ಬೀರಲಿಂಗೇಶ್ವರನ ಗದ್ದುಗೆ ಕಾಯಿಗೆ ಬಂಪರ್​​​​.. ₹6.50 ಲಕ್ಷಕ್ಕೆ ಹರಾಜು ಕೂಗಿದ ಭಕ್ತ..

author img

By

Published : Sep 11, 2021, 2:30 PM IST

devotee-who-bids-temple-coconut-for-6-dot-50-lacks-at-bagalkote

ಈ ಮೊದಲು ಈ ಗದ್ದುಗೆ ಕಾಯಿಗೆ ಸಾವಿರಾರು ರೂಪಾಯಿವರೆಗೂ ಹರಾಜು ಕೂಗಿ ಭಕ್ತರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ 6, 50,000 ರೂಪಾಯಿಗೆ ಹರಾಜು ಕೂಗಿರುವುದು ದಾಖಲೆ ಬರೆದಿದೆ..

ಬಾಗಲಕೋಟೆ : ಬೀರಲಿಂಗೇಶ್ವರ ದೇವರ ಗದ್ದುಗೆ ತೆಂಗಿನ ಕಾಯಿಯನ್ನ ಭಕ್ತರೊಬ್ಬರು ದಾಖಲೆ ಬೆಲೆಗೆ ಹರಾಜು ಕೂಗಿ ಹೊಸ ಇತಿಹಾಸ ಬರೆದಿದ್ದಾರೆ. ತಿಂಗಳಿನಿಂದ ಗದ್ದುಗೆಯಲ್ಲಿದ್ದ ಕಾಯಿಯನ್ನ ಜಾತ್ರೆ ಹಿನ್ನೆಲೆ ಹರಾಜು ಕೂಗಲಾಗುತ್ತದೆ. ಈ ಹರಾಜಿನಲ್ಲಿ ತಿಕೋಟಾ ಮೂಲದ ಮಹಾವೀರ್ ಎಂಬುವರು ಬರೋಬ್ಬರಿ 6.50 ಲಕ್ಷ ರೂಪಾಯಿಗೆ ಹರಾಜು ಕೂಗಿ ಅಚ್ಚರಿ ಮೂಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಜಾತ್ರೆಯಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆಯ ಬಳಿಕ ದೇವರ ಬಳಿ ಇಟ್ಟಿರುವ ಕಾಯಿಗೆ ಹರಾಜು ಕೂಗಲಾಗುತ್ತದೆ.

ಈ ಮೊದಲು ಈ ಗದ್ದುಗೆ ಕಾಯಿಗೆ ಸಾವಿರಾರು ರೂಪಾಯಿವರೆಗೂ ಹರಾಜು ಕೂಗಿ ಭಕ್ತರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ 6, 50,000 ರೂಪಾಯಿಗೆ ಹರಾಜು ಕೂಗಿರುವುದು ದಾಖಲೆ ಬರೆದಿದೆ.

ಓದಿ: ಆಸ್ಪತ್ರೆಯಲ್ಲಿರುವ ಆಸ್ಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.