ಶಾಲಾ ಕೊಠಡಿ ಮೇಲೆ ರೈಲು ಬೋಗಿಯ ಚಿತ್ತಾರ: ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಬಾಗಲಕೋಟೆಯ ಸರ್ಕಾರಿ ಶಾಲೆ

author img

By

Published : Oct 1, 2021, 8:30 PM IST

Updated : Oct 1, 2021, 10:05 PM IST

ಬಾಗಲಕೋಟೆಯ ಸರ್ಕಾರಿ ಶಾಲೆ

ಬಾಗಲಕೋಟೆ ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4 ಈಗ ಇಡೀ ಜಿಲ್ಲೆಯ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಶಾಲಾ ಕೊಠಡಿಗೆ ಮಾಡಲಾಗಿರುವ ಪೇಂಟಿಂಗ್.

ಬಾಗಲಕೋಟೆ: ನೋಡುವುದಕ್ಕೆ ಥೇಟ್ ರೈಲು ಬೋಗಿಯಂತೆ ಕಾಣುವ ಈ ಶಾಲಾ ಕೊಠಡಿ ಸಿದ್ಧವಾಗಿರುವುದು ಬಾಗಲಕೋಟೆ ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ. ನಗರದ ಪೇಂಟ್​ ಮಾಲೀಕ ಅಶೋಕ ಜಾಲವಾದಿ ಅವರ ಪರಿಶ್ರಮದಿಂದ ಅತ್ಯಂತ ಆಕರ್ಷಕವಾಗಿ ಕಾಣುತ್ತಿರುವ ಈ ಶಾಲಾ ಕೊಠಡಿ ಮಕ್ಕಳನ್ನು ಸೆಳೆಯುವ ಪ್ರಮುಖ ಕೇಂದ್ರಬಿಂದುವಾಗಿದೆ.

ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಬಾಗಲಕೋಟೆಯ ಸರ್ಕಾರಿ ಶಾಲೆ

ಹೀಗೆ ಉದ್ದವಾದ ರೈಲಿನ ಆಕಾರದಲ್ಲಿರುವ ಸರ್ಕಾರಿ ಶಾಲೆ. ಶಾಲೆಯ ಪಕ್ಕದಲ್ಲೇ ನಿಂತಿರುವ ಬಸ್​​​ನಂತೆ ಕಾಣುವ ಮತ್ತೊಂದು ಕೊಠಡಿ. ಇವುಗಳ ಮಧ್ಯೆ ಆಕರ್ಷಣೆಯಾಗುತ್ತಿರುವ ಮೆಟ್ರೋ ರೈಲಿನ ಕಟ್ಟಡ. ಈ ರೀತಿ ದೃಶ್ಯ ಕಂಡು ಬಂದಿದ್ದು, ಬಾಗಲಕೋಟೆಯ ಸರ್ಕಾರಿ ಶಾಲೆಯಲ್ಲಿ.

ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ ಕಲರ್ ಫುಲ್​​ ಆಗಿ ಪೇಂಟಿಂಗ್ ಮಾಡಲಾಗಿದೆ. ಇಡೀ ಶಾಲೆಯ ತರಗತಿಗಳನ್ನು ರೈಲು, ಬಸ್​ ಮತ್ತು ಮೆಟ್ರೋ ಆಕಾರದಲ್ಲಿ ಪೇಂಟಿಂಗ್ ಮಾಡಲಾಗಿದೆ. ಮಕ್ಕಳು ತರಗತಿಗೆ ಹೋದರೆ ಸಾಕು ರೈಲು ಬೋಗಿಯೊಳಗೆ ಹೋದಂತೆ ಭಾಸವಾಗುತ್ತದೆ. ಒಂದೆಡೆ ಇಂಜಿನ್,​ ಮತ್ತೊಂದೆಡೆ ಭೋಗಿಗಳು, ಬಾಗಿಲು, ಕಿಟಕಿಗಳು ಮತ್ತು ಕಂಪೌಂಡ್​ ಮೇಲಿರುವ ಕಲಿಕೆ ಪೇಂಟಿಂಗ್​ ವರ್ಣರಂಜಿತವಾಗಿ ಕಾಣ ಸಿಗುತ್ತವೆ. ಹೀಗಾಗಿ ಈ ಶಾಲೆಗೆ ಕೋವಿಡ್​​ ಮಧ್ಯೆಯೂ ಈ ಬಾರಿ 1ನೇ ತರಗತಿಗೆ 60ಕ್ಕೂ ದಾಖಲಾಗಿದ್ದು, ಒಟ್ಟು 260ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ನಗರದ ಪೇಂಟ್​ ಮಾಲೀಕ ಅಶೋಕ ಜಾಲವಾದಿ ಎಂಬುವವರು ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮೊತ್ತದ ಪೇಂಟ್​​ ಕೊಡಿಸಿದ್ದಾರೆ. ಸರ್ಕಾರಿ ಶಾಲೆಯನ್ನು ತುಂಬಾ ಸುಂದರವಾಗಿ ಬದಲಾವಣೆ ಮಾಡಿದ್ದಾರೆ. ಅಲ್ಲದೇ ಶಿವಾನಂದ ಎಂಬುವವರು ಕನ್ನಡ ಶಾಲೆಗಳ ಉಳಿವಿಗಾಗಿ 7 ಶಾಲೆಗಳಿಗೆ ಬಣ್ಣ ಹಚ್ಚಿಕೊಡುತ್ತಿದ್ದಾರೆ. ಒಂದೆಡೆ ಶಾಲೆಗೆ ಬಣ್ಣದ ವೈಭವ ಮತ್ತೊಂದೆಡೆ ಶಿಕ್ಷಣ ಪ್ರೇಮಿಯೊಬ್ಬರ ಸಾಮಾಜಿಕ ಸೇವೆ ಕನ್ನಡ ಶಾಲೆಗೆ ಹೆಚ್ಚು ಮಕ್ಕಳ ಪ್ರವೇಶಕ್ಕೆ ಕಾರಣವಾಗಿದೆ.

ಶಾಲೆಯ ಮುಖ್ಯೋಪಾಧ್ಯಯ ಸಂಗಮೇಶ ಅವರು ತಮ್ಮ ಮಗಳಿಗೆ ಸರ್ಕಾರಿ ಕೋಟಾದಡಿ ಎಂಬಿಬಿಎಸ್​ ಸೀಟ್​ ಸಿಕ್ಕ ಖುಷಿಗಾಗಿ ಈ ಶಾಲೆಗೆ 60 ಸಾವಿರ ರೂ.ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಶಾಲೆಯ ಶಿಕ್ಷಕರು, ಕೆಲ ದಾನಿಗಳು ಸಹಾಯ ಮಾಡಿದ್ದಾರೆ. ನಗರ ಸಭೆ ಸದಸ್ಯೆ ಸರಸ್ವತಿ ಕುರುಬರ ಸೇರಿದಂತೆ ‌ಇತರರು ಸೇರಿಕೊಂಡು ಇಂತಹ ಅಭಿವೃದ್ದಿ ಕಾರ್ಯಗಳಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ಒಟ್ಟಿನಲ್ಲಿ ಬಾಗಲಕೋಟೆಯ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ನಂ.4ರಲ್ಲಿ ಮಾಡಿದ ಪೇಂಟಿಂಗ್ ಕಾರ್ಯ ಮಕ್ಕಳನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದಾಗಿದೆ.

Last Updated :Oct 1, 2021, 10:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.