ದೌರ್ಜನ್ಯ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿನಿಯರಿಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ

author img

By

Published : Oct 7, 2021, 12:29 PM IST

student-police-cadet-training-for-students-in-bagalkot

ದೌರ್ಜನ್ಯ ವಿರುದ್ಧ ಧ್ವನಿ ಎತ್ತುವಂತೆ ವಿದ್ಯಾರ್ಥಿನಿಯರಿಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಿಂದಲೂ ತರಬೇತಿ ಮುಂದುವರಿದಿದೆ.

ಬಾಗಲಕೋಟೆ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯರಿಗೆ ಆತ್ಮಸ್ಥೈರ್ಯ ಮೂಡಿಸುವ ಜೊತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ ನಡೆಯುತ್ತಿದೆ.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರತಿ ಶನಿವಾರ 8 ಹಾಗೂ 9ನೇ ತರಗತಿ ವಿದ್ಯಾರ್ಥಿನಿಯರಿಗೆ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎನ್​​​ಸಿಸಿ ಮಾದರಿಯಲ್ಲಿಯೇ ತರಬೇತಿ ನೀಡುತ್ತಿದ್ದಾರೆ.

ದೌರ್ಜನ್ಯ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿನಿಯರಿಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ

ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಿಂದಲೂ ತರಬೇತಿ ಮುಂದುವರಿದಿದೆ. ಜಿಲ್ಲೆಯ 7 ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಅದರಲ್ಲಿ 40 ವಿದ್ಯಾರ್ಥಿಗಳ ಬ್ಯಾಚ್ ಮಾಡಿ ಒಂದೊಂದು ಬ್ಯಾಚ್​​ಗೆ ತರಬೇತಿ ನೀಡಲಾಗುತ್ತಿದೆ. ಕೇವಲ ವಿದ್ಯಾರ್ಥಿನಿಯರು ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಸಹ ತರಬೇತಿ ನೀಡಲಾಗುತ್ತಿದೆ.

ತರಬೇತಿ ವೇಳೆ ಆತ್ಮರಕ್ಷಣೆ ಮಾಡಿಕೊಳ್ಳುವ ಬಗೆ ಹಾಗೂ ದೌರ್ಜನ್ಯ ವಿರುದ್ಧ ತಕ್ಷಣದ ಪ್ರತಿಕ್ರಿಯೆ ಕುರಿತಂತೆ ಜೊತೆಗೆ ಈ ವೇಳೆ ಕರಾಟೆ, ಯೋಗ, ಕ್ರೀಡಾ ಚಟುವಟಿಕೆಗಳ ಕುರಿತು ತರಬೇತಿ ನಡೆಯುತ್ತಿದೆ. ಈ ವೇಳೆ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ಕಚೇರಿ, ಅಗ್ನಿ ಶಾಮಕ ದಳ, ಆಸ್ಪತ್ರೆಗಳು ಹಾಗೂ ಇತರ ಕಚೇರಿಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಇಲಾಖೆಗಳ ಕುರಿತಂತೆಯೂ ಮಾಹಿತಿ ನೀಡುತ್ತಾರೆ.

ವಿದ್ಯಾರ್ಥಿನಿ ನೇತ್ರಾ ಗಂಗೂರ ಮಾತನಾಡಿ, 'ಪೊಲೀಸ್ ಇಲಾಖೆಯೊಳಗೆ ಏನಿದೆ, ಏನಿಲ್ಲ ಎಂಬುದೇ ನಮಗೆ ತಿಳಿದಿರಲಿಲ್ಲ. ಈಗ ನಮನ್ನು ಕರೆದುಕೊಂಡು ಹೋಗಿ ಎಲ್ಲವನ್ನೂ ವಿವರಿಸಿದ್ದಾರೆ. ನಾವು ಪ್ರತಿವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಸ್ಟೇಡಿಯಂನಲ್ಲಿ ಪ್ರದರ್ಶನ ಮಾಡಿ ಪ್ರಶಸ್ತಿಗಳನ್ನು ಪಡೆದಿದ್ದೇವೆ' ಎಂದರು

ಶಾಲೆಯ ಶಿಕ್ಷಕ ನಬಿಸಲೀಂ ಪ್ರತಿಕ್ರಿಯಿಸಿ, 'ಆರು ವರ್ಷದಿಂದಲೂ ಈ ತರಬೇತಿ ನಡೆಯುತ್ತಿದೆ. ಪ್ರತಿ ಶನಿವಾರ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ಬರುತ್ತಾರೆ. ರಾಷ್ಡ್ರೀಯ ಏಕತೆ, ಶಿಸ್ತು ಸೇರಿ ಇತರೆ ವಿಷಯಗಳ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಈ ಎಸ್​​ಪಿಸಿಯಿಂದ ಮಕ್ಕಳಲ್ಲಿ ಶಿಸ್ತು, ಏಕತೆ ಬೆಳೆಯುತ್ತಿದೆ. ಜಿಲ್ಲೆಯ ಹಲವು ಕಡೆ ಈ ತರಬೇತಿ ನೀಡುತ್ತಿದ್ದೇವೆ' ಎಂದು ಹೇಳಿದರು.

ಇದನ್ನೂ ಓದಿ: ಬಾಗಲಕೋಟೆ: ಈಜಲು ಹೋಗಿ ಇಬ್ಬರು ಬಾಲಕರು ಮೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.