ಸ್ಪೀಡ್​ ಬ್ರೇಕರ್ ಬಳಿ ಎಗರಿದ ಬೈಕ್​: ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಲಾರಿ

author img

By

Published : Aug 30, 2021, 1:21 PM IST

doddaballapura

ರಸ್ತೆಯ ಉಬ್ಬಿನಲ್ಲಿ ಬೈಕ್​ ಚಲಿಸುವಾಗ ಎಗರಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಲಾರಿ ಆಕೆಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ದೊಡ್ಡಬಳ್ಳಾಪುರ: ಕೆಲಸಕ್ಕೆಂದು ಸ್ನೇಹಿತರ ಬೈಕ್​ನಲ್ಲಿ ಹೋಗುತ್ತಿದ್ದಾಗ ಸ್ಪೀಡ್​ ಬ್ರೇಕರ್​ (ಹಂಪ್​) ಬಳಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದೆ. ಪರಿಣಾಮ, ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಮಾಕಳಿ ರೈಲ್ವೆ ನಿಲ್ದಾಣ ಸಮೀಪದ ಬೆಂಗಳೂರು - ಹಿಂದೂಪುರ ರಸ್ತೆಯ ತಿರುವಿನಲ್ಲಿ ನಡೆದಿದೆ.

ಹಿಂದೂಪುರ ನಿವಾಸಿ ನಾಗಮಣಿ (28) ಮೃತರು. ಸ್ವಗ್ರಾಮದಿಂದ ಸಹೋದರನ ಮಿತ್ರನೊಂದಿಗೆ ದೊಡ್ಡಬಳ್ಳಾಪುರ ಸಮೀಪದ ಕಾರ್ಖಾನೆಗೆ ಕೆಲಸಕ್ಕೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯ ಉಬ್ಬಿನಲ್ಲಿ ಬೈಕ್​ ಚಲಿಸುವಾಗ ಎಗರಿದ್ದು, ಹಿಂಬದಿ ಕುಳಿತಿದ್ದ ನಾಗಮಣಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ. ಇನ್ನು ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.