಳ ವಿಚಾರಣೆ ನಂತರ 2 ಕೋಟಿ 25 ಲಕ್ಷ ಮೌಲ್ಯದ ನಿವೇಶನ ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ದೊಡ್ಡಬಳ್ಳಾಪುರದ ತೇರಿನಬೀದಿಯ ಅರಳು ಮಲ್ಲಿಗೆ ಶಾಲೆಯ ಮುಂಭಾಗದ ಎನ್.ಲಕ್ಷ್ಮಿನರಸಿಂಹಯ್ಯ ನಿವಾಸದ ಮೇಲೆ ಇಂದು ಬೆಳಗ್ಗೆ 6:30ರ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದರು. ಒಟ್ಟು 12 ಗಂಟೆ ನಡೆದ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯಲ್ಲಿ 2 ಕೋಟಿ 25 ಲಕ್ಷ 90 ಸಾವಿರದ 647 ರೂಪಾಯಿ ಪತ್ತೆಯಾಗಿದೆ.

ಎಸಿಬಿ ದಾಳಿಯ ಬಗ್ಗೆ ರೆವಿನ್ಯೂ ಇನ್ಸ್​ಪೆಕ್ಟರ್ ಎನ್.ಲಕ್ಷ್ಮಿನರಸಿಂಹಯ್ಯ ಮಾತನಾಡಿದರು

ಇದರಲ್ಲಿ 1 ಕೋಟಿ 65 ಲಕ್ಷದ 4 ಮನೆ, 2 ನಿವೇಶನ, 16 ಲಕ್ಷ 28 ಸಾವಿರ ಮೌಲ್ಯದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, 5 ಲಕ್ಷ 88 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು, 31 ಲಕ್ಷ 84 ಸಾವಿರ ಮೌಲ್ಯದ 756 ಗ್ರಾಂ ಚಿನ್ನಾಭರಣ, 6 ಲಕ್ಷ 90 ಸಾವಿರ 647 ಮೌಲ್ಯದ 15 ಕೆ.ಜಿ ಬೆಳ್ಳಿ ಸಾಮಗ್ರಿ ಪತ್ತೆಯಾಗಿದೆ. ಅಂತಿಮವಾಗಿ ಪಂಚನಾಮೆ ಮಾಡಿಕೊಂಡು ಹೊರಟ ಅಧಿಕಾರಿಗಳು ಕೆಲವು ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ರೆವಿನ್ಯೂ ಇನ್ಸ್​ಪೆಕ್ಟರ್ ಲಕ್ಷ್ಮಿನರಸಿಂಹಯ್ಯ, 'ಬೆಳಗ್ಗೆ 6:30ರ ಸಮಯದಲ್ಲಿ ಎಸಿಬಿ ಅಧಿಕಾರಿಗಳು ಮನೆಯ ಬಳಿ ಬಂದು ಸರ್ಚ್​ ವಾರಂಟ್​ ಬಂದಿದೆ ಎಂಬುದಾಗಿ ತೋರಿಸಿದರು. ಅನಂತರ ನಾನು ಅವರನ್ನು ಮನೆಯೊಳಗೆ ಕರೆದೆ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಅಲ್ಲದೇ, ನನ್ನ ಬಳಿಯಿದ್ದ ಎಲ್ಲ ದಾಖಲಾತಿಗಳನ್ನು ತೋರಿಸಿದ್ದೇನೆ. ಅದರಂತೆ ಅವರು ಪರಿಶೀಲನೆ ನಡೆಸಿದ್ದಾರೆ. ಮುಂದೆ ನೋಟಿಸ್​ ಕಳುಹಿಸುತ್ತೇವೆ. ಆಗ ವಿಚಾರಣೆಗೆ ಬರಬೇಕು ಎಂದಿದ್ದಾರೆ' ಎಂದು ತಿಳಿಸಿದರು.

ಇದನ್ನೂ ಓದಿ: ಕಳವು ಮಾಡಿದ ಕಲಾಕೃತಿಗಳ ಆನ್​​ಲೈನ್ ಹರಾಜು.. ಮೈಸೂರಲ್ಲಿ ಆರೋಪಿಗಳ ಬಂಧನ..

Last Updated :Nov 24, 2021, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.